ಕವಿತೆ
ಇಲ್ಲಿ
ಮುತ್ತು ಬಳ್ಳಾ ಕಮತಪುರ
ಇಲ್ಲಿ ರೋಗಕ್ಕೂ
ಧರ್ಮದ ಟಚ್ ಕೊಡುತ್ತಾರೆ
ಪ್ರಶ್ನೆಸುವಂತಿಲ್ಲ ಸುಮ್ಮನೆ
ಜಾಗಟೆ ಹೊಡೆಯಬೇಕು..
ಆಸ್ಪತ್ರೆಗಳು ಉಳ್ಳವರಿಗೆ ಇಲ್ಲಿ
ಎಲ್ಲವೂ ವಸಿಲಿ ಭಾಜಿಗೆ ಮನೆ
ಹಾಕುತ್ತಾರೆ ಏಕೆ ಎಂದೂ
ಪ್ರಶ್ನೆಸುವಂತಿಲ್ಲ..?
ಇಲ್ಲಿ ಬೆಡ್ಗೂ ಬ್ರೇಡಗೂ ಪಾಲಿ
ಹಚ್ಚಬೇಕು ಏಕೆಂದರೆ ಅವರಿಗೆ
ಹಸಿದವರ ನೋವು ಅವರಿಗೆ
ಹಸಿಬಿಸಿಯಾಗಿ ಕಾಣುತ್ತದೆ…!
ಇಲ್ಲಿ ಸಾವಿಗೂ ರಶೀದಿ
ಪಡೆಯಬೇಕು…..!
ಮಣ್ಣಾಗುವದಕ್ಕೂ
ಕಾಯಬೇಕು,ಎದೆಯ ಮೇಲಿನ
ಹೂ ಬಾಡುವವರೆಗೂ..!
ಚಿತೆಗೆ ಕಟ್ಟಿಗೆ ಸಿಗುವವರೆಗೂ…
ಶವ ಸಂಸ್ಕಾರಕ್ಕೂ
ಜಾತಿ ಧರ್ಮದ ಬಣ್ಣ
ಎಲ್ಲವೂ ಪ್ರಚಾರದ ಸಾಮಗ್ರಿ
ಆದರೆ ಪ್ರಶ್ನೆಸುವಂತಿಲ್ಲ..?
ಇಲ್ಲಿ ಬೆಂಕಿಯಲಿ ಅರಳಿ
ನಿಂತ ಕುಸುಮಗಳು ಇವೆ …..!
ಅಮಲಿನ ಲವಣ ಹಾಕದಿರು
ಇದು ಒಂದೇ ಕೊನೆಗೆ ನಾ
ಕೇಳುವ ಆತ್ಮದ ಪ್ರಶ್ನೆ…?
******************************