ಹನಿಗವನಗಳು

ಹನಿಗವನಗಳು

ಯಮುನಾ.ಕಂಬಾರ

Sky, Clouds, Cumulonimbus, Thunderstorm

೧)ಕಾರ್ಮೋಡ

ಕರಿ ಕಪ್ಪು ಹೃದಯಗಳು
ಕಾರುವುದೇ – ಕಾರಿರುಳ ಕಾರ್ಮೋಡ
ಪ್ಯಾಲೆಸ್ತೇನ – ಇಸ್ರೇಲ ಈಗ
ಬಿಟ್ಟಿರುವುದೇ- ಅದೇ ಮೋಡ !!

೨) ದ್ರಾಕ್ಷಿ

ದ್ರಾಕ್ಷಿ ಬಳ್ಳಿಯ ಬೆನ್ನಿಗೆ
ಅದೆಷ್ಟು ಕಳೆಬಳ್ಳಿಗಳ ಸುತ್ತುಗಳು
ಸುತ್ತಿ ಸುತ್ತಿ ಹಿಂಸೆ ಕೊಟ್ಟು ಕಾಲೆಳೆಯುತ್ತವೆ –
“ಬೇಡ …,ನೀ, ಎತ್ತರಕ್ಕೇರಬೇಡಾ ” ಎಂದು
” ವಾಣಿಜ್ಯ ,ಅನ್ನ ,ಆರೋಗ್ಯ ಅಂತಾ
ಆದರ್ಶ ಇಟ್ಟುಕೊಂಡ ದ್ರಾಕ್ಷಿ
ವಿನಂತಿಸುತ್ತಿದೆ : ಸುಮ್ಮನೇ ಶಕ್ತಿ ಚೆಲ್ಲುವ ಮೊದಲು ನನ್ನ ಉತ್ತಮ ಹಣ್ಣು ತಿಂದು ಆನಂದಿಸಲಿ ” ಎಂಬ ಧ್ಯೇಯ ನಂದು.
“ಅನುಗ್ರಹಿಸು…. ಕರುಣೆ , ಬಂದು
ಅದುವೇ ಆನೇ ಬಲ ಈ ಪರೋಪಕಾರ ಯಜ್ನಕೆ “ನಿಂದು.

೩) ಚೂರಿ – ಪರೋಪಕಾರ

ಬೆನ್ನಿಗೆ ಚೂರಿ ಹಾಕಿಸಿಕೊಂಡ
ಮರ
ಕ್ಷಣ ಕಾಲ ನರಳಿತು ಕರಕರ !!
ಹಣ್ಣುಕೊಡೋ ಹುಮ್ಮಸ್ಸಿನಲ್ಲಿ
ಮುನ್ನುಗ್ಗಿತು ಮರ –
ಎಲ್ಲ ಮರೆತು ದಡ ದಡ..!!
ಪರೋಪಕಾರದ ನಸೆಯೇ ಆಯಿತು
ಇಂಜೆಕ್ಷನ್ ಗುಳಿಗಳು
ವೈದ್ಯಕೀಯ ತರ !!

೪) ಕೋಲ್ಮಿಂಚು

ಕಾರ್ಮೋಡ ಬೀಗುತ್ತದೆ
ತಾನು ಹಬ್ಬಿದ
ಪರಿ ,ಅವಕಾಶಗಳ ತಬ್ಬಿಕೊಂಡು ಒಂದು ಕ್ಷಣ !
‘ಸಳ್ ! ‘ ಎಂಬ ಕೋಲ್ಮಿಂಚೊಂದು
ಫಳಿಸಿದಾಗ
ಮೋಡದ ಮುಖ ಬಾಡಿತು
ತನ್ನ ಅಹಂ ಕರಗಿತಲ್ಲಾ ಎಂದು !!

೫) ಪ್ರಾರ್ಥನೆ

ಬೆಳ್ಳಿ ಮೋಡದ ತೇಜ ,
ಬೆಳಕು ಕಂಡ ಕಾರ್ಮೋಡ
ಕರುಬಿತು ‘ಕರಕರ ‘
ಕೂಡಲೇ
ಆಕ್ರಮಿಸಿತು
ಬೆಳ್ಳಿಮೋಡದ ಬೆನ್ನಿಗೆ ‘ ಭರಭರ’
ಶಾಂತಿ ,ಪ್ರೀತಿ , ಸಹನೆ
ರಾಗದ ಬೆಳ್ಳಿಮೋಡ ಪ್ರಾರ್ಥಿಸಿತು
” ದೇವಾ ಕರುಣಿಸು , ನನ್ನ ಕೈ ಕಪ್ಪಾಗದಿರಲಿ …..!!!! ” ಎಂದು’ ಥರ ಥರ ‘ ….!!

****************

Leave a Reply

Back To Top