ಅನೂಹ್ಯ.
ಕವಿತೆ ಅನೂಹ್ಯ. ಅಬ್ಳಿ, ಹೆಗಡೆ ಮೈಮೇಲೆ ಬೇಸಿಗೆಯ ಬಿಸಿಲಕೆಂಡದ ಮಳೆ ಸುರಿಯುತ್ತಿದ್ದರೂಸ್ವಲ್ಪವೂ ವಿಚಲಿತವಾಗದೇ..ಎದೆ ತುಂಬ ಕಾಲ್ತುಳಿತದಸಣ್ಣಪುಟ್ಟ ರಕ್ತ ಸಿಕ್ತಗಾಯಗಳನ್ನೂ ಲೆಕ್ಕಿಸದೇ….ಅಂಗಾತ ಮಲಗಿರುವ ನನ್ನನೆಚ್ಚಿನ ಕಾಲು ಹಾದಿ ನನಗಾಗಿನನಗಷ್ಟೇ ನಾನೇ ನಿರ್ಮಿಸಿಕೊಂಡಿದ್ದು ಸರಳ,ಸುಂದರಗುರಿ ತಲುಪಲಷ್ಟೇ..!ಭಾರೀ ವಾಹನಗಳೋಡಾಡುವಗಟ್ಟಿಮುಟ್ಟಾದ ದಾಂಬರುರಸ್ತೆ ಇದಲ್ಲ.ವಿಲಾಸಿ,ದುಬಾರಿಕಾರುಗಳೋಡಾಡುವಮಿರಿ,ಮಿರಿ ಮಿಂಚುವರಾಜ ಮಾರ್ಗವೂ ಇದಲ್ಲ.ಜನ ನಿಬಿಡ ರಸ್ತೆಯಂತೂಇದಲ್ಲವೇ ಅಲ್ಲ.ಯಾವಾಗಲೋ ಅಪರೂಪಕ್ಕೊಮ್ಮೆನನ್ನೊಟ್ಟಿಗೆನನ್ನವರೆಂದು ಕೊಂಡವರ,ಅಥವಾ ನನ್ನವರೆಂದುಕೊಂಡುಸಿದ್ಧ ಪ್ರಸಿದ್ಧರೊಟ್ಟಗೆನಡೆವಾಗ..ಅವರ ಚಪ್ಪಲಿಯಧರ್ಪದ ಪದಾಘಾತಕ್ಕೆಆದ,ಕಾಲ ಕ್ರಮೇಣ ಮಾಯಬಹುದಾದ ಸಣ್ಣ,ಪುಟ್ಟಗಾಯಗಳಿದ್ದರೂ ನಿರಾತಂಕವಾಗಿ,ನೋವ ಸಹಿಸಿ,ಗಮ್ಯದೆಡೆ ತಲುಪಿಸುವಧ್ಯೇಯದೊಡನೆ ಅಂಗಾತಮಲಗಿ ನಿಟ್ಟುಸಿರು ಬಿಡುತ್ತಿರುವನನ್ನ ಅಚ್ಚುಮೆಚ್ಚಿನ ಸುಂದರಕಾಲು ಹಾದಿಯ ಮಧ್ಯೆಇದ್ದಕ್ಕಿದ್ದಂತೆ…ಗೋಚರಿಸಿತೊಂದುಪಾತರಗಿತ್ತಿಯ ಹೆಣ.ಸುತ್ತ ತಿನ್ನಲು ಮುಗಿಬಿದ್ದಕಟ್ಟಿರುವೆಗಳ […]
ಹನಿಗಳು
ಹನಿಗಳು ಸುವಿಧಾ ಹಡಿನಬಾಳ ೧) ಮೌನ ಮಾತಾಗುವ ವೇಳೆನೀ ಹೋದೆ ದೂರಎದೆಯಂತರಾಳದಲಿನೆನಪು ಬಲು ಭಾರ ೨) ಮಗು ನಿನಗೆ ಕೋಪಮಹಾ ಶತ್ರುವಂತೆಅದಕೆ ನಿನ್ನ ಮನಉರಿವ ಕುಲುಮೆಯಂತೆ ೩) ಬೆಕ್ಕೊಂದು ಕಣ್ಣು ಮುಚ್ಚಿಹಾಲು ಕುಡಿವಂತೆಸುತ್ತೆಲ್ಲ ಅವ್ಯವಹಾರಅನಾಚಾರನಡೆಯುತಿಹುದಂತೆ ೪) ನನ್ನ ಒಲವಿನ ಕವಿತೆನೀನೆಲ್ಲಿ ಅವಿತು ನಿಂತೆನಕ್ಷತ್ರವನೆಣಿಸುತ ಕುಳಿತೆಬಂದೆ ಮತ್ತೆ ಬೆಳಕಿನಂತೆ ೫) ಎದೆಯ ಗೂಡೆಂಬಗುಬ್ಬಚ್ಚಿ ಗೂಡಲ್ಲಿಬಚ್ಚಿಟ್ಟ ನನ್ನ ಪ್ರೀತಿ ಹಕ್ಕಿಗೆನೀ ಒತ್ತಿದ ಮುತ್ತಿನ ಮೊಹರುಹಾರಲು ಕಲಿಸಿದ ಹಾಗೆ ೬) ಬಡತನ ನಿವಾರಣೆಗೆಂದುಹತ್ತಾರು ಯೋಜನೆವೋಟ್ ಬ್ಯಾಂಕ್ ರಾಜಕಾರಣದಿಂದಖಾಲಿ ಸರ್ಕಾರದ ಖಜಾನೆ ೭) […]
ಬದಲಾಗುತ್ತ ಹೋದ ಅವಳ ದೇವರು
ಬದಲಾಗುತ್ತ ಹೋದ ಅವಳ ದೇವರು ಎಂ. ಆರ್. ಅನಸೂಯ ಅವಳು ಏಳೆಂಟು ವರ್ಷದವಳಿದ್ದಾಗ ಅಮ್ಮ ಹೇಳಿದ್ದು ಕೇಳಿದಾಗ ದೇವರೆಂದರೆ ಭಕ್ತಿಯಿಂದ ಕೇಳಿದರೆ ಸಾಕು ಕೇಳಿದ್ದನ್ನೆಲ್ಲಾ ಕೊಡುವಂಥಾ ಸರ್ವಶಕ್ತನೆಂಬ ನಂಬಿಕೆ. ತಾಯಿಯ ಕೈ ಹಿಡಿದು ನಡೆವ ಮಗುವಿನ ನಂಬಿಕೆ, ಮಳೆ ಬರುವುದೆಂದು ಬೀಜ ಬಿತ್ತನೆ ಮಾಡುವ ರೈತನ ನಂಬಿಕೆ ದೇವರ ಪ್ರಸಾದವೆಂದು ಕಣ್ಣಿಗೊತ್ತಿಕೊಂಡು ತಿನ್ನುವಂಥ ಭಕ್ತರ ನಂಬಿಕೆ. ಭಕ್ತಿಯೆಂದರೆ ಹೇಗಿರಬೇಕು ಎಂಬುದಕ್ಕೆ ಅಮ್ಮನ ಮಾತೇ ವೇದವಾಕ್ಯ.ದಾಸವಾಳ ಹಾಗೂ ಗಿಡದ ಮೇಲೆ ಮೊಸರು ಚೆಲ್ಲಿದಂತೆ ಮೈತುಂಬ ಹೂ ಬಿಟ್ಟ ನಂದಿ […]
ಆಗ_ಈಗ
ಪದಗಳಲ್ಲಿ ಬಿಚ್ಚಿಡುತ್ತಾಳೆ
ಮೌನದಲೆ ಹೇಳಿಬಿಡುತ್ತಾಳೆ
ಶಬ್ದಗಳಲ್ಲಿ ಮಾತಾಗುತ್ತಾಳೆ
ಹಗುರಾಗುತ್ತಾಳೆ ಭಾವ ಪ್ರಸವದಲಿ
ಕೇಂದ್ರ ಕೃಷಿ ಕಾಯ್ದೆ ರೈತರಿಗೆ ಮಾರಕ ಹೇಗೆ?
ಕೃಷಿ ರಂಗದ ಸಮಸ್ಯೆಗಳಿಗೆ ಪರಿಹಾರವಿರುವುದು ವಿಕೆಂದ್ರೀಕೃತ ಅರ್ಥ ನೀತಿಯಲ್ಲಿ ; ಸಹಕಾರಿ ತತ್ವದಲ್ಲಿ. ಬೇಸಾಯ, ಉತ್ಪಾದನೆ , ಸಂಗ್ರಹಣೆ ಮತ್ತು ಮಾರಾಟ ವ್ಯವಸ್ಥೆಯನ್ನು ಸಹಕಾರಿ ರಂಗದಲ್ಲೇ ಕೈಗೊಳ್ಳುವುದು. ಕೃಷಿ ಪೂರಕ ಮತ್ತು ಕೃಷಿ ಆಧಾರಿತ ಉದ್ದಿಮೆಗಳನ್ನು ಗ್ರಾಮೀಣ ಭಾಗದಲ್ಲಿ ಪ್ರಾರಂಭಿಸಲು ಪ್ರೋತ್ಸಾಹ ನೀಡುವುದರಿಂದ. ಕೇಂದ್ರೀಕೃತ ಅರ್ಥವ್ಯವಸ್ಥೆಯಾದ ಬಂಡವಾಳವಾದಿ ನೀತಿಯನ್ನು ಕೈಬಿಡದೇ ರೈತರ ಬದುಕನ್ನು ಹಸನಾಗಿಸಲು ಸಾಧ್ಯವಾಗದು
ಆವರ್ತನ
ಇದು ಗುರುರಾಜ್ ಸನಿಲ್ ಅವರ ‘ಆವರ್ತನ’ ಎಂಬ ಸಾಮಾಜಿಕ ಕಾದಂಬರಿ. ಪ್ರಸ್ತುತ ಕಾಲಘಟ್ಟದ ಸಮಾಜದಲ್ಲಿ ನಮ್ಮ ಕೆಲವು ನಂಬಿಕೆ, ಆಚರಣೆಗಳು ಯಾವ ಯಾವ ರೀತಿಗಳಲ್ಲಿ ಜನಜೀವನ ಶೋಷಣೆಗೂ, ಹಸಿರು ಪರಿಸರ ಮತ್ತು ವನ್ಯಜೀವರಾಶಿಗಳ ಮಾರಣಹೋಮಕ್ಕೂ ಕಾರಣವಾಗುತ್ತಿವೆ ಎಂಬುದನ್ನು ಬಹಳ ಸಮೀಪದಿಂದ ಕಾಣುತ್ತ ಬಂದವರು ಇವರು.. ಹಾಗಾಗಿ ಅದೇ ಕಥಾವಸ್ತುವನ್ನು ಕಾದಂಬರಿ ಪ್ರಕಾರದಲ್ಲೂ ಆಯ್ದುಕೊಂಡು ಜನಜಾಗ್ರತಿ ಮೂಡಿಸುವುದು ಅಗತ್ಯ ಎಂದು ತೋರಿ ಈ ಕೃತಿಯನ್ನು ರಚಿಸಿದ್ದಾರೆ. ಇದು ಪುಸ್ತಕರೂಪದಲ್ಲಿ ಪ್ರಕಟವಾಗುವ ಮುನ್ನ ಸಂಗಾತಿಯ ಓದುಗರನ್ನು ತಲುಪಲೆಂದು ಪ್ರತಿ ಬಾನುವಾರ ಇದನ್ನು ಕಂತುಗಳಲ್ಲಿ ಪ್ರಕಟಿಸಲಾಗುತ್ತಿದೆ. ದಾರಾವಾಹಿ ಕ್ಷೇತ್ರದಲ್ಲಿ ಇದು ಸಂಗಾತಿಯ ಮೊದಲ ಪ್ರಯತ್ನ ಓದುಗರು ತಮ್ಮ ಅನಿಸಿಕೆ ತಿಳಿಸಬೇಕೆಂದು ಕೋರುತ್ತೇವೆ
ಹಾವೇ.
ಏನೋ ಭೀತಿ! ಕಡಿದರೆ
ಪಜೀತಿ; ಮನ ಭಿತ್ತಿಯಲಿ
ಅದೇ ವಿಚಾರ ವಿಷ
ವಚನಚಳುವಳಿಗೆ ಕನ್ನಡ ಸಾಹಿತ್ಯದಲ್ಲಿ ಬಹುದೊಡ್ಡ ಸ್ಥಾನವಿದೆ. ವಚನಗಳಲ್ಲಿ ಆಡಿದ, ಸಾರಿದ, ಸಾಧಿಸಿ ತೋರಿಸಿದ ಮೌಲ್ಯಗಳು ಕೇವಲ ಘೋಷಣೆಗಳಾಗದೆ ನಡೆ ನುಡಿಯಲ್ಲಿ ಒಂದಾಗಿ ಏಕವನ್ನು ಸ್ಥಾಪಿಸಿದ ಕಾರಣದಿಂದ ವಚನಕಾರರು ಈ ನೆಲದಲ್ಲಿ ಮಾನ್ಯ ಮತ್ತು ಮುಖ್ಯರಾಗುತ್ತಾರೆ.
ಪ್ರೇಮಪತ್ರ ಸ್ಪರ್ದೆ
ಪ್ರೇಮಪತ್ರ ಸ್ಪರ್ದೆ ಪಂಜು ಅಂತರ್ಜಾಲ ವಾರಪತ್ರಿಕೆ ವತಿಯಿಂದ 2021 ರ ಪ್ರೇಮ ಪತ್ರ ಸ್ಪರ್ಧೆಗೆ ನಿಮ್ಮ ಪ್ರೇಮ ಪತ್ರಗಳನ್ನು ಆಹ್ವಾನಿಸಲಾಗಿದೆ. ನಿಯಮಗಳು: ಪ್ರೇಮ ಪತ್ರ ನಿಮ್ಮ ಸ್ವಂತ ಬರಹವಾಗಿರಬೇಕುಕನಿಷ್ಟ 500 ಪದಗಳ ಬರಹವಾಗಿರಬೇಕುಫೇಸ್ ಬುಕ್ ಮತ್ತು ಬ್ಲಾಗ್ ಸೇರಿದಂತೆ ಬೇರೆಲ್ಲೂ ಪ್ರಕಟವಾಗಿರಬಾರದು.ನಿಮ್ಮ ಬರಹವನ್ನು ಕಳುಹಿಸಿಕೊಡಬೇಕಾದ ಮಿಂಚಂಚೆ: editor.panju@gmail.com, smnattu@gmail.com ಮಿಂಚಂಚೆಯ ಸಬ್ಜೆಕ್ಟ್ ನಲ್ಲಿ “ಪಂಜು ಪ್ರೇಮ ಪತ್ರ ಸ್ಪರ್ಧೆ” ಎಂದು ತಿಳಿಸಲು ಮರೆಯದಿರಿ. ಮಿಂಚಂಚೆಯಲ್ಲಿ ನಿಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ನಿಮ್ಮ ಕಿರು ಪರಿಚಯ ಹಾಗು […]
ಪುಸ್ತಕ ಬಿಡುಗಡೆ-ಫೋಟೊ ಆಲ್ಬಂ
ಪುಸ್ತಕ ಸಂಗಾತಿ ಗೌರಿಯೊಂದಿಗೆ ಏಕಾಂತ-ಲೋಕಾಂತ 29/01/2021