ಹಾವೇ.

ಕವಿತೆ

ಹಾವೇ.

ವಸುಂಧರಾ ಕದಲೂರು.

art pickings — Snake by the self-taught 18th-century artist Sarah...

ಸರಿಯುತ್ತದೆ ಸಪ್ಪಳವಾಗದಂತೆ
ಫಳಫಳ ಹೊಳೆವ ಹೊರಮೈ
ತೋರುತ್ತಾ; ಸವಾರಿ ಸಾಗುತ್ತಾ…

ಏನೋ ಭೀತಿ! ಕಡಿದರೆ
ಪಜೀತಿ; ಮನ ಭಿತ್ತಿಯಲಿ
ಅದೇ ವಿಚಾರ ವಿಷ…

ಮುನ್ನಡಿ ಇಡುವ ಹೆಜ್ಜೆ
ತರಗೆಲೆ ಸಪ್ಪಳಕ್ಕೆ ಹಿಂದೆ
ಸರಕ್’ ಸರಿದು ವಿಭ್ರಾಂತ!

ಮಣಿದು, ಸೋತು ಸರಿದು
ನಿಲ್ಲಬೇಕು- ಗುಂಗಿಗೆ ಎದೆಯ
ಭಯದ ಹಂಗಿಗೆ.. ಏಕೆ?

ಏಕೆಂದರೆ ಅದು,
ಹಾವೇ…

******************************

Leave a Reply

Back To Top