ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪಠ್ಯ ಬೋಧನೆ, ಜನಪದ ಸಂಶೋಧನೆ, ಕೃಷಿಕಾಯಕ  ಈ ಮೂರೂ ಕ್ಷೇತ್ರಗಳ ಪ್ರಗತಿಪರ ಕೃಷಿಕ ಡಾ. ಬಿ.ಡಿ.ಕುಮಾರ್  ಅರಸೀಕೆರೆಯ ಜಗದ್ಗುರು ಶ್ರೀ ಕೋಡಿಮಠ ಪದವಿಪೂರ್ವ ಕಾಲೇಜಿನಲ್ಲಿ ೧೯೯೧ರಿಂದ ಕನ್ನಡ ಉಪನ್ಯಾಸಕರು. ಇವರ ಅಭಿನಂದನಾ ಗ್ರಂಥ ಅಕ್ಷರ ಕೃಷಿಕ ಇತ್ತೀಚಿಗೆ ಬಿಡುಗಡೆಯಾಗಿದೆ. ಲೇಖನ ಕೊಟ್ಟಿದ್ದ ನಾನು  ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಮೊನ್ನೆ ಕುಮಾರ್ ಹಾಸನಕ್ಕೆ ಬಂದು ಪೋನ್ ಮಾಡಿದರು. ಗೌರವ ಪ್ರತಿ ನೀಡಿದರು. ಬರೆಯಿರಿ ಎಂದು ಪ್ರೀತಿಯಿಂದ ಹೇಳಿದರು.  ಓದುತ್ತಾ ಹೋದ ನನಗೆ ಇಷ್ಟವಾಗಿದ್ದು ಇವರ ಬಾಲ್ಯದ ದಿನಗಳು.  
‘ಬಣ್ಣದ ಗುಬ್ಯಾರು ಮಳೆರಾಜ-ಅವರು ಮಣ್ಣಾಗಿ ಹೋದಾರು ಮಳೆರಾಜ.. ಮನದ ನೆನಪಿನ್ನು ಮಾಸಿಲ್ಲ. ನನ್ನ ಭೋಧನಾ ವೃತ್ತಿ ಬದುಕಿನ ಮೊದಲ ಭೋದನೆ ಈ ಜನಪದ ಗೀತೆಯಾಗಿತ್ತು. ಮಳೆಯ ಬೆಳೆಯ ಇಳೆಯ ಪೂರಕ ಸಂಬAಧ,ಉಳಿವಿದ್ದರೆ ಹೋರಾಟ ಕೂಳಿದ್ದರೆ ಕಾಳಗ ಮೇವಿದ್ದರೆ ಮೇಳ ಅನ್ನವಿದ್ದರೆ ಪ್ರಾಣ, ಪ್ರಾಣವಿದ್ದರೆ ಪರಾಕ್ರಮ ಈ ವೈವಿಧ್ಯ ವಿಷಯ ಲೇಪನದೊಂದಿಗೆ ಅತೀವೃಷ್ಟಿ  ಅನಾವೃಷ್ಟಿಯ ರಣಭೀಕರ ಕಠೋರತೆ ಹೇಳುತ್ತಾ ಒಕ್ಕಲ ಬಿಕ್ಕಲು ಆರಂಭವಾಗಿ ಬದುಕು ಮೂರಾಬಟ್ಟೆಯಾಗುತ್ತದೆ. ನಿಸರ್ಗದೆದುರು ಮಾನವನÀ ಆಟ  ನಡೆಯುವುದಿಲ್ಲ ಎಂಬ ಕರಾಳ ಸತ್ಯ ಈ ಗೀತೆಯಲ್ಲಿದೆ..
ಲೇಖಕರು ಕನ್ನಡ ಉಪನ್ಯಾಸಕರಾಗಿ ಪ್ರಥಮ ಪಿಯುಸಿಗೆ ಈ ಪಾಠ ಮಾಡುವಾಗ  ಅವರಿಗೆ ಅರಿವಿಲ್ಲ. ತನ್ನ ಬದುಕು  ಇದೇ ಜನಪದ ಹಾಡಿನಂತೆ ಆಗುತ್ತದೆ ಎಂದು.  ನಿಜ, ಯಾರು ತಾನೇ ನಮ್ಮ ಭವಿಷ್ಯದ ಬದುಕು ಹೀಗೆ ಇರುವುದೆಂದು ಊಹಿಸಲು ಸಾಧ್ಯ. ಆದರೆ ನಾವು  ಸನ್ಮಾರ್ಗದಲ್ಲಿ ಸುಂದರ ಬದುಕನ್ನು ಕಟ್ಟಿಕೊಳ್ಳಲು ಕನಸು ಕಾಣುತ್ತೇವೆಯೋ ಅದು ಕೆಲವರಿಗೆ ಸಿಗುತ್ತದೆ. ಇದಕ್ಕೆ  ಕುಮಾರ್ ಉದಾಹರಣೆ ಅಷ್ಟೇ. ಪಠ್ಯ ಬೋಧನೆಯೊಂದಿಗೆ ತಮ್ಮ ಜೀವನದ ಅನುಭವ ಪಾಠವನ್ನು ಅರಗಿಸಿಕೊಂಡು ಒರ್ವ ಪ್ರಗತಿಪರ ರೈತನಾಗಿ ಹೊರಹೊಮ್ಮಿರುವುದು ಮಾದರಿ ಎನಿಸುತ್ತದೆ.  ಜೀವಿತದ ಹೋರಾಟ ಬದುಕಿನಲ್ಲಿ   ಹಲವು ಕಷ್ಟನಷ್ಟ ಎದುರಿಸಿ ಗೆದ್ದವರು ಈ ಬಿ.ಡಿ.ಕುಮಾರ್. ಕೃತಿಯ ಸಂಪಾದಕರು ಡಾ. ಹರೀಶ್ ಕುಮಾರ್ ಬರೆದಂತೆ ಇವರು  ವಿದ್ಯಾರ್ಥಿಗಳಿಗೆ ಕೇವಲ ಪಾಠ ಹೇಳಿಕೊಟ್ಟ ಮೇಷ್ಟುç ಮಾತ್ರವಲ್ಲ ಬದುಕಿನ ದಾರಿ ಕಂಡುಕೊAಡ  ಮಾರ್ಗದರ್ಶಿ. ಇವರ ವ್ಯಕ್ತಿತ್ವ ಬಹುಮುಖಿ ಕ್ಯಾನ್ವಾಸ್. ಜಮೀನಲ್ಲಿ ನಿಂತರೆ ಮಣ್ಣಿನ ವಾಸನೆಯ ಅಪ್ಪಟ ಕೃಷಿಕ. ತಮಟೆ ತಂಬೂರಿ ಹಿಡಿದರೆ ಜನಪದ ಕಲಾವಿದ. ಪುಸ್ತಕ ಹಿಡಿದರೆ ಓದಿನ ಸಂತ.  
ಸಾವಿರ ಪುಟಗಳ ಕೃತಿಯಲ್ಲಿ ನನಗೆ ಇಷ್ಟವಾಗಿದ್ದು ಇವರ ನೇರ ನುಡಿಯ ಬಾಲ್ಯದ ಘಟನೆಗಳು.
ದಿನಾಂಕ ೨೧-೬-೧೯೬೬ರ ಮಧ್ಯಾಹ್ನ ೪ ಗಂಟೆಯಲ್ಲಿ ದ್ಯಾವೇಗೌಡ ದೇವಮ್ಮ ಇವರ ದ್ವಿತೀಯ ಪುತ್ರನಾಗಿ ಈ ಭೂಮಿಗೆ ಬಂದನAತೆ. ನನ್ನ ಅಜ್ಜಿ ತಾಯಮ್ಮನ ತಮ್ಮ ಕೃಷ್ಣಪ್ಪ ಕಲ್ಯಾಡಿಕೊಪ್ಪಲಿನ ಬ್ರಾಹ್ಮಣ ಗೆಳೆಯ ಶಿವಪ್ರಕಾಶ್ ಇದೇ ದಿನ ಬೆಳಿಗ್ಗೆ ಹುಟ್ಟಿದರಂತೆ. ಇವನನ್ನು ನೋಡಿಕೊಂಡ ಕೃಷ್ಣಪ್ಪ ಬಸವಾಘಟ್ಟಕ್ಕೆ ಬಂದು ನನ್ನನ್ನು ನೋಡಿದರÀಂತೆ. ಈ ವಿಷಯದಿಂದ ನಾನು ಜನಿಸಿದ ನಿಜ ದಿನಾಂಕ ಗೊತ್ತಾಯಿತು..
ಕುಮಾರ್ ಒಬ್ಬರೇ ಅಲ್ಲಾ ಎಲ್ಲಾ ಅನಕ್ಷರಸ್ಥ ನಮ್ಮ ತಂದೆತಾಯಿಗಳದು ಇದೇ ಸ್ಥಿತಿ.   ಐದು ವರ್ಷಗಳ ನಂತರ ಶಾಲೆಗೆ ಸೇರಿಸುವಾಗ ಹುಟ್ಟಿದ ದಿನಾಂಕ ಸರಿಯಾಗಿ ನೆನಪಿಲ್ಲದೇ ಒಂದು ಅಂದಾಜಿನ ಮೇಲೆ ಶಾಲೆಗೆ ಸೇರಿಸುತ್ತಿದ್ದ ಆ ದಿನಗಳು.   ಶಾಲೆಗೆ ಬೇಗನೇ ಸೇರಿಸಲು ಕೆಲವು ಪೋಷಕರು ಒಂದು ವರ್ಷ ಫ್ಲಸ್ ಮಾಡಿ ಬರೆಸಿ ಸರ್ಕಾರಿ ನೌಕರಿಯಲ್ಲಿ ನಿವೃತ್ತಿ ಹೊಂದುವಾಗ ಅದು ಮೈನಸ್ ಆಗಿದ್ದನ್ನು ನೊಂದುಕೊAಡು  ಹೇಳಿದ್ದನ್ನು ಕೇಳಿದ್ದೇನೆ. ಹಳ್ಳಿಯ ಹಂಚಿನ ಮನೆ ತೊಲೆಗಳಲ್ಲಿ ಮಕ್ಕಳು ಹುಟ್ಟಿದ ದಿನಾಂಕ ಬರೆದಿದ್ದನ್ನು  ನೋಡಿದ್ದೆನೆ.
ಈ ಸಂದರ್ಭದಲ್ಲಿ ಒಂದು ನೆನಪು ನನ್ನನ್ನು ಮತ್ತೆ ಮತ್ತೆ ಕಾಡಿದೆ. ಅದೇನೆಂದರೆ ಅಷ್ಟೊತ್ತಿಗಾಗಲೇ ಹೊಲದಲ್ಲಿ ಹೊಸಮನೆ ಕಟ್ಟುತ್ತಿದ್ದೆವು. ಹಳೆ ಮನೆಗೂ ಹೊಸ ಮನೆಗೂ ತಿರುಗಾಟ ಸಾಗುತ್ತಿತ್ತು. ಆಗ ತಾನೇ ನೀರುಗುಂದ ಹೊಲಕ್ಕೆ ಅಲೆಮನೆ ಕಟ್ಟಿದ್ದರಂತೆ. ಅಲ್ಲಿ ಗಡಿಗೆಗಳಿಗೆ ಗುಳ ತುಂಬಿಸಿ ಮನೆಯಲ್ಲಿ ತಂದಿಟ್ಟಿದ್ದರು. ನಾನು ಅಂಕೆಯಿಲ್ಲದೆ ಅದನ್ನು ಕುಡಿದು ಹೊಟ್ಟೆಯಲ್ಲಿ ಲಾಡಿ ಉಳವಾಗಿತ್ತು. ಅದೊಂದು ಸುಂದರವಾದ ದಿನ ಆ ಹುಳ ಈಚೆಗೆ ಬರಲು ಆಗದೇ ಒಳಗೆ ಹೋಗಲು ಆಗದ ಅದನ್ನು ನೇತಾಡಿಸಿಕೊಂಡು ಊರಲೆಲ್ಲಾ ತಿರುಗಾಡಿದ್ದೆ. ನನ್ನ ಪಾಲಿಗೆ ಅದನ್ನು ಕಾಳಿಂಗ ಸರ್ಪವೆಂದೇ ಬಾವಿಸಿ ಭಯಭೀತರಾಗಿ ಊರ ತುಂಬಾ ಓಡಾಡಿದ್ದೆ… ಕುಮಾರರ ಈ ನೆನಪು ನಗು ತರಿಸಿದರೂ ಇಂತಹ ದೃಶ್ಯಗಳನ್ನು ಕಂಡಿರುವೆ.      
ಕೃತಿಯ ಕವಲು-೧À ಅಂತರAಗ ವಿಭಾಗದಲ್ಲಿ ೩೭ ಲೇಖಕರು ಇವರ ವ್ಯಕ್ತಿ ಚಿತ್ರಣವನ್ನು ತಮ್ಮ ಸ್ನೇಹನೆಲೆಯಲ್ಲಿ ಬರೆದಿದ್ದಾರೆ. ಕುಮಾರ್ ಪದವಿಪೂರ್ವ ಐಚ್ಛಿಕ ಕನ್ನಡ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರು. ಕೆ.ಪಿ.ಎಸ್.ಸಿ ಸ್ಫರ್ಧಾತ್ಮಕ ಪರೀಕ್ಷೆ ಪ್ರಶ್ನೆಪತ್ರಿಕೆ ತಯಾಸಿದ್ದಾರೆ. ರಾಜ್ಯ ಸಬ್ ಇನ್ಸ್ಸ್ಪೆಕ್ಟರ್ ಪರೀಕ್ಷೆÀ ಮೌಲ್ಯಮಾಪಕರು. ಜಿಲ್ಲಾ ಕನ್ನಡ ಉಪನ್ಯಾಸಕರ ಸಂಘದ ಅಧ್ಯಕ್ಷರು. ದೆಹಲಿಯಲ್ಲಿ ೧೯೯೬ರಲ್ಲಿ ರಾಷ್ಟಿçÃಯ ಜಾನಪದ ಹಬ್ಬದಲ್ಲಿ  ತಮಟೆ ಕಲಾವಿದರಾಗಿ ಭಾಗವಹಿಸಿದ್ದಾರೆ.   ಇವರ ತೋಟದ ಮನೆಯಲ್ಲಿ ಹತ್ತು ಸಾವಿರ ಪುಸ್ತಕಗಳ ಸಂಗ್ರಹ ಇದೆ. ಅಮೇರಿಕದ ತತ್ವಜ್ಞಾನಿ ಹೆನ್ರಿ ಡೇವಿಡ್ ಥೋರೋ ತರಹ ಇವರದು ನಿಸರ್ಗಪ್ರೇಮ ಜೀವನ.  ಬಾಗೇಶಪುರದ ಬಳಿ  ೧೨ ಎಕರೆ ಭೂಮಿ ಖರೀದಿಸಿ ಗುಡ್ಡದಲ್ಲೊಂದು ಮನೆಯ ಮಾಡಿ ಪಂಚೆ ಕಟ್ಟಿ ಕೃಷಿ ಕಾಯಕ ಮಾಡಿದವರು. ಅದೀಗ ಜಮೀನಾಗಿ ಉಳಿಯದೇ ಅಲ್ಲಿ ನೂರಾರು ಜಾತಿಯ ಹಣ್ಣಿನ ಮರಗಳು ಬೆಳೆದು, ಪ್ರಾಣಿ ಪಕ್ಷಿಗಳ ನೆಲೆವೀಡಾಗಿ ಕಾಡುಕೃಷಿಗೆ ಮಾದರಿಯಾಗಿದೆ. ಹಸು ಕುರಿ ಕೋಳಿ ಸಾಕಣಿಕೆಯಿಂದ  ಕೃಷಿ ಬದುಕಿಗೆ ಮತ್ತೊಂದು ದಾರಿ ತೋರಿಸಿದ್ದಾರೆ. ಅಕ್ಷರ ಸಂಸ್ಕೃತಿ ಮಣ್ಣಿನ ಸಂಸ್ಕೃತಿ ನಡುವೆ ಸಂತನಾಗಿದ್ದಾರೆ. ಇದೊಂದು ಅಭಿನಂದನಾ ಗ್ರಂಥ ಮತ್ತು  ನಾಡಿನ ಅನೇಕ ಜನಪದ ವಿದ್ವಾಂಸರು ಲೇಖಕರ ವಿಶಿಷ್ಟ ಬರಹಗಳ ಸಂಗ್ರಹ.  
ಕವಲು-೨ ಜನಪದ ಪಲುಕು ಜನಪದ ಸಾಹಿತ್ಯ ವಿಶೇಷವಾಗಿದೆ.  ಡಾ.ಕಾಳೇಗೌಡ ನಾಗವಾರರ  ಲೇಖನವು ಗಮನಾರ್ಹ. ಕರ್ನಾಟಕವು ವಿಸ್ತಾರ ಭೂಪ್ರದೇಶವಾಗಿ ನಾನಾ ಬಗೆಯ ವೈವಿಧ್ಯಗಳಿಂದ ಕೂಡಿದೆ. ಒಂದು ಕಡೆ ಅರಬ್ಬಿಸಮುದ್ರ, ಉತ್ತರ ಕನ್ನಡ ದಕ್ಷಿಣ ಕನ್ನಡ ಜಿಲ್ಲೆಗಳ ಕರಾವಳಿ ಪ್ರದೇಶ, ಶಿವಮೊಗ್ಗ  ಆವರಿಸಿದ ಮಲೆನಾಡು, ಪೂರ್ವ ಪಶ್ಚಿಮ ಘಟ್ಟಗಳ ನಡುವಣ ಉತ್ತರ ದಕ್ಷಿಣ ಕರ್ನಾಟಕಗಳ ಬಗೆಬಗೆಯ ಪದ್ಧತಿ ಅನುಸರಿಸುವ ಜನರ ಗುಂಪು ಒಳಗೊಂಡಿದೆ. ಈ ನಡುವೆ ಕೊಡವ ತುಳು ಕೊಂಕಣಿ  ಭಾಷೆಗಳ ಜಾನಪದ ಸಂಪತ್ತು  ಅರಳಿದೆ. ಈ ಎಲ್ಲಾ  ಜನಪದ ಸಾಹಿತ್ಯವು ಪೂರ್ಣ ಸಂಗ್ರಹವಾಗಬೇಕೆAದು ಆಶಿಸಿದ್ದಾರೆ. ಪ್ರಕೃತಿಯ ಮಡಿಲಲ್ಲಿ ಆಡಿ ಬೆಳೆದು ಗಾಣದೆತ್ತಿನಂತೆ ನಿರಂತರವಾಗಿ ದುಡಿಯುತ್ತಲೇ ಬಂದು ಉದ್ದಕ್ಕೂ ಅಕ್ಷರ ಜ್ಞಾನದಿಂದ ವಂಚಿತರಾಗಿರುವ ನಮ್ಮ ಜನಪದ ಕಲಾವಿದರು ವಾಸ್ತವವಾಗಿ ಗಂಧರ್ವಲೋಕದ ಗೆಣೆಕಾರರು ಎಂದಿದ್ದಾರೆ.  ಡಾ.ಹಿ.ಶಿ.ರಾಮಚಂದ್ರೇಗೌಡರು ಬಿ.ಡಿ.ಕುಮಾರ್ ಅವರಿಗೆ ಗೈಡ್ ಆಗಿದ್ದವರು. ಇವರ ಮಾರ್ಗದರ್ಶನದಲ್ಲಿ ಕುಮಾರ್ ಡಾಕ್ಟರೇಟ್ ಮಾಡಿದ್ದಾರೆ. ಗೌಡರಿಗೆ ತಮ್ಮ ಶಿಷ್ಯನ ಸಾಧನೆಗೆ ಪ್ರೀತಿ ಇದೆ. ವೈಫಲ್ಯದ ಬಗ್ಗೆ ಬೇಸರವೂ ಇದೆ. ‘ನಾನು ಪ್ರತಿಭೆ ಮತ್ತು ಕ್ರಿಯಾಶೀಲತೆ  ಕಂಡಲ್ಲಿ ಪುಳಕಗೊಳುತ್ತೇನೆ, ಸಂಭ್ರಮಿಸುತ್ತೇನೆ. ಇಂಥ ದ್ವಿಜತ್ವವನ್ನು ಹೊಂದಿದ ವ್ಯಕ್ತಿ ಡಾ. ಬಿ.ಡಿ.ಕುಮಾರ್. ಅವರ ಬಗ್ಗೆ ನನಗೆ ಪ್ರೀತಿಯೂ ಇದೆ. ಸಿಟ್ಟು ಇದೆ. ಪ್ರೀತಿ ಯಾಕೆಂದರೆ ಆ ಎರಡನ್ನೂ ಒಳಗೊಂಡ ವ್ಯಕ್ತಿ. ಸಿಟ್ಟು ಯಾಕೆಂದರೆ ಅವನ್ನು ಫಲಪ್ರದವಾಗಿ ಬಳಸಿಕೊಂಡಿಲ್ಲ ಎಂದು. ಅವರ ಪ್ರತಿಭೆ ಹೊರಚೆಲ್ಲುವ ಯಾವ ಉತ್ತಮ ಕೆಲಸ ಅವರು ಮಾಡಿದಂತೆ ನನಗೆ ಕಂಡಿಲ್ಲ. ನನ್ನ ಮಾರ್ಗದರ್ಶನ ದಲ್ಲಿ ಅವರು ಪಿಹೆಚ್‌ಡಿ ಪಡೆದರು. ವಿಷಯ: ಹಾಸನ ಜಿಲ್ಲೆಯ ಐತಿಹ್ಯಗಳನ್ನು ಕುರಿತು. ಪಿಹೆಚ್‌ಡಿಯ ನಂತರ ಆ ವಿಷಯದಲ್ಲಿ ತುಂಬ ಕೆಲಸ ಮಾಡಬಹುದಿತ್ತು. ಆ ನಿಟ್ಟಿನಲ್ಲಿ ಆವರ ಪ್ರತಿಭೆಯನ್ನು ದುಡಿಸಿಕೊಳ್ಳಲಿಲ್ಲ..    
ಇದೇ ಕೃತಿಯನ್ನು ಪರಿಚಯಿಸುವ ನನ್ನ ಲೇಖನವು (ಗೊರೂರು ಅನಂತರಾಜು)  ಕವಲು ೨ರಲ್ಲಿದೆ. ಜಾನಪದವು ವಿಶಾಲವೂ ಮತ್ತು ವ್ಯಾಪಕವೂ ಆಗಿದ್ದು ಜಗತ್ತನ್ನೆಲ್ಲ ತನ್ನಲ್ಲಿ ಹುದುಗಿಸಿಕೊಂಡಿದೆ. ಇಲ್ಲಿ ಪ್ರಾಚೀನ ಅರ್ವಾಚೀನಗಳೆರಡೂ ಸಂಧಿಸಿ ಪರಸ್ಪರ ಕೈಕುಲುಕುತ್ತವೆ. ಈ ಜಾನಪದಕ್ಕೆ ಆದಿ ಅಂತ್ಯಗಳಿಲ್ಲ ಸಾವಿಲ್ಲ. ಆಧುನಿಕ ಮಾನವನಲ್ಲಿ ಗುಪ್ತಗಾಮಿನಿಯಾಗಿ ಪ್ರವಹಿಸುತ್ತಾ ಬೀಜದಲ್ಲಿ ವೃಕ್ಷವಡಗಿರುವಂತೆ ಕಲೆ ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಜಾನಪದ ಚೈತನ್ಯ ಸುಪ್ತವಾಗಿರುತ್ತದೆ. ಕೃತಿಯಲ್ಲಿ ಲೇಖಕರು ತಮ್ಮ ಭೌಗೋಳಿಕ ನೆಲೆಯಲ್ಲಿ ಐತಿಹ್ಯಗಳನ್ನು ಅರ್ಥ ಮಾಡಿಕೊಳ್ಳಲು ಸಾಕಷ್ಟು ಶ್ರಮಿಸಿದ್ದಾರೆ. ಅವುಗಳ ಸಾಂಸ್ಕೃತಿಕ ಒಳತೋಟಿಗಳನ್ನು ಒಳನುಗ್ಗಿ ನೋಡಲು ಪ್ರಯತ್ನ ಮಾಡಿದ್ದಾರೆ. ಬಹುಮುಖಿ ದೃಷ್ಟಿಯಿಂದ ಅವುಗಳ ಆಶಯ ಕಾರ್ಯತತ್ಪರತೆಯನ್ನು ಪ್ರಾತ್ಯಕ್ಷೀಕರಿಸಲು ಪ್ರಯತ್ನಿಸಿದ್ದಾರೆ. ಜನಪದದಲ್ಲಿ ಜಾತಿ ಇಲ್ಲ ಅರ್ಥಾತ್ ತಾರತಮ್ಯ ಇಲ್ಲ. ಅಲ್ಲಿರುವುದು ಸಹಜ ಮಾನವೀಯ ಬದುಕು.. ಇದು  ಡಾ. ಹಿ.ಶಿ.ರಾಮಚಂದ್ರೇಗೌಡರ ಮುನ್ನುಡಿ ಬರಹ.


About The Author

Leave a Reply

You cannot copy content of this page

Scroll to Top