ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹಗುರವಾಗಲೆಂದು ಹೆಗಲೇರಿದ ಭಾರವನ್ನೆಲ್ಲ ನಾವಿಂದು
ಎ.ಆಯ್. ಬೆನ್ನ ಮೇಲೆ ಏರಿಸಿದ್ದೇವೆ .

ಸಿಗಲಾರದ ಸುಖವನ್ನು ಆಧುನಿಕತೆಯ ಸೋಗಿನಲ್ಲಿ ನಾವು ನಮ್ಮಸೆರಗಿನಲ್ಲಿ ಕಟ್ಟಿಕೊಂಡಿದ್ದೇವೆ.

ಸೆಣಸಾಡಿ ,ಗ್ರಹಣ ಹಿಡಿದ ಮನಸ್ಸನ್ನು
ಶೋಚನೀಯ ಸ್ಥಿತಿಯಲ್ಲಿ ಅದುಮಿಟ್ಟಿದ್ದೇವೆ.

ದಿನದ ಕ್ಷಣ -ಕ್ಷಣಗಳನ್ನು
ಕಣ್ಣು ಕೆಂಪಾಗುವಂತೆ ಮೊಬೈಲ್ ಬಳಕೆಯಲ್ಲಿ ಬಳಸುತ್ತಿದ್ದೇವೆ.

ದಣಿದಾಗಲೂ ಕಣ್ಣುಗಳಿಗೆ ಸಾಂತ್ವನ ಹೇಳದೆ ಇನ್ನೂಇನ್ನೂ ದುಡಿಸುತಿದ್ದೇವೆ.

ಹೊಸ ವಿಷಯ, ಹೊಸ ಆಲೋಚನೆಗಳನ್ನು ಹೊಸ ಆಯಾಮದೊಳಗೆ ಪಡೆಯಲು ಸಂತೋಷವೇ!!

ಆದರೆ….
ಹಿಂದಿನ ಸಂಸ್ಕಾರ ಪರಂಪರೆಗಳನ್ನು ಸದ್ದಿಲ್ಲದೆ ಮಂಗಮಾಯ ಮಾಡುತ್ತಿದ್ದೇವೆ.

ತಾಂತ್ರಿಕತೆ ಬೇಕು ಆಧುನಿಕತೆಯು ಬೆಳೆಯಲೇ ಬೇಕು ಆದರೆ ಇತಿಮಿತಿಗಳ ಲಕ್ಷ್ಮಣ ರೇಖೆಯೊಂದು ಇರಲೇಬೇಕು.

ಬಾಲ ವೃದ್ಧಾದಿಗಳಿಂದ ಎಲ್ಲರೂ ತಮ್ಮ ಜೀವಿತದ ಸಮಯವನ್ನು ಈ ಒಂದು ಜಂಗಮ ವಾಹಿನಿಯಲ್ಲಿ ಕಳೆಯುತ್ತಿರುವುದಕ್ಕೆ ಆ ಭಗವಂತ ನಮ್ಮನ್ನು ಶಪಿಸುತ್ತಿರಬಹುದು.

ದೇಹ ದಣಿಸು, ದುಡಿದು ತಿಂದು ಅಂತ್ಯವನ್ನು ಕಾಣಿರೆಂದು ಹುಟ್ಟಿಸಿದವನಿಗೆ ಈ ಮಾಯಾ ಜಗತ್ತು ಯಾಕಾದರೂ ಅಂಟಿಕೊಂಡಿದೆ ಅಂದುಕೊಳ್ಳುತ್ತಿರುವುದಂತು
ಮಹಾ ಸತ್ಯ ,ಸತ್ಯ !!


About The Author

Leave a Reply

You cannot copy content of this page

Scroll to Top