ಪ್ರಬಂಧ ಸಂಗಾತಿ
ಡಾ.ವೈ ಎಂ.ಯಾಕೊಳ್ಳಿ
ಚಹಾಯಣ…ದ ರಾಮಾಯಣ

ಇಂದು ೨೦/೦೫/೨೦೨೬ಚಹಾದ ದಿನವಂತೆ..ಚಹಾ ಇಲ್ಲದೆ ಸೂರ್ಯೋದಯವೇ ಆಗದ ನಮಗೆ ಅಂದರೆ ಉತ್ತರ ಕರ್ನಾಟಕದ ಮಂದಿಗೆ ಚಹಾಕ್ಕೊಂದು ದಿನವಿದೆಯಂದರೆ ನಗೆ ಬರುತ್ತದೆ.ಹಾಗೆ ನೋಡಿದರೆ ನಮ್ಮ ಜನಕ್ಕೆ ಯಾಕೊ ಕಾಫಿ ಕಂಡರೆ ಅಷ್ಟಕ್ಕಷ್ಟೇ. ನಮ್ಮಪ್ರಕಾರ ಎಲ್ಲದಕ್ಕೂ ದಿವ್ಯೌಷಧಿ ಚಹಾನೆ.ಅಂತೆಯೆ ಅದನ್ನು ದೇವಲೋಕದ ಅಮೃತ ಎಂದು ಕರೆಯುವದೂ ಇದೆ.
ಮನೆಗಳಿಗೆ ಬಂದಾಗ ಅತಿಥಿಗಳಿಗೆ ಕೊಡಮಾಡುವ ಕನಿಷ್ಟ ಪಕ್ಷದ ಆತಿಣಥ್ಯ ಎಂದರೆ ಚಹಾನೇ ಆಗಿದೆ.”ಬರ್ರಿ ಬರ್ರಿ ಅರ್ಧ ಕಪ್ ಚಹಾ ಕುಡದ ಹೋಗರಿ” ಎಂದು ನಾವು ಅತಿಥಿಗಳಿಗೆ ಒತ್ತಾಯ ಮಾಡುವದೂ ಇದೆ.
ಬಂದ ಅತಿಥಿಗಳಿಗೆ ನಾವು ಏನುಕೊಡದಿದ್ದರೂ ಪರ್ವಾ ಇಲ್ಲ ಒಂದು ಕಪ್ ಚಹಾನಾದರೂ ಕೊಡಲೇ ಬೇಕು.ಒಂದು ವೇಳೆ ಚಹಾನೂ ಆಫರ್ ಮಾಡದವರನ್ನು ಕಂಡು ” ಏನ್ ಜಿಪುಣರೆಪಾ,ಅವರ ಮುಖಕ್ಕ ಅರ್ಧ ಕಪ್ ಚಹಾ ಹುಟ್ಟಲಿಲ್ಲ” ಎಂದು ಬೈಯುವವರೂ ಇದ್ದಾರೆ.
ಚಹಾ ಅಂಗಡಿಗಳೆಂದು ನಾವು ಹೋಟೆಲ್ ನ್ನು ಹೆಸರಿಸುತ್ತೇವೆ.ಅಲ್ಲಿ ಏನೆಲ್ಲ ಖಾದ್ಯಗಳನ್ನು ಮಾಡಬಹುದಾದರೂ ಅವುಗಳ ಸೇವನೆಯ ನಂತರ ಅರ್ಧ ಕಪ್ ಚಹಾ ಸೇವನೆ ಇರಲೇಬೇಕು.ಇರದಿದ್ದರೆ ಏನೇ ತಿಂದರೂ ಅದು ಅಪೂರ್ಣ.ಅದು ಒಂದುರೀತಿಯಲ್ಲಿ ಕಾರ್ಯಕ್ರಮಗಳಲ್ಲಿ ವಂದನಾರ್ಪಣೆ ಇದ್ದಂತೆ.ಎಂಥ ದೆ ಭಾಷಣ ನಡೆದರೂ ಕಡೆಗೆ ಒಂದು ಸಾಲಿನದಾದರೂ ವಂದನಾರ್ಪಣೆ ಯಾಗದಿದ್ದರೆ ಅದೆಂತಹ ಕಾರ್ಯಕ್ರಮ ಎನ್ನುವ ಹಾಗೆ ಏನೆ ಲ್ಲ ತಿಂಡಿ ತಿಂದರೂ ಚಹಾ ಇರದಿದ್ದರೆ ಅರ್ಧ ಆದಂತೆಯೆ ಎಂದು ತಿಳಿವಳಿಕೆ ಸರ್ವೇ ಸಾಮಾನ್ಯ.
ನಮ್ಮಲ್ಲಿ ಊರುಗಳ ಸಿರಿತನವೂ ಈ ಹೊಟೆಲ್ ಗಳ ಆಧಾರದ ಮೇಲೆಯೆ ನಿರ್ಣಯವಾಗುವದುಂಟು.ಒಂದು ಚಹಾದಂಗಡಿಯೂ ಇರದೆ ಇದ್ದರೆ” ಅದೆಂಥ ಹಿಂದುಳಿದ ಊರು ” ಎಂದು ಅಸಹ್ಯ ಮಾಡುವವರೂ ಇದ್ದಾರೆ.
ಎಂಥ ಹಿರಿತನಗಳೂ ನ್ಯಾಯನಿರ್ಣಯಗಳೂ ಚಹಾ ಸೇವನೆ ಯಿಂದಲೇ ಆರಂಭ ಮತ್ತು ಮುಕ್ತಾಯ ಎಂಬುದು ಉತ್ತರಕರ್ನಾಟದ ಒಂದು ನಿಯಮವೇ ಆಗಿದೆ. ಎಲ್ಲ ಸಮಾರಂಭಗಳ ಆರಂಭಕ್ಕೆ ಚಹಾ ಕೊಟ್ಟೇ ಕಾರ್ಯಕ್ರಮ ಆರಂಭಿಸೋದು ನಮ್ಮ ಪದ್ಧತಿ.
ಪೂರ್ತಿ ಚಹಾ ಕುಡಿಯುವವರಿಗಿಂತ ಅರ್ಧ ಚಹಾ ಕುಡಿಯುವವರೆ ಜಾಸ್ತಿ.ಗೆಳೆಯರು ಸೇರಿಕೊಂಡು ಅರ್ಧ ತಾಸಿಗೊಂದು ಬೈಟೂ ಚಹಾ ಕುಡಿಯುತ್ತ ಇಡಿ ದಿನವನ್ನೆಲ್ಲ ಊರ ಚಹಾದಂಗಡಿಗಳ ಕಟ್ಟೆಯ ಲ್ಲಿಯೇ ಕಳೆಯುವ ಯಜಮಾನರನ್ನು ನಾವು ಕಾಣುತ್ತೇವೆ.ಇಂಥ ಜಿಗರಿ ದೋಸ್ತರನ್ನು ಬೈಟೂ ದೋಸ್ತರು ಎಂತಲೂ ಕರೆಯಬಹುದು. ನಮ್ಮ ಹಳ್ಳಿಗಳಲ್ಲಿ ಕೆಲವರಂತೂ ಎಷ್ಟು ಚಹಾದಂಗಡಿಯ ಚಹಾದ ಮೇಲೆ ಜೀವ ಇಟ್ಟಿರುತ್ತಾರೆಂದರೆ ಎದ್ದೊಡನೆ ಅವರ ಮುಂಜಾನೆಗಳಾಗುವದೆ ಹೊಟೆಕಿನ ಮುಂದೆ.ಅಲ್ಲಿ ಬಂದುಮುಖಮಾರ್ಜನ ಕಾರ್ಯಕ್ರಮ ಮುಗಿಸಿ ಒಂದಾದ ಮೇಲೊಂದರಂತೆ ಚಹಾ ಕುಡಿದು ಅಂಗಡಿಯವನ ಖಾತೆಗೇರಿಸಿ ಮುಂದಿನ ಕಾರ್ಯಕ್ಕೆ ತೆರಳೂವ ಭೂಪರಿಗೇನೂ ಕಡಿಮೆಯಿಲ್ಲ.
ಹಿರಿಯ ಪ್ರಭಂಧಕಾರರಾದ ವಿರೇಂದ್ರ ಶಿಂಪಿ ಯವರು ಬರೆದ ನಮ್ಮೂ ರ ಚಹಾ ಹೊಟೆಲು ಎಂಬ ಪ್ರಬಂಧದಲ್ಲಿ ಈ ಚಹಾ ಹೊಟೆಲುಗಳನ್ನು “ಹಳ್ಳಿಯ ಪಾರ್ಲಿಮೆಂಟ್ ” “ವಿಧಾನ ಸೌಧ”ಗಳೆಂದು ಕರೆಯುತ್ತಾರೆ.ಏಕೆಂದರೆ ಊರಿನ ಎಲ್ಲ ಸುದ್ದಿಗಳೂ ಅಲ್ಲಿ ಬಂದು ಹೋಗುವದರಿಂದ ಅವು ವಾರ್ತಾ ಇಲಾಖೆಗಳಂತೆಯೂ ಕೆಲಸ ಮಾಡುವದುಂಟು. ನಿಮಗೆ ಊರಿನ ಯಾವ ಮೂಲೆಯ ಎಂಥದೆ ತಾಜಾ ಸುದ್ದಿ ಬೇಕಾದರೂ ನೀವು ಚಹಾದಂಗಡಿಯ ಒಂದು ಮೂಲೆ ಹಿಡಿದು ಮೌನ ಕುಳಿತರೆ ಸಾಕು ನಿಮಗೆ ಎಲ್ಲವೂ ತಿಳಿಯುತ್ತಾ ಹೋಗುತ್ತದೆ.
ಈಚೆಗಂತೂ ಸಕ್ಕರೆ ಖಾಯಿಲೆ ಭಾರತದ ಬಹು ದೊಡ್ಡ ಖಾಯಿಲೆಯಾದ ಮೇಲೆ ಸಕ್ಜರೆ ಹಾಕಿದ ಚಹಾ ಕುಡಿಯುವರ ಸಂಖ್ಯೆ ಕಡಿಮೆಯಾಗಿ ಊರಿಗೂರಿಗೆ ಗಲ್ಲಿ ಗಲ್ಲಿಗಳಲ್ಲಿ ಬೆಲ್ಲದ ಚಹಾ ಎಂಬ ಹೆಸರಿನ ಗುಲ್ಪಿ ಚಹಾದಂಗಡಿಗಳೂ,ಕೇಸರ ಚಹಾದಂಗಡಿಗಳೂ ತಲೆಯೆತ್ತಿರುವದನ್ನು ಕಾಣುತ್ತವೆ. ಇನ್ನು ಸಕ್ಕರೆ ಖಾಯಿಲೆ ಗೆ ತುತ್ತಾದವರು ಸುಗರ್ ಲೆಸ್ ಚಹಾ ಸೇವನೆ ಮಾಡಿಯಾದರೂ ಚಹಾದ ಚಟ ತೀರಿಸಿಕೊಳ್ಳುತ್ತಾರೆ. ಈಚಿಚೆಗೆ ಅವರದೆ ಸಂಖ್ಯೆ ಜಾಸ್ತಿಯಾದುದರಿಂದ ಸುಗರ್ ಲೆಸ್ಸಾ ಎಂದು ಅಂಗಡಿಯವರೆ ಕೇಳಿ ಖಂಡಿತ ಮಾಡಿಕೊಳ್ಳುವದುಂಟು.
ಸರಕಾರಿ ಕಛೇರಿಗಳಲ್ಲಿ ಚಹಾದ ವಿರಾಮ ಎಂದು ಒಂದು ಬಗೆಯ ವಿರಾಮ ಕಾಲವೇ ನಿರ್ಣಯವಾಗಿರುತ್ತದೆ. ಬೆಂಗಳೂರಿನಂತಹ ದೊಡ್ಡ ನಗರಗಳಿರಲಿ, ಚಿಕ್ಕ ನಗರಗಳಿರಲಿ ಸರಕಾರಿ ಇಲಾಖೆಯ ಅಧಿಕಾರಿಗಳು ಖಾಯಂ ಮ್ಮಾಗಿ ಅಂತರ್ಧಾನ ಆಗಿರುವದು..ಕೇಳಿದರೆ ಚಹಾಕ್ಕೆ ಹೋಗಿದ್ದಾರೆ ಎಂದು ಹೇಳುವದು ಸಾನಾನ್ಯವಾಗಿದೆ.ಕಛೇರಿಯ ನಿರ್ಣಯವಾಗದ ಕೆಲವು ಕೇಸಗಳ ಪರೊಹಾರೋಪಾಯವನ್ನು ಚಹಾದಂಗಡಿಯ ಟೇಬಲ್ ಬಳಿಯೆ ಕೇಸ್ ವರ್ಕರ್ ಗಳು ಮುಗಿಸಿಕೊಳ್ಳು ವದೂ ಅನುಭವಸ್ತರ
ಎಷ್ಟು ಬರೆದರೂ ಈ ಚಹಾಯಣ ಮುಗಿಯಲಾರದು.ಎಲ್ಲ ಚಹಾಪ್ರಿಯರ ಅನುಭವಗಳು ಒಬ್ಬರಿಗಿಂತ ಒಬ್ಬರವು ಭಿನ್ನಮತ್ತು ಶ್ರೀ ಮಂತ ಆಗಿರುವದು ಕಾಣಬರುತ್ತದೆ. ಚಹಾಯಣವಂತೂ ರಾಮಾಯಣ ಕ್ಕಿಂತ ದೀರ್ಘವಾಗುತ್ತದೆ.
ಚಹಾ ಕುಡಿಯುವದನ್ನು ಒಂದು ಬಗೆಯ habit ಎನ್ನುವ ಇಂಗ್ಲಿಷರ ಅದು ತೀರಾ ಕನಿಷ್ಟತಮ ಚಟ ಎನ್ನುತ್ತಾರೆ. ಅಂದರೆ ಯಾವ ಚಟವಿ ರದಿದ್ದರೂ ಚಹಾ ಚಟವಾದರೂ ಇದ್ದೇ ಇರುತ್ತದೆ ಎನ್ನುದದಕ್ಕೆ ಚಮತ್ಕಾರಿಕವಾಗಿ ಹೇಳುವದಿದೆ .habit ಪದದಲ್ಲಿ h ಹೋದರೆ a bit (ಸ್ವಲ್ಪ) ಉಳಿಯುವದಂತೆ .a ಹೋದರೆ bit (ತೀರ ಸ್ವಲ್ಪ) ಉಳಿಯುವದಂತೆ.b ಹೋದರೆ it (ಇದು) ಉಳಿಯುತ್ತದೆ.I ಹೋದಮೇಲೆ t ( ಚಹಾ) ಉಳಿದೆ ಉಳಿಯುತ್ತದೆ ಎನ್ನುತ್ತಾರೆ. ಕಡೆಗೆ t ಕುಡಿಯುವ ಚಟವಂತೂ ಕನಿಷ್ಟ ಇದ್ದೇ ಇರುತ್ತದೆ ಎಂಬ ಭಾವನೆ ಅಲ್ಲಿ ಹೊರಹೊಮ್ಮುತ್ತದೆ.
ಚಹಾ ಬೇರೆ ದೇಶದಿಂದ ಬಂದ ಪೇಯ ಎಂದು ವಿಜ್ಞಾನಿಗಳು ಹೇಳುತ್ತಾರೆ.ಆದರೆ ಅದು ಭಾರತೀಯರ ಅತ್ಯಂತ ಪ್ರಿಯ ಪೇಯವಾಗಿರುವದಂತೂ ಸತ್ಯ.ತಲೆ ನೋಯುವವರಿಗೆ, ಜ್ವರ ಬಂದ ರೋಗಿಗಳಿಗೆ ಇದು ದಿವ್ಯೌಷಧಿ. ದಿನಕ್ಕೆ ಎಷ್ಟು ಸಲ ಚಹಾ ಕುಡಿಯಬೇಕು ವೈದ್ಯರು ಏನೆಲ್ಲ ನಿಯಮ ಹೇಳಿದರೂ ನಾಲ್ಕಾರು ಸಲ ಅರ್ಧ ಕಪ್ ಚಹಾ ಸೇವನೆ ನಮ್ಮ ರೂಢಿಯಾಗಿದೆ ಎನ್ನುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ಅಂತೂ ಚಹಾ ಇಲ್ಲದೆ ಬದುಕುವ ಭಾರತಿಯರ ಸಂಖ್ಯೆ ತೀರಾ ಕಡಿಮೆ..ಚಹಾ ಕುಡಿಯುವ ಚಟ ಇಲ್ಲದವರು ಒಂದು ರೀತಿಯಲ್ಲಿ ನಮಗೆ ದೇವತೆಗಳ ಹಾಗೆ ಕಾಣಿಸುವದು ಸುಳ್ಳಲ್ಲ.
ಎಲ್ಲರಿಗೂ ಚಹಾ ದಿನದ ಶುಭಾಶಯಗಳು

ಡಾ.ವೈ.ಎಂ.ಯಾಕೊಳ್ಳಿ
ಸಇಂದು ೨೦/೦೫/೨೦೨೬ಚಹಾದ ದಿನವಂತೆ..ಚಹಾ ಇಲ್ಲದೆ ಸೂರ್ಯೋದಯವೇ ಆಗದ ನಮಗೆ ಅಂದರೆ ಉತ್ತರ ಕರ್ನಾಟಕದ ಮಂದಿಗೆ ಚಹಾಕ್ಕೊಂದು ದಿನವಿದೆಯಂದರೆ ನಗೆ ಬರುತ್ತದೆ.ಹಾಗೆ ನೋಡಿದರೆ ನಮ್ಮ ಜನಕ್ಕೆ ಯಾಕೊ ಕಾಫಿ ಕಂಡರೆ ಅಷ್ಟಕ್ಕಷ್ಟೇ. ನಮ್ಮಪ್ರಕಾರ ಎಲ್ಲದಕ್ಕೂ ದಿವ್ಯೌಷಧಿ ಚಹಾನೆ.ಅಂತೆಯೆ ಅದನ್ನು ದೇವಲೋಕದ ಅಮೃತ ಎಂದು ಕರೆಯುವದೂ ಇದೆ.