ಮಾನಸ ಸಂಗಾತಿ
ರೇವತಿ ಶ್ರೀಕಾಂತ್
“ಕೋಪವೆಂಬುದು ಆನರ್ಥ ಸಾಧನ”

ಕೋಪ ಎನ್ನುವುದು ಒಂದು ಸಹಜ ಭಾವ. ಏನು ಹೇಳುತ್ತಿದ್ದೀನಿ, ಲೇಖನದ ಶೀರ್ಷಿಕೆಗೆ ವಿರುದ್ಧವಾದದ್ದು ಹೇಳುತ್ತಿದ್ದೇನೆ ಎಂದು ಯೋಚಿಸಬಹುದು. ಆದರೆ ಕೋಪ ಎನ್ನುವ ಸಹಜ ಭಾವ ಮಿತಿ ಮೀರಿದಾಗ ಅನರ್ಥ. ಕೋಪ ಎನ್ನುವುದು ಯಾವಾಗ ಬರುತ್ತದೆ ?
ಅದನ್ನು ನಿಯಂತ್ರಿಸದಿದ್ದರೆ ಏನಾಗುತ್ತದೆ? ಎಲ್ಲವನ್ನೂ ವಿಮರ್ಶೆ ಮಾಡೋಣ.
ನಮಗೆ ಇಷ್ಟವಾಗದ ಒಂದು ಮಾತು, ನಮ್ಮ ಅಸ್ತಿತ್ವಕ್ಕೆ ಧಕ್ಕೆ ತರುವ ಒಂದು ಭಾವ, ನಮ್ಮ ಅಹಂಕಾರಕ್ಕೆ ಬಿದ್ದ ಪೆಟ್ಟು ನಮ್ಮಲ್ಲಿ ಕೋಪವನ್ನು ಹುಟ್ಟಿಸುತ್ತದೆ. ನಿರಂತರ ಪ್ರಯತ್ನದಿಂದ ಸಾಧಿಸಲಾಗದ ವಿಷಯಗಳು ನಮ್ಮಲ್ಲಿ ಹತಾಷೆ ಮುಡಿಸುತ್ತದೆ. ಆ ಹತಾಷೆ ಕೋಪವನ್ನು ಉಂಟುಮಾಡುತ್ತದೆ. ಮುಂದೆ ಕೋಪ ಬಂದರೆ ಏನಾಗುತ್ತದೆ? ಅದು ಮನಸಿಗೆ ಮಾತ್ರ ಸಂಬಂಧಿಸಿದೆಯಾ ಅಥವಾ ಡೈಹಿಕವಾಗಿ ಸಂಬಂಧ ಇದೆಯಾ ಎಂದು ತಿಳಿಯೋಣ.
ಕೋಪ ಬಂದಾಗ ನಮ್ಮ ದೇಹದಲ್ಲಿ ಏನು ಬದಲಾವಣೆ ಆಗುತ್ತದೆ ಎoದರೆ ನಮ್ಮ ಉಸಿರಾಟ ತೀವ್ರವಾಗುತ್ತದೆ, ರಕ್ತ ಸಂಚಾರ ಮುಖದ ಕಡೆ ಹೆಚ್ಚು ಇರುತ್ತದೆ. ಆದ್ದರಿಂದ ಮುಖ ಕೆಂಪಾಗುತ್ತದೆ. ಪಿತ್ತ ನೆತ್ತಿಗೆರಿತು ಎಂಬ ಮಾತು ಬರಿಯ ಮಾತಲ್ಲ, ಆದರೆ ಸತ್ಯ. ತಲೆ ಸುತ್ತುತ್ತದೆ, ಎದೆ ಬಡಿತ ತೀವ್ರವಾಗುತ್ತದೆ, ಮಾತು ತೊದಲುತ್ತದೆ….. ಏನೆಲ್ಲಾ ಆಗುತ್ತದೆ ನೋಡಿ……
ಇವೆಲ್ಲ ಬದಲಾವಣೆ ನಮ್ಮ ದೇಹದಲ್ಲಿ ಇರುವುದು ಕೇವಲ 90 ಸೆಕೆಂಡ್ ಗಳು ಮಾತ್ರ. ಆದರೆ ಈ ತೊಂಬತ್ತು ಸೆಕೆಂಡ್ ಗಳು ನಮ್ಮ ಬದುಕಿನ ದಿಕ್ಕನ್ನೇ ಬದಲಿಸಬಲ್ಲದು. ನಮ್ಮನ್ನು ಕೋಪದ ಕೈಲಿ ಕೊಟ್ಟುಕೊಂಡರೆ…,
ಈ ತೊಂಬತ್ತು ಸೆಕೆಂಡ್ ಅಥವಾ ಒಂದೂವರೆ ನಿಮಿಷ ನಾವು ಪ್ರತಿಕ್ರಿಯೆ ತೋರಿಸದಿದ್ದರೆ ಅದರ ಪ್ರಭಾವ ಕಡಿಮೆಯಾಗಿ ನಮ್ಮ ಪ್ರತಿಕ್ರಿಯೆ ತೀವ್ರತೆ ಕಡಿಮೆಯಾಗುತ್ತದೆ. ಇದು ಕೋಪದ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ ಮಾತ್ರವಲ್ಲ ಸತ್ಯಂಶ.
ಈ ಅವಧಿಯಲ್ಲಿ ನಾವು ಪ್ರತಿಕ್ರಿಯಿಸುವುದನ್ನು ಹೇಗೆ ತಪ್ಪಿಸಬಹುದು? ಇದಕ್ಕೆ ಕೆಲವು ಉಪಾಯಗಳಿವೆ.
1.ಸ್ವಲ್ಪ ನೀರು ಕುಡಿಯುವುದು.
2.ಆ ಜಾಗದಿಂದ ಎದ್ದು ಹೋಗುವುದು,
3.ಸಂಖ್ಯೆಯನ್ನು riverse order ನಲ್ಲಿ ಎಣಿಸುವುದು…..
4.ಯಾವುದಾದರೂ ಜಪ ಮಾಡುವರಾದರೆ ದೇವರ ನಾಮವನ್ನು ಜಪಿಸುವುದು..…
ಹೀಗೆ ಈ ಪರಿಸ್ಥಿತಿಯನ್ನು ತಪ್ಪಿಸುವುದರ ಮೂಲಕ ಎಷ್ಟೋ ಸಂಬಂಧಗಳನ್ನು ಉಳಿಸಬಹುದು.
ಇನ್ನು ಕೋಪ ಎನ್ನುವುದು 4 ಹಂತಗಳಲ್ಲಿ ವ್ಯಕ್ತವಾಗುತ್ತದೆ.
1.ಕೋಪ
2.ತಾಪ
3.ರೋಷ
4 ದ್ವೇಷ
ಕೋಪ -ಇದು ಸಹಜವಾದ ಹಂತ. ಕೋಪ ಬಂದಾಗ ಒಬ್ಬೊಬ್ಬರು ಒಂದೊಂದು ರೀತಿ ಪ್ರತಿಕ್ರಿಯಿಸುತ್ತಾರೆ. ಉದಾಹರಣೆಗೆ ಕೆಲವರು ಮಾತು ಬಿಡುತ್ತಾರೆ, ಇನ್ನು ಕೆಲವರು ಅಭಿಪ್ರಾಯ ಭೇದವನ್ನು ವ್ಯಕ್ತ ಪಡಿಸುತ್ತಾರೆ. ಮತ್ತೆ ಕೆಲವರಿಗೆ ಹೇಳುವ ಧ್ಯರ್ಯ ಇಲ್ಲದೆ, ಹಲ್ಲು ಕಚ್ಚುವುದು, ಹೆಂಗಸರು ಸಾಮಾನ್ಯವಾಗಿ ಮಾಡುವುದೆಂದರೆ ಪಾತ್ರೆ ಕುಕ್ಕುವುದು,, ಮಕ್ಕಳ ಮೇಲೆ ರೇಗುವುದು, ಇನ್ನು ಕೆಲವರು ಸೂಕ್ಷ್ಮ ಮನಸ್ಸಿನವರು ತಮ್ಮನ್ನು ತಾವೇ hurt ಮಾಡಿಕೊಳ್ಳುತ್ತಾರೆ.
2ಎರಡನೆಯ ಹಂತ ಎಂದರೆ, ತಾಪ ಎಂದರೆ ಕೋಪದ ಪರಿಣಾಮವಾಗಿ ಮೂಡಿದ after effect ಎನ್ನಬಹುದು. Stress ನಿಂದಾಗಿ ಶಾರೀರಿಕ ನೋವುಗಳು… ಇತ್ಯಾದಿ..
ರೋಶ –ಅನೇಕ ಪ್ರಯತ್ನಗಳ ನಂತರವೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಬರದಿದ್ದಾಗ ಮೂಡುವುದೇ ರೋಷ. ಇದನ್ನು frustration ಎಂದು ಕರೆಯಬಹುದು. ಇದು ಬಹಳ ಕಷ್ಟ. ಇದು ಮನುಷ್ಯನನ್ನು dipression ಗೆ ಬೇಕಾದರೂ ತಳ್ಳಬಹುದು ಇದು ಇನ್ನೂ ಮುಂದುವರೆದರೆ ತಮ್ಮನ್ನು ತಾವೇ ಮುಗಿಸುವ ಹಂತಕ್ಕೂ ಹೋಗಬಹುದು ಅಥವಾ ದ್ವೇಷಕ್ಕೆ ತಿರುಗಬಹುದು.
ದ್ವೇಷಕ್ಕೆ ತಿರುಗಿದವರಿಗೆ ಹೇಗಾದರೂ ಮಾಡಿ ಅವರನ್ನೂ ಹಾಳುಮಾಡಬೇಕು ಎನ್ನುವ ಆಕ್ರೋಶದಲ್ಲಿ ಕೊಲೆಯಂತಹ ಸಮಾಜ ಬಾಹಿರ ಕೃತ್ಯವೂ ನಡೆಯಬಹುದು.
ಆದ್ದರಿಂದ ಕೋಪವನ್ನು ಅರ್ಥಮಾಡಿಕೊಂಡು ಮನಸ್ತಾಪವನ್ನು ದೂರ ಮಾಡಿಕೊಂಡು ಸುಂದರ ಜೀವನ ನಡೆಸುವ ಜವಾಬ್ದಾರಿ ನಮ್ಮಮೇಲಿದೆ.
ರೇವತಿ ಶ್ರೀಕಾಂತ್
