ʼಅಂತರರಾಷ್ಟ್ರೀಯ ಒಲಿಂಪಿಕ್ ದಿನಕ್ಕೆʼ ಸಾಂದರ್ಭಿಕ ಲೇಖನ-ಗಾಯತ್ರಿಸುಂಕದ


ಒಲಿಂಪಿಕ್ ಸ್ಪರ್ಧೆಗಳಲ್ಲಿ ಪದಕ ಪಡೆಯುವುದು ಪ್ರತಿಯೊಬ್ಬ ಆಟಗಾರನ ಕನಸು.ಕೇವಲ  ಕೇವಲ  ಕಂಚಿನ ಪದಕ ತೆಗೆದು ಕೊಂಡರೆ ಜನ ತಮಗೆ ಸಿಕ್ಕಿದಷ್ಟು  ಸಂಭ್ರಮಿಸುತ್ತಾರೆ.
ಆ ದೇಶದ ರಾಷ್ಟ್ರಾಧ್ಯಕ್ಷ, ಪ್ರಧಾನ ಮಂತ್ರಿ ಕೂಡ ವೈಯುಕ್ತಿಕವಾಗಿ ಆಟಗಾರನನ್ನು  ಅಭಿನಂದಿಸುತ್ತಾರೆ. ಕೊಡುಗೆ ಗಳ ,ಬಹುಮಾನಗಳ ಸುರಿಮಳೆ ಆಗುತ್ತದೆ. ಕಳೆದ ಒಲಿಂಪಿಕ್ ನಲ್ಲಿ ಒಬ್ಬ ಆಟಗಾರನು ಕಂಚಿನ ಪದಕ. ಗಳಿಸಿದ್ದಕ್ಕೆ. ಇಡೀ ದೇಶಕ್ಕೇ ರಜೆ  ಘೋಷಿಸಲಾಗಿತ್ತು.  ಕ್ಷಮಿಸಿ, ಆ ದೇಶದ ಹೆಸರು ನೆನಪಿಗೆ ಬರುತ್ತಿಲ್ಲ.
ಅಂದ ಹಾಗೆ ಒಲಿಂಪಿಕ್ ಕ್ರೀಡೆಗಳನ್ನು ವಿಶ್ವದಲ್ಲಿ ಪ್ರಾರಂಭಿಸಿದವರು ಗ್ರೀಕರು. ಆಗ ಕೇವಲ ಐದು ಖಂಡಗಳನ್ನು ಗುರುತಿಸಲಾಗಿತ್ತು. ಆಗ ಸ್ಪರ್ಧೆಯಲ್ಲಿ ವಿಜೇತರಾದವರಿಗೆ. ಆಲೀವ್ ಎಲೆಗಳ ಕಿರೀಟವನ್ನು ನೀಡಲಾಗುತ್ತಿತ್ತು.ಈಗಲೂ ಒಲಿಂಪಿಕ್  ಧ್ವಜದ ಮೇಲೆ ಐದು ಖಂಡಗಳ ಗುರುತುಗಳನ್ನು  ನೋಡ ಬಹುದು.
ಮೊದಲನೇ ಮತ್ತು ಎರಡನೇ ಮಹಾಯುದ್ಧ ಗಳ ಸಮಯದಲ್ಲಿ ಸಹ ಒಲಿಂಪಿಕ್ ಸ್ಪರ್ಧೆಗಳನ್ನು ನಡೆಸ ಲಾಗಿತ್ತು.
ಒಲಿಂಪಿಕ್ ಸ್ಪರ್ಧೆಗಳ ವಿಶೇಷಗಳನ್ನು ನೆನೆಯಲೆಂದು ಪ್ರತಿ ವರ್ಷ ಜೂನ್ ತಿಂಗಳ 23ನೇ ತಾರೀಖು  “” ವಿಶ್ವ ಒಲಿಂಪಿಕ್ ದಿನ””ವನ್ನು  ಆಚರಿಸಲಾಗುತ್ತಿದೆ.


ಎರಡನೇ ಮಹಾ ಯುದ್ದದ ಸಮಯದಲ್ಲಿ ಒಲಿಂಪಿಕ್ ಸ್ಪರ್ಧೆಗಳು ನಡೆದಾಗ ಹಿಟ್ಲರ್  ನೀಗ್ರೋ ಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದನ್ನು ನೋಡಲಾರದೆ ಕ್ರೀಡಾಂಗಣದಿಂದ ಹೊರಗೆ ನಡೆದಿದ್ದ. ಆದರೆ ಅದೇ ಹಿಟ್ಲರ್ ಭಾರತೀಯ “” ಹಾಕಿ ಮಾಂತ್ರಿಕ””  ಧ್ಯಾನಚಂದ್.  ಗೋಲು ಬಾರಿಸಿ ಚಿನ್ನದ ಪದಕ ಗೆದ್ದಾಗ  ಆಶ್ಚರ್ಯ ಪಟ್ಟ ಹಿಟ್ಲರ್ ಧ್ಯಾನಚಂದ್ ನಿಗೆ ಜರ್ಮನಿಯ ಗೌರವ ಪೌರತ್ವ ಕೊಡುವುದಾಗಿ,ಆತನು ಜರ್ಮನಿಯ ಪರ ಆಡ ಬೇಕೆಂದು ಕೇಳಿ ಕೊಂಡಿದ್ದ.ಆದರೆ ದೇಶಭಕ್ತ ಧ್ಯಾನಚಂದ್ ಇದನ್ನು ನಯವಾಗಿಯೇ ನಿರಾಕರಿಸಿದ್ದ.ಆದರೆ ನಮ್ಮ. ದೇಶದಲ್ಲಿ ಕ್ರಿಕೆಟ್ಗೆ ಸಿಕ್ಕಷ್ಟು ರಾಜ ಮರ್ಯಾದೆ ಬೇರೆ ಕ್ರೀಡೆಗಳಿಗೆ ಸಿಗುತ್ತಿಲ್ಲ. ಚಿಕ್ಕ ಚಿಕ್ಕ ಗಲ್ಲಿ ಗಲ್ಲಿಗಳಲ್ಲಿ ಕೂಡ ಚಿಣ್ಣರು ಬ್ಯಾಟು ಮತ್ತು ಬಾಲಿನೊಡನೆ ನೋಡಲು ಸಿಗುತ್ತಾರೆ.


ಇನ್ನೂ ವಿಪರ್ಯಾಸವೆಂದರೆ, ಕೆಲವು ಕ್ರೀಡೆಗಳ ನೆನಪಾಗುವುದು ಒಲಿಂಪಿಕ್ ಸ್ಪರ್ಧೆಗಳು ಶುರುವಾಗುವುದು  ಮೇಲೆಯೇ. ಅಲ್ಲಿಯವರೆಗೆ ಆಯಾ ಕ್ರೀಡಾಪಟುಗಳು ಪಾಪ ನಮಗೆ ಅವರು ಅಪರಿಚಿತರು.
ಯಾವುದಾದರೂ ಸ್ಪರ್ಧೆಯಲ್ಲಿ  ಕೇವಲ ಕಂಚಿನ ಪದಕ ಸಿಕ್ಕಾಗ ನಮ್ಮ ನ್ಯೂಸ್ ಚನ್ನೆಲೆಗಳು ಪ್ರಸಾರ ಮಾಡಿದಾಗ ನಮ್ಮ ನಾಯಕರು ಎಚ್ಚೆತ್ತುಗೊಂಡು ಅವರಿಗೆ ಅಭಿನಂದನೆ ಗಳನ್ನುಸಲ್ಲಿಸಲು ಶುರು ಮಾಡುತ್ತಾರೆ.
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, ಅರ್ಜುನ ಪ್ರಶಸ್ತಿ ಬಂದಾಗ ಅವರು ಸೆಲೆಬ್ರಿಟಿ ಗಳಾಗಲು , ಕೆಲವೊಂದು ಕಂಪನಿಗಳು ಅವರನ್ನು ಬ್ರಾಂಡ್ ಅಂಬಾಸಿಡರ್ ಎಂದು ಘೋಷಿಸಿ, ಅವರ ಮುಖ ಟಿವಿಯಲ್ಲಿ ಬಂದಾಗ ಮಾತ್ರ ಅವರ ಮತ್ತು ಅವರು ಸಾಧಿಸಿದ ಕ್ರೀಡೆಯ ಪರಿಚಯ ಆಗುತ್ತದೆ.ನಮ್ಮ  ನ್ಯೂಸ್ಪೇಪರ್ಗಳಲ್ಲಿ ಕೂಡ ಕೊನೆಯ ಪೇಜನ್ನ್ನು ಕ್ರೀಡೆಗೆ ಇಟ್ಟಿರುತ್ತಾರೆ.,ನ್ಯೂಸ್ ಓದುವವರು ಕೂಡ ಕ್ರೀಡೆಗೆ ಸಂಭಂದಿಸಿದ ಸುದ್ದಿಯನ್ನು ಕೊನೆಗೆ ಓದುತ್ತಾರೆ.
ಕೊನೆಗೆ ನಮ್ಮಲ್ಲಿ ಕ್ರೀಡೆಗೆ ಬರ, ಪದಕಗಳಿಗೆ ಬರ ಎಂದು ಸರ್ಕಾರವನ್ನು ದೂರುತ್ತೇವೆ.


 ಸಂತೆಗೆ ಮೂರು ಮೊಳ ಸೀರೆ ನೇಯ್ದೆ ಹಾಗೆ ಒಲಿಂಪಿಕ್ ಸ್ಪರ್ಧೆಗಳು ಸಮೀಪ ಬಂದಾಗ  ಪರದಾಡಿ ಆಮೇಲೆ ಬೇರೆ ದೇಶಗಳು ಚಿನ್ನದ ಪದಕಗಳನ್ನು ಕೊಳ್ಳೆ  ಹೊಡೆಯುವುದನ್ನ್ನು ನೋಡಿ ಮುಖ ಸಣ್ಣದು ಮಾಡಿ ಕೂಡುತ್ತೇವೆ. ಪೊಡಿಯಂನಲ್ಲಿ ನಮ್ಮ ರಾಷ್ಟ್ರಗೀತೆ ಮೊಳಗ ಬೇಕಾದರೆ ಈಗಿನಿಂದಲೇ ತಯಾರಿ ಆಗಬೇಕು.ಯುದ್ಧ ಕಾಲೆ ಶಸ್ತ್ರಾಭ್ಯಾಸ ಎನ್ನುವುದು ಇನ್ನೂ ಮೇಲಾದರೂ ಮುಗಿಯಲಿ.
ನಮ್ಮ ಕ್ರೀಡಾಪಟುಗಳು  ರಾಷ್ಟ್ರ ಧ್ವಜವನ್ನು ಎತ್ತಿ ಹಿಡಿದು ಸಂಭ್ರಮಿಸುವಂತಾಗಲಿ.


Leave a Reply

Back To Top