ಅನುವಾದ ಸಂಗಾತಿ
ಕನಕ – ಕೃಷ್ಣ
ಕನ್ನಡ ಮೂಲ : ಸವಿತಾ ನಾಗಭೂಷಣ
ಇಂಗ್ಲೀಷ್ ಅನುವಾದ : ಪಿ. ಶಶಿಕಲಾ, ಚಾಮರಾಜನಗರ.
ಕನಕ – ಕೃಷ್ಣ
ಕನಕ ಕುರಿ ಕಾಯುತ್ತಿದ್ದ
ಕೃಷ್ಣ ದನ ಮೇಯಿಸುತ್ತಿದ್ದ
ಪರಿಚಯವಾಯಿತು ಹೆಚ್ಚೇನಿಲ್ಲ…
ಕನಕ ರೊಟ್ಟಿ ಒಯ್ಯುತ್ತಿದ್ದ
ಕೃಷ್ಣ ಬೆಣ್ಣೆ ಹಚ್ಚುತ್ತಿದ್ದ
ಹಂಚಿಕೊಂಡು ಉಂಡರು ಹೆಚ್ಚೇನಿಲ್ಲ…
ಕನಕನಿಗೆ ಹಾಡು ಕಟ್ಟುವ ಹುಚ್ಚು
ಕೃಷ್ಣನಿಗೆ ಕೊಳಲು ಅಚ್ಚುಮೆಚ್ಚು
ಗೆಳೆತನ ಕುದುರಿತು ಹೆಚ್ಚೇನಿಲ್ಲ…
ಕನಕ ಬ್ಯಾ ಬ್ಯಾ ಎಂದೂ
ಕೃಷ್ಣ ಅಂಬಾ ಎಂದೂ
ಕಿರ್ ಕಿರ್ ಮುರ್ ಮುರ್ ಕೂಗು ಹಾಕಿ
ಕೂಡಿ-ಆಡಿ ನಲಿದರು ಹೆಚ್ಚೇನಿಲ್ಲ…
ಕೃಷ್ಣ ಮಹಾ ತುಂಟ,ತುಡುಗ,
ತರಲೆ, ಜಗಳಗಂಟ…
ಕನಕ ಅವನ ಭಂಟ,ನೆಂಟ ಸರ್ವಸ್ವ…
ಇಬ್ಬರೂ ಕೂಡಿ ಬಾಳಿದರು ಹೆಚ್ಚೇನಿಲ್ಲ..
ಕುಲದ ನೆಲೆಯಿಲ್ಲ, ಕಾಲದ ಹಂಗಿಲ್ಲ
ಕನಕ ಮಣ್ಣಾದ..ಕೃಷ್ಣ ಕಲ್ಲಾದ
ಇದೊಂದು ಕಲ್ಲು-ಮಣ್ಣಿನ ಕಥೆ ಹೆಚ್ಚೇನಿಲ್ಲ…
Kanaka-Krishna
Kanaka, a shepherd,
Krishna, a cowboy
Nothing more than they
Familiarized each other.
Kanaka was carrying bread
Krishna, made it buttered
Nothing more than they
Shared with each other.
Kanaka was a song weaver
Krishna, flute was his favor
Nothing more than they
Befriended each other.
Kanaka called his sheep bya-bya
Krishna, his herd ambaa..
Both were yelping kirr-murr
Nothing more than they
Played with each other.
Krishna, naughty, boyish,
Messy.. troubling
Kanaka his loving relation,
Tie-in, bearing
Nothing more than they
Both lived with each other.
No race settled, no favor lived
Kanaka was soiled, krinsha, stoned
This is nothing more than
A stone-soil tale ever weaved together.
ಕನ್ನಡ ಮೂಲ : ಸವಿತಾ ನಾಗಭೂಷಣ
ಇಂಗ್ಲೀಷ್ ಅನುವಾದ : ಪಿ. ಶಶಿಕಲಾ, ಚಾಮರಾಜನಗರ.