ವಿಲಿಯಂ ವರ್ಡ್ಸ್ವ ವರ್ತ್ ಅವರWritten in Early Spring.ಕವಿತೆಯ ಭಾವಾನುವಾದ-ಪಿ.ವೆಂಕಟಾಚಲಯ್ಯ.

ದಟ್ಟನೆಯ ತೋಪಿನಲಿ, ಪ್ರಕೃತಿ ಮ ಡಿಲಲ್ಲಿ,
ನಾನಾ ರಾಗ ಆಲಾಪನೆಯನು ಕೇ ಳುತಲಿ,
ಕುಳಿತಿರೆ ನಿರಾಳದಲಿ,ಆನಂದ ಸಮ ಯದಲಿ,
ನೋವಿನ- ನಲಿವಿನ ತುಡಿತವು ಕವಿಯ ಮನದಲ್ಲಿ.

ಪ್ರಕೃತಿಯ ಅದ್ಭುತ ಸುಂದರ ಸೃಷ್ಟಿ ಯನು,
ಮಾನವಾವಳಿಯ ನಿರಂತರ ಅನು ಭೋಗವನು,
ನೆನೆನೆನೆದು ನುಡಿದನು ಕವಿ, ಹೃದಯ ಭಾರದಲಿ,
“ಮನುಜ, ಮನುಜನಿಗಾಗಿ ಮಾಡಿ ದಾದರು ಏನು?”

ಪ್ರಕೃತಿ ದತ್ತ ಸುಂದರ ವನ ರಾಜ್ಞಿ ಯ ನಡುವೆ,
ಸಾಲುಸಾಲು ವಿವಿಧ ಬಣ್ಣದ ಪುಷ್ಪ ಗಳು, ಅರಲಿರೆ,
ಸೋಜಿಗದಿಂದ ಮೈಮರೆಯುತಲಿ ಕವಿ, ನುಡಿದನು,
ಪ್ರತಿ ಹೂವು ಇಲ್ಲಿ, ಆನಂದದಿ ಉಸಿ ರಾಡುತಿದೆ.

ಕವಿಯ ಸನಿಹ ಪಕ್ಷಿಗಳು ಕಲೆತು ಆಡುತಿರೆ,
ಅವುಗಳ ಯೋಚನೆಗಳೇನೊ? ಕವಿ ತಾ ಅರಿಯನು.
ಆಟ,ನೋಟ,ಚೆಲ್ಲಾಟ ಬಣ್ಣಿಸಿದನಿಂತು.
ಆನಂದವಿದು, ರಂಜನೀಯ, ರೋಮಾಂ ಚನವು.

ಟಸಿಲೊಡೆದು ಮರಗಳಲಿ, ಕೊಂಬೆಗಳು ಹೊರ ಚಾಚಿ,
ವಾತಾವರಣದ ಪ್ರಾಣವಾಯುವನು, ಸೆಳೆದು,
ಉಸಿರಾಡುವುದನು ಕಂಡ ಕವಿ, ದಿಟದಿಂ ನುಡಿಯೆ,
ಆನಂದವೆಂಬುದೆಲ್ಲವು, ಇರುವುದು ಇಲ್ಲಿಯೆ.

ಸ್ವರ್ಗವೇ ಇಳಿದು ಬಂದಿದೆ ಸಂಶಯ ಮಿಲ್ಲೈ,
ಇದು ಪ್ರಕೃತಿಯ ದಿವ್ಯ ಯೋಜನೆಯಲ್ಲ ವೇನು?
ಇದಕೆ ಕವಿಯು ಪರಿತಪಿಸುವ ಕಾರಣ ಮಿಲ್ಲೈ,
“ಮನುಜ , ಮನುಜನಿಗಾಗಿ ಮಾಡಿದಾ ದರು ಏನು?”


Leave a Reply

Back To Top