ಅನುವಾದ ಸಂಗಾತಿ
ಶಾಪ
ಇಂಗ್ಲೀಷ್ ಮೂಲ: ಡಾ. ಸೌಮ್ಯ ಎ
ಕನ್ನಡಾನುವಾದ: ಡಾ.ನಟರಾಜ್ ಎಸ್ ಎಂ
ಪುಟ್ಟ ಮಗುವೊಂದು
ಒದ್ದೆಯಾದ ಪೊದೆಯ ಮೇಲೆ
ಮಿಲನದಲಿ ಮೈಮರೆತ
ಚಿಟ್ಟೆಗಳೆರಡನ್ನು ಬೇರ್ಪಡಿಸಲು
ಹರಸಾಹಸ ಮಾಡಿತ್ತು
ಅವು ಅಂಟಿಕೊಂಡಿವೆ
ಪಾಪ ಸಹಾಯ ಬೇಕೇನೋ
ಎಂದುಕೊಂಡ ಮಗು
ಬೇರ್ಪಡಿಸಲು ಕೊನೆಗೂ ಸೋತು
ಅವುಗಳನ್ನು ಪೊದೆಯ ಮೇಲೆಯೇ
ಬಿಟ್ಟು ಕನಿಕರವ ತೋರಿತ್ತು
ಅವಳು ಬೆಳೆದು ಯೌವನಕ್ಕೆ ಕಾಲಿಟ್ಟು
ಯಾವುದೂ ಅವಳನ್ನು ಕರಗಿಸದಿದ್ದಾಗ
ಭಯದಿಂದ ಮೈ ತಣ್ಣಗಾಗಿ
ಚಿಟ್ಟೆಗಳು ಕೊಟ್ಟಿರುವ
ಶಾಪದ ನೆನಪು ಮರುಕಳಿಸಿತು
-ಡಾ. ನಟರಾಜು ಎಸ್ ಎಂ