ಮನ್ಸೂರ್ ಮೂಲ್ಕಿ ಅವರ ಕವಿತೆ-ಕತ್ತಲೆ

ಜಗವನ್ನೇ ಕಾಣಿಸಿದ ತಾಯಿಯ ಪ್ರೀತಿ
ಮನದಲ್ಲಿ ನೂರೊಂದು ನೋವಿತ್ತು
ಕಂಡಂತ ಕನಸು ಬಾಳಲ್ಲಿ ಸಿಗದೇ
ಮುಪ್ಪಾಗಿ ಬರಿದಾಗಿ ಹೋಯ್ತು

ಹೊತ್ಕೊಂಡ ಬಾರ ಕೊಟ್ಟಂತ ಜನ್ಮ
ನಿದ್ದೆಯೇ ಇರದ ರಾತ್ರಿಗಳು
ದೇವನ ಮೇಲಿಟ್ಟ ನಂಬಿಕೆಯಲ್ಲಿ
ಬದುಕು ತೋರಿದ ದಾರಿಗಳು

ಯವ್ವನದ ಬದುಕು ಬಾನನ್ನೇ ದಿಟ್ಟಿಸಿ
ಚಂದ್ರನ ಹೊಳಪನ್ನು ನೋಡಿತ್ತು
ಮೆಲ್ಲಗೆ ನಗುವನ್ನು ತಣ್ಣಗೆ ಬೀರಿ
ಹೊಳೆಯುವ ಕನಸನ್ನು ಕಂಡಿತ್ತು.

ಸುಗಂಧವೇ ಇರಬೇಕೇ ಈ ಬಾಳಲಿ
ಶ್ರೀಮಂತಿಕೆ ಪ್ರೀತಿಗೆ ಮಾಪನವೆ
ಬೆಳಕಿನ ಒಳಗಿನ ಬದುಕಿನಲಿ
ಕತ್ತಲೆ ಇರುವುದು ಸಹಜವೆ.

—————————

Leave a Reply

Back To Top