ಮುಂಗಾರಿನ ಮಳೆಯಲಿ
ಅಂಗಳಲಿ ಕುಳಿತಿರಲು
ರಂಗಾಗಲು ಕೆನ್ನೆಗಳು ನಿನ್ನನೆಯಲು
ಕಂಗಳಿಗೆ ಮಳೆಹನಿಯು
ಸಂಗದಿಂದ ಜೊತೆಗಿರಲು
ಮುಂಗುರುಳ ಒದ್ದೆಯಾಗಿ ಸುಮ್ಮನಿರಲು||

ಮೋಡಗಳು ಕಪ್ಪಾಗಲು
ಹಾಡಗಲೇ ನೆನಪಾಗಲು
ಹಾದಿಯಲಿ ಹರಿಯುವ ಹೊಳೆಯಾಗಲು
ನಡೆಯುತ ಬಂದಿರುವೆ
ಕಡೆಗಣಿಸಿ ನೋಡುತಿರಲು
ಕಾಡಬೇಡ ನೀನಿನ್ನೂ ಮರೆಮಾಚಲು||

ಅಧರದಿ ನಾಚಿಕೆಯು ತುಂಬಿರಲು
ಆಚೆಯಲ್ಲ ಕಾಣುತಿರಲು
ತ್ವಚೆಯಲಿ ಸುಗಂಧವ ಬೀರುತಿರಲು
ಕಚ್ಚಾಡಿದ ನುಡಿಗಳು
ರೊಚ್ಚಿಗೆದ್ದು ಬಂದಿರಲು
ಪಚ್ಛೆಮೋರಿ ಹಾಕುತ್ತವೆ ಆತುರದಲು||

ಇಬ್ಬನಿಯ ಮುನಿಸಿನಂತೆ
ಕರಗಿದರು ಒಲವು
ಮತ್ತದೇ ಒಲವಿನ ಸಿಂಚನ
ಗಟ್ಟಿಯಾಗಿ ಸುರಿಯದೆ
ಈ ಗೆಲುವು…. ಪ್ರೇಮದೊಲವು||


Leave a Reply

Back To Top