ವ್ಯಾಲಂಟೈನ್ ವಿಶೇಷ
ಲಲಿತಾ ಮ ಕ್ಯಾಸನ್ನವರ
ನಮ್ಮಿಬ್ಬರ ಬಾಳಿನ ವಿಷಯ
ಕೈಬೆರಳ ಕುಲುಕಾಟ
ತುಟಿಯಂಚಿನ ನಗೆಯಾಟ
ಹ್ರದಯದಿ ಅಲುಗಾಟ
ಹೆಚ್ಚಿಸಿದೆ ಸಾಂಗತ್ಯದ ಹುಚ್ಚಾಟ
ನನಗೆ ನೀನು ನಿನಗೆ ನಾನು
ಬಾಳಪಯಣದಿ ಸವಿನೆನಪಿನತನನ
ಜೊತೆ ಜೊತೆಯಲಿ ಹಿತದಲಿ
ಹದದಲಿರಲಿ ಎಂದೆಂದೂ
ಕಳೆದ ಕ್ಷಣಗಳು ನಮಗಾಗಿ ಚೂರು
ಗೊತ್ತಾಗಲೇ ಇಲ್ಲ ಇನಿಯ…
ಹಿತವಾಗಿ ಸವಿಯೋಣ ಗೆಳೆಯ
ಜೀವನ ಕ್ಷಣದಿ ಎದುರಾಗುವ ಬೇವುಬೆಲ್ಲವಾ…
ಲಲಿತಾ ಮ ಕ್ಯಾಸನ್ನವರ