ಮನದ ಕದ ಬಡಿದಾಗ…
ತುಸು ಮೌನ ಭರವಸೆಯ ಹೊಂಗಿರಣ
ಮನದೊಳಗೆ ನಕ್ಷತ್ರಗಳ ಸಂಚಲನ
ಪ್ರೇಮಲೋಕದಲ್ಲಿ ಗೆಜ್ಜೆಯನಾದವಿತ್ತು

ನಂಬಿಕೆಯ ಬೇರು ಭೂಮಿಗಾಪ್ತವಾಗಿತ್ತು
ಸೂರ್ಯ ಚಂದ್ರರಷ್ಟೇ ಪ್ರಕಾಶಮಾನ
ಭಾವನೆಗಳ ಹೂ ಮಳೆ ಸುರಿದು
ಪ್ರೇಮಪಲ್ಲಕ್ಕಿಯಲ್ಲಿ ಶೋಭಾಯಮಾನ

ತಂಗಾಳಿ ಮುಂಗುರುಳ ಸರಿಸಿ ಪಿಸುಗುಟ್ಟಿ
ಉಸಿರಲು ಪ್ರೇಮ ಹಸಿರಾಗಿತ್ತು
ಪ್ರೇಮ ಕವಿತೆಯೊಂದು ಬಸಿರೊಡೆದು ಬಂದು
ಇನಿಯಗೆ ಪ್ರೇಮದ ಕಾಣಿಕೆಯಾಗಿತ್ತು

ಅನುರಾಗ ಹಾಡಾಗಿ ನಲಿದು
ಪ್ರೀತಿಯ ಹಡಗು ತೇಲುತ್ತಿತ್ತು
ಪ್ರೇಮದರಮನೆಯಲ್ಲಿ ಕತ್ತಲು ಕವಿದಾಗ
ಹಿತ್ತಲ ಬಾಗಿಲಿಗೆ ಕದವಿರಲಿಲ್ಲ.


Leave a Reply

Back To Top