ಕನ್ನಡ ಮೂಲ: ಸುಬ್ರಾಯಚೊಕ್ಕಾಡಿ.
ಇಂಗ್ಲೀಷಿಗೆ: ನಾಗರೇಖಾ ಗಾಂವಕರ್
Two faces
—————-
An absolute truth
that a coin poses two faces.
It is to be used
in the game of
King and Queen,
to get solution for
the choice confusion.
Both sides of a coin
stuck together
with their backs
like siamese
to be Inseparable
one survives only
when another exists.
But now the coin
jumped off
the pocket.
stood outside in a street
like a flagpole
posed its faces
with a stare at
north and
south horizons
middle stood a metal wall
Just like never
to be united.
to be a fixed frame
of harsh reality
that never encounter with each other.
Translated by —
NagarekhaGaonkar
——————————————————————–
ಎರಡುಮುಖ
ಆನಾಣ್ಯಕ್ಕೆಎರಡುಮುಖಗಳು
ಇರುವುದಂತೂ ಸತ್ಯ.
ರಾಜ-ರಾಣಿ ಆಟಕ್ಕೆ
ಆಯ್ಕೆಯ ಗೊಂದಲ ನಿವಾರಣೆಗೆ
ಒದಗಿ ಬರುತ್ತಿದ್ದ ಆನಾಣ್ಯದ
ಎರಡು ಮುಖಗಳು ಬೆನ್ನಿಗೆ ಬೆನ್ನಾಗಿ ಅಂಟಿಕೊಂಡಿದ್ದವು-
ಸಯಾಮಿ ಅವಳಿಗಳಂತೆ-
ಬೇರ್ಪಡಿಸಲಾಗದ ರೀತಿಯಲ್ಲಿ
ಒಂದರ ಅಸ್ತಿತ್ವ ಇರುವುದೇ ಇನ್ನೊಂದರ ಇರುವಿಕೆಯಲ್ಲಿ
ಆದರೆ ಈಗ ಜೇಬಿಂದ ಠಣ್ಣೆಂದೆಗರಿದ ನಾಣ್ಯ
ಹೊರಗುರುಳಿ ನಿಂತಿದೆ ಬೀದಿಯಲ್ಲಿ
ಗರುಡಗಂಭದಂತೆ
ಒಂದು ಮುಖ ಉತ್ತರಕೆ
ಇನ್ನೊಂದು ಮುಖ
ದಕ್ಷಿಣಕ್ಕೆ- ಕ್ಷಿತಿಜದ ಕಡೆಗೆ ಕಣ್ಣಿಟ್ಟು
ನಡುವೆ ನಿಂತಿದೆ ಲೋಹದ ಗೋಡೆ
ಎಂದೆಂದೂ ಒಂದಾಗದ ರೀತಿಯಲ್ಲಿ.
ಮುಖಗಳೆರಡೂ ಮುಖಾಮುಖಿಯಾಗದೆ
ಎರಡಾಗಿಯೇ ಉಳಿಯುವ
ಕಠೋರ ವಾಸ್ತವದ ಸ್ಥಿರ ಚಿತ್ರವಾಗಿ.
======
—–
ಸುಬ್ರಾಯಚೊಕ್ಕಾಡಿ.