‘ಪ್ರಯಾಣವೆಂಬ ವ್ಯಸನ ಮತ್ತು ನಾವು’ ಲಲಿತಪ್ರಬಂಧ-ಜ್ಯೋತಿ , ಡಿ‌, ಬೊಮ್ಮಾ.

ಇತ್ತೀಚೆಗೆ ಪ್ರಯಾಣ ಒಂದು ಎಲ್ಲರ ಮೆಚ್ಚಿನ ಹವ್ಯಾಸವಾಗಿದೆ. ಉಚಿತ ಬಸ್ ಅನುಕೂಲವಾದ ಮೇಲೆ ಮಹಿಳೆಯರಿಗೆ ಪ್ರಯಾಣದ ಪ್ರವಾಸದ ಆಸಕ್ತಿ ಹೆಚ್ಚಾಗಿದೆ ಎಂಬ ವಾದ ನಾನು ಒಪ್ಪಲಾರೆ.ಆಸಕ್ತಿ ಹಿಂದೆಯೂ ಇತ್ತು . ಆದರೆ ಈಗ ಸೌಲಭ್ಯ ಒದಗಿದೆ ಅಷ್ಟೆ. ಈಗ ನಾನು ಹೆಳುತ್ತಿರುವದು ಫ್ರೀ ಬಸ್ ಪ್ರಯಾಣದ ಬಗ್ಗೆ ಅಲ್ಲ.ಪ್ರಯಾಣವೆಂಬುದು ಒಂದು ಟ್ರೇಂಡ್ ಆದ ಬಗ್ಗೆ. ಅಂದರೆ ಹಿಂದೆಲ್ಲ ಪ್ರಯಾಣ ಎಂದರೆ ಒಂದು ನಿರ್ದಿಷ್ಟ ಕೆಲಸ ಕಾರ್ಯಗಳಿಗಾಗಿ ಓಡಾಡಬೇಕಾದ ಅಥವಾ ಊರುಗಳಿಗೆ ತೆರಳಬೇಕಾದ ಸಂದರ್ಭವನ್ನು ಪ್ರಯಾಣಿಸುವದು ಎಂಬ ಅರ್ಥದಲ್ಲಿ ಹೆಳಲಾಗುತಿತ್ತು. ಆದರೆ ಇತ್ತಿಚೆಗೆ  ಸುಮ್ಮನೆ ಒಂದು ಲಾಂಗ್ ಡ್ರೈವ್ ಹೋಗುವದೋ , ಅಥವಾ ಹೊತ್ತು ಹೋಗುತ್ತಿಲ್ಲವೆಂದು ಬೈಕ್ ಸ್ಟಾರ್ಟ್ ಮಾಡಿ ಒಂದು ಸುತ್ತ ಹೋಗಿ ಬರುವದು , ಯಾರಾದರೂ ಊರಿಗೆ ಹೋಗುತಿದ್ದರೆ ಒಂದು ಸೀಟ್ ಖಾಲಿ ಇದೆ ಎಂದು ಅವರೊಂದಿಗೆ ಹೋಗಿ ಬರುವದು ಹೀಗೆ ಕಾರಣವಿಲ್ಲದೆ ಓಡಾಡುವದು ಒಂದು ಹವ್ಯಾಸವಾಗಿದೆ. ಹೀಗೆ ಕಾರಣವಿಲ್ಲದೆ ಪ್ರೀ ಬಸ್ ಇದೆ ಎಂದು ಮಹಿಳೆಯರು ಸುಮ್ಮನೆ ಓಡಾಡುತ್ತಾರೆ ಎಂದು ಹರಿದಾಡುವ ಜೋಕ್ ಗಳಲ್ಲಿ ಯಾವದೇ ತಿರುಳಿಲ್ಲ.
ಆದರೆ ಸ್ವತಃ ವಾಹನವಿರುವವರು ಕಾರಣವಿಲ್ಲದೆ ಒಂದು ಲಾಂಗ್ ಡ್ರೈವ್ ಹೋಗಿ ಬರುವ ಮಹಿಳೆಯರು ಇರುವರು ಎನ್ನುವದು ಅಲ್ಲಗಳೆಯಲಾಗದು. ಪ್ರಯಾಣಿಸುವ ಆಸಕ್ತಿ ಹೆಚ್ಚಾಗಲು ಕಾರಣ ಎಲ್ಲರೂ ಸ್ವತಃ ವಾಹನ ಹೊಂದಿರುವದರಿಂದ. ನಾವು ಚಿಕ್ಕವರಿದ್ದಾಗ ಊರಿಗೆ ಹೋಗಬೇಕಾದರೆ ಗಂಟೆಗಟ್ಟಲೆ ಬಸ್ಗಾಗಿ ಕಾಯಬೇಕಾಗುತಿತ್ತು. ಬಸ್ ಬರುವ ಟೈಮ್ ಗಿಂತ ಎರಡು ಗಂಟೆ ಮೊದಲೆ ಬಸ್ ಸ್ಟ್ಯಾಂಡ್ ನಲ್ಲಿ ಕಾಯುತ್ತ ನಿಲ್ಲುತಿದ್ದೆವು. ಬೇರೆ ಊರಿಗೆ ಹೋಗುವ ಬಸ್ ಗಳೆ ಬರುತಿದ್ದುವೆ ವಿಃನ ನಾವು ಊರಿಗೆ ಹೋಗುವ ಬಸ್ ಬೇಗ ಬರುತ್ತಲೆ ಇರಲಿಲ್ಲ.ಪ್ರತಿ ಸಲ ಊರಿಗೆ ಹೋಗುವಾಗಲೂ ಇದೇ ನನ್ನ ಅನುಭವ ಆಗಿರುತಿತ್ತು.ದಿನಾಲೂ ಸಮಯಕ್ಕೆ ಸರಿಯಾಗಿ ಬರುವ ಬಸ್ ನಾನು ಊರಿಗೆ ಹೋಗುವಾಗಲೇ ಬರದು ಎಂಬ ನನ್ನ ಅನಿಸಿಕೆ ಬಸ್ಸಿನ್ ಮೇಲೆ ಸಿಟ್ಟು ಮೂಡಿಸುತಿತ್ತು.
 ಚಿಕ್ಕವರಿದ್ದಾಗಿನ ನಮ್ಮ ಪ್ರಯಾಣದ ಅನುಭವಕ್ಕೂ ಈಗಿನ ಮಕ್ಕಳ ಪ್ರಯಾಣದ ಅನುಭವಕ್ಕೂ ಅದೇಷ್ಟು ವ್ಯತ್ಯಾಸ..!.  ಊರಿಗೆ ಹೋಗುವದೆಂದರೆ ಎಷ್ಟು ಸಂಭ್ರಮ . ಬೆಳಿಗ್ಗೆ ಏಳುವಾಗಲೆ ಗಡಿಬಿಡಿ , ಬೇಗ ಬೇಗ ತಯ್ಯಾರಾಗಿ ಬಸ್ ಹೋಗಿಬಿಡುತ್ತದೆ ಎನ್ನುವ ವಾಕ್ಯ ದೊಡ್ಡವರು ಅದೇಷ್ಟು ಸಾರಿ ಉಚ್ಚರಿಸುತಿದ್ದರೋ , ಎರಡು ಜಡೆ ಹೆಣೆದು ತುದಿಗೆ ಕೆಂಪು ರಿಬ್ಬನ್ ಕಟ್ಟಿ , ಬಲಗಡೆಯ ಜಡೆಗೆ ಹೂ ಮುಡಿದು , ಹಣೆಗೆ ಬಿಂದಿ ಇಟ್ಟುಕೊಂಡು , ಮುಖಕ್ಕೆ ಸ್ನೋ , ಪೌಡರ್ ಬಳಿದುಕೊಂಡು  ಫ್ರಾಕ್ ಚಿಮ್ಮಿಸುತ್ತ ಹೊರಗೋಡಿ ಓಣಿಯಲ್ಲಿನ ಅರ್ಧ ಜನಕ್ಕೆ ನಾನು ಊರಿಗೆ ಹೋಗುತ್ತಿರುವದರ ಬಗ್ಗೆ ಡಂಗೂರ ಸಾರಿ ಬರುತಿದ್ದೆ.ನಮ್ಮ ಊರಿಗೆ ಹೋಗುವ ಬಸ್ ಬಂದಾಗಲಂತೂ ಅದೇಷ್ಟು ಸಂಭ್ರಮ. ಕಿಟಕಿ ಹತ್ತಿರ ಸೀಟು ದೊರಕಿದರಂತೂ ಖುಷಿ ಹೇಳತೀರದು.ತಮ್ಮ ತಂಗಿಯರೆಲ್ಲರಿಗೂ ಕಿಟಕಿಯ ಹತ್ತಿರದ ಸೀಟ್ ನ ಮೇಲೆ ಕಣ್ಣು.ಅದಕ್ಕಾಗಿ ಜಗಳ , ದೊಡ್ಡವರ ಗದರಿಕೆ..ಬಸ್ ನೊಳಗೆ ಮಾರಲು ಬರುವ ಪೆಪ್ಪರ್ ಮೆಂಟ್ , ಐಸ್ ಕ್ರಿ , ಕಡಲೆ , ಜೋಳ , ಎಲ್ಲವೂ ಒಂದು ಮಾಂತ್ರಿಕ ಲೋಕಕ್ಕೆ ಒಯ್ದಂತಹ ಅನುಭವ.ನಾವು ಅನುಭವಿಸಿದ ಬಸ್ ಪ್ರಯಾಣದ ಹಿತ ನಮ್ಮ ಮಕ್ಕಳು ಅನುಭವಿಸಿಲ್ಲ ಎಂದೇ ಹೇಳಬಹುದು.

ಮನೆಮನೆಗೆ ಸ್ವತಃ ವಾಹನಗಳು ಬಂದ ಮೇಲೆ ಬಸ್ ಗಳು ತನ್ನ ಮೊದಲಿನ ವರ್ಚಸ್ಸು ಕಳೆದುಕೊಂಡಿದ್ದವು. ಉಚಿತ ಬಸ್ ಪ್ರಯಾಣದ ಅವಕಾಶ ಸರ್ಕಾರ ಮಹಿಳೆಯರಿಗೆ ಒದಗಿಸಿದ್ದೆ ತಡ ಕಾರು , ಪ್ಲೇನ್ ನಲ್ಲಿ ಓಡಾಡುವರಿಗೆಲ್ಲ ಬಸ್ ನ ನೆನಪು ಬರತೊಡಗಿದ್ಧು. ಹೆಣ್ಣು ಮಕ್ಕಳ ಪ್ರಯಾಣದ ಬಗ್ಗೆ ಜೋಕ್ ಗಳು ಹರಿದಾಡಿದ್ದೆ ಹರಿದಾಡಿದ್ದು.

ಪ್ರಯಾಣ ಎನ್ನುವುದು ಒಬ್ಬೊಬ್ಬರಿಗೆ ಒಂದೊದು
 ಅನುಭೂತಿ ಒದಗಿಸುತ್ತದೆ. ದಿನಾಲೂ ಉದ್ಯೋಗ ಮಾಡುವರಿಗೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ದಿನಾಲೂ ಓಡಾಡುವದು ಒಂದು ಯಾಂತ್ರಿಕ ಕ್ರೀಯೆ. ಸಭೆ ಸಮಾರಂಭಗಳಿಗೆ ಒಂದೂರಿನಿಂದ ಮತ್ತೊಂದು ಊರಿಗೆ ಹೋಗುವವರಿಗೆ ಯಾವಾಗ ತಲುಪುತ್ತೆವೂ ಎಂಬ ಗಡಿಬಿಡಿ. ಬಹಳ ದಿನಗಳ ನಂತರ ತಮ್ಮವರನ್ನು ಸೇರಲು ಹೊರಟವರಿಗೆ  ಸಮೀಪದ ದಾರಿಯೂ ದೂರವೆನಿಸುವ ಧಾವಂತ. ಪ್ರಕೃತಿ ಯ ಆರಾಧಕರಿಗೆ ಕಿಟಕಿಯಿಂದ ಹೊರಗೆ ಕಾಣುವದೆಲ್ಲವೂ ಕೌತುವೇ , ಹೀಗೆ ಪ್ರಯಾಣ ಎನ್ನುವದು ಆಯಾ ಸಂದರ್ಭಕ್ಕೆ ತಕ್ಕಂತೆ ಅವರವರು ಅನುಭವಿಸುವ ಅನುಭೂತಿ.

ಪ್ರಯಾಣ ಎನ್ನುವದು ಯಾವಾಗ ಒಂದು ಹವ್ಯಾಸವಾಗಿ ಪರಿಣಮಿಸಿತೋ ಮಾನವ ಪ್ರಯಾಣಿಸದ ಸ್ಥಳವೇ ಇಲ್ಲವೆನ್ನಬಹುದು. ಬೆಟ್ಟ ,ಗುಡ್ಡ , ನದಿ ,ಕಾಡು , ಜಾತ್ರೆ , ಮರುಭೂಮಿ , ಸಮುದ್ರ , ಗುಹೆ ,ಕಂದರ ಎಲ್ಲೆಲ್ಲೂ ಪ್ರಯಾಣಿಸುವ ಪ್ರಯಾಣಿಕರೇ . ಒಂದೆರಡು ದಿನ ಸಾಮೂಹಿಕೆ ರಜೆ ಬಂದರಾಯಿತು ಎಲ್ಲೆಲ್ಲೂ ಜನ ಜಾತ್ರೆ. ಮೊನ್ನೆ ಒಂದು ಪೇಪರ್ನಲ್ಲಿ ನೋಡಿದೆ , ಹಿಮಾಲಯ ಪರ್ವತ ಹತ್ತುವವರ ಒಂದು ಉದ್ದದ ಸಾಲು ನೆರೆದಿತ್ತು.ಅಷ್ಟೊಂದು ರಶ್..ಎಲ್ಲೆಲ್ಲೂ ಜನಜಂಗುಳಿ ನೋಡಿ ಕೋವಿಡ್ ಸಂದರ್ಬದಲ್ಲಿ ಇಷ್ಟೊಂದು ಜನ ಅದೆಲ್ಲಿ ಅಡಗಿ ಕುಳಿತಿದ್ದರಬಹುದು ಎಂದು ಸೋಜೀಗವಾಗುತ್ತದೆ.

ಸೋಲೋ ಟ್ರೀಪ್ ನಲ್ಲಿ ಪ್ರಯಾಣಿಸುವರು , ಗ್ರೂಪ್ ನಲ್ಲಿ ಪ್ರಯಾಣಿಸುವರು , ಫ್ಯಾಮಿಲಿ , ಫ್ರೆಂಡ್ಸ್ ರೊಡನೆ ಪ್ರಯಾಣಿಸುವವರು. ಶೈಕ್ಷಣಿಕ ಪ್ರಯಾಣ , ಆಫಿಸನ್ ಪ್ರಯಾಣ. ಸಂಘ ಸಂಸ್ಥೆಗಳ ಪ್ರಯಾಣ  ಎಲ್ಲರೂ ಪ್ರಯಾಣಿಗರೆ.

ಇಷ್ಟೊಂದು ಪ್ರಯಾಣಿಸಿ ನಾವು ಆ ಪ್ರವಾಸದಿಂದ
 ಏನನ್ನು ಕಲಿಯುತಿದ್ದೆವೆ..!  ಅಥವಾ ಕೇವಲ ಸಮಯ ವ್ಯಯಿಸುವದಕ್ಕಾಗಿ ಪ್ರಯಾಣಿಸುತಿದ್ದೆವೆಯೇ..! ಅಥವಾ ಪ್ರಯಾಣಿಸಿದ ಸ್ಥಳ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲು ಪ್ರಯಾಣಿಸುತ್ತೆವೆಯೇ , ಅಥವಾ ಒಬ್ಬರನ್ನು ನೋಡಿ ಒಬ್ಬರು ಅನುಕರಿಸುತ್ತಿರುವೆವೋ , ಗೊತ್ತಿಲ್ಲ.ಆದರೂ ಎಲ್ಲರೂ ಜರ್ನಿಯನ್ನು ಪ್ರೀತಿಸುವವರೇ  ಆಗಿದ್ದೆವೆ.

ತೊಂಬತ್ತನೆ ಶತಕದ ನಂತರ ಎಲ್ಲರ ಆರ್ಥಿಕ ಸ್ಥಿತಿ ಸುಧಾರಿಸಿದೆ ಎಂದು ಹೇಳಬಹುದು. ಬಹುತೇಕ ಜನರು ಉತ್ತಮ ಹಣಕಾಸಿನ ಸ್ಥಿತಿ ಹೊಂದಿರುವವರು. ಈಗ ನಾವೆಲ್ಲರೂ ದುಡಿಯಬೇಕು ಮತ್ತು ಎಂಜಾಯ್ ಮಾಡಬೇಕೆನ್ನು ಮನಸ್ಥಿತಿ ಉಳ್ಳವರು.ಮತ್ತು ಒಬ್ಬರನ್ನು ನೋಡಿ ಮತ್ತೊಬ್ಬರು ಅನುಕರಣೆ ಮಾಡುವ ಮನಸ್ಥಿತಿ ಉಳ್ಳವರು. ಪ್ರವಾಸ ಎನ್ನುವದು ಮಾನವನ ಅಚ್ಚುಮೆಚ್ಚಿನ ಹವ್ಯಾಸವಾಗಿದೆ ಈಗ. ಅದಕ್ಕೆ ಪುಷ್ಟಿ ಕೊಡಲು ಸಾಮಜಿಕ ಜಾಲತಾಣ ಮತ್ತು ಅದರೊಳಗೆ ಬಿತ್ತರವಾಗುವ ಪ್ರವಾಸದ ಹೊಸ ಹೊಸ ಬ್ಲಾಗ್ ಗಳು.ಅದರಿಂದ ಆಕರ್ಷಿತರಾಗುವ ನಾವೆಲ್ಲ ಸದಾ ಪ್ರಯಾಣದ ಕನಸಿನಲ್ಲೆ ಇರುತ್ತೆವೆ.

ನಾನು ಚಿಕ್ಕವಳಿದಗದಾಗ ಎಲ್ಲರೂ ದೇವರು ಕೈಲಾಸದಲ್ಲಿ ಇರುವನು ಎಂದು ಹೇಳುತಿದ್ದರೆ ನಂಬುತಿದ್ದೆ. ಕೈಲಾಸ ಮೇಲೆ (ಆಕಾಶ) ಇರುತ್ತದೆ ಎಂನುದು ನಂಬಿದ್ದೆ. ಚಲನ ಚಿತ್ರಗಳಲ್ಲಿ ಕೈಲಾಸದ ಚಿತ್ರಗಳು , ಮೋಡ ,ಹೊಗೆ ಇವೆಲ್ಲವೂ ಒಂದುರೀತಿಯ ಕಲ್ಪನಾ ಲೋಕಕ್ಕೆ ಒಯ್ಯುತಿದ್ದವು.
ಕೃಮೇಣ ಮೇಲೆ ಎಂದರೆ ಉತ್ತರದ ಭಾಗ ಎಂದು ಅರಿವಾಗತೊಡಗಿತು .ನಾವು ದಕ್ಷಿಣದವರಿಗೆ ಉತ್ತರ ಮೇಲಿನ ಭಾಗ. ಉತ್ತರದವರಿಗೆ ಅವರ ಉತ್ತರದ ಭಾಗ ಮೇಲಿನದು , ಸಮುದ್ರ ಮಟ್ಟದಿಂದ ಮೇಲೆ ಮೇಲೆ ಹೋಗುತಿದ್ದರೆ ಮೋಡ ಸಮೀಪ ಕಾಣುತ್ತವೆ. ಗುಡ್ಡ ಬೆಟ್ಟಗಳು ಹಿಮಚ್ಚಾದಿತ ಪರ್ವತಗಳು , ಅದರಿಂದ ಹರಿದು ಬರುವ ನದಿಗಳು , ಪ್ರಕೃತಿಯ ಸುಂದರ ಪ್ರಶಾಂತ ಮಡಿಲಿನಲ್ಲಿ ಸಾಧು ಸಂತರು ನೆಮ್ಮದಿಯಾಗಿ ಇರಲು ಇಚ್ಛಿಸಿ ಅಲ್ಲಿ ವಾಸಿಸುತ್ತಿರಬಹುದು. ಸಾಧು ಸನ್ಯಾಸಿಗಳೊಳಗೆಲ್ಲ ದೇವರು ಕಾಣುವ ನಾವು , ದೇವರು ಮೇಲೆ ಇರುತ್ತಾನೆ ಎಂದು ನಾವು ಕಲ್ಪಿಸಿಕೊಂಡಿರಬಹುದೇ..ಹೀಗೆ ಉತ್ತರದ ಭಾಗಕ್ಕೆ ಪ್ರವಾಸ ಮಾಡುವಾಗ ನನ್ನ ಕಲ್ಪನೆಯ ಲ್ಲಿ ಬರುವ ವಿಷಯಗಳು.  ಹೀಗೆ ದಕ್ಷಿಣ ಭಾಗದ ಸಮುದ್ರದೆಡೆಗೆ ಹೋದಾಗ ಕಲ್ಪನೆಯಲ್ಲಿ ಬರುವ ವಿಚಾರಗಳೆ ಬೇರೆ. ರಾಮಾಯಣದ ಸೀತೆ ,  ವಾನರಗಳು ನಿರ್ಮಿಸಿದ ಸೇತುವೆಗಳ ಬಗ್ಗೆ ದಂತಕಥೆಗಳು , ಹೀಗೆ ದಕ್ಷಿಣದಿಂದ ಉತ್ತರದೆಡೆಗೆ ಅಥವಾ ಉತ್ತರದಿಂದ ದಕ್ಷಿಣಕ್ಕೆ ಪ್ರಯಾಣದ ನಡುವಿನ ಅನುಭವಗಳು ಅನೂಹ್ಯ. ಕಲ್ಪನೆ ಗೆ ರೆಕ್ಕೆ ಪುಕ್ಕ ಹುಟ್ಟಿ ಪ್ರಯಾಣದ ಉದ್ದಕ್ಕೂ ನಾನು ನಾನು ಕಲ್ಪನೆ ಯಲ್ಲೆ ಕಳೆದು ಹೋಗುತ್ತೆನೆ. ಪ್ರಯಾಣವೆಂದರೆ ನನಗೆ ಹೊಸ ವಿಷಯಗಳ ಅನ್ವೇಷಣೆ. ನನಗೆ ನಾನೆ ಪ್ರಶ್ನಿಸಿಕೊಳ್ಳುತ್ತ ಉತ್ತರ ಕಂಡುಕೊಳ್ಳುತ್ತ ನಿರಂತರ ಹುಡುಕಾಟದಲ್ಲಿರುವದು. ಒಂದು ಪ್ರಯಾಣದ ಮುಕ್ತಾಯ ಮತ್ತೊಂದು ಪ್ರಯಾಣಕ್ಕೆ ಮುನ್ನುಡಿ. ಬದುಕು ನಿರಂತರ ಹುಡುಕಾಟದಲ್ಲಿ ಸಾಗುತ್ತಿರಲಿ , ಗಮ್ಯವೆಂದೂ  ದೊರಕದಿರಲಿ ಎಂದು ಬಯಸುತ್ತೇನೆ.
ನನ್ನ ಮಟ್ಟಿಗೆ ಪ್ರಯಾಣ ಎಂಬುದು ಮೋಜಲ್ಲ. ಅವಶ್ಯಕವೂ ಅಲ್ಲ.ಅನವಶ್ಯಕವೂ ಅಲ್ಲ. ಪ್ರಯಾಣ ಎಂಬುದು ನಮ್ಮನ್ನು ನಾವು ಅರಿಯುವ ಸಮಯ.ಬಾಳಿನ ಪಯಣದೊಂದಿಗೆ ಓಡಾಟದ ಪಯಣವೂ ನಿರಂತರ ಸಾಗುತ್ತಿರಬೇಕು.ಬದುಕು ನಿಂತ ನೀರಾಗಬಾರದು , ಹರಿಯುತ್ತಿರುವ ನದಿಯಾಗಬೇಕು. ಹೊಸ ಸ್ಥಳ ,  ಹೊಸಜನ , ಹೊಸ ಸಂಸ್ಕೃತಿಗಳನ್ನು ಅರುಹುವ  ಜ್ಞಾನ ದ ವಿಕಾಸದ ಸಾಧನವಾಗಬೇಕು.

ಆದರೆ ವಿಪರ್ಯಾಸ , ಈಗೀನ ಪೀಳಿಗೆ ಪ್ರಯಾಣವೆಂದರೆ ಮೋಜು ಮಸ್ತಿಗೆ ಸೀಮೀತಗೊಂಡಿದೆ. ಗುಡ್ಡ ಗಾಡು ನದಿ ಝರಿ ಕಾಡು ಮೇಡು ಒಂದನ್ನು ಬಿಡದೆ ಎಲ್ಲೆಂದರಲ್ಲಿ ತಿಂದು ತೇಗಿ ಪರಿಸರವನ್ನು ಹಾಳುಮಾಡುವ ಖಯಾಲಿಗೆ ಬಿದ್ದಿದ್ದಾರೆ. ತಾವು ಹೋದ ಸ್ಥಳದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದೆ ತಡ ನೂರು ಜನ ಆ ಸ್ಥಳಕ್ಕೆ ಹೋಗಲು ಮುಗಿ ಬಿಳುತ್ತಾರೆ.

ಪ್ರವಾಸೊದ್ಯಮ ಬೆಳೆಯುತಿದ್ದಂತೆ ಪ್ರಕೃತಿ ಗೆ ಹಾನಿಯಾಗುವದು ಸಹಜ.ಆದರೆ ಪ್ರವಾಸೋದ್ಯಮದಿಂದಲೇ ಬದುಕುವ ಅನೇಕ ರಾಷ್ಟ್ರಗಳಿವೆ. ಜನರೇ ಅವರಿಗೆ ಜೀವನಾಧಾರ.

ಆದರೆ ಅಯಾ ರಾಷ್ಟ್ರದ ಮೂಲನಿವಾಸಿಗಳಿಗೆ ಪ್ರಾವಾಸಿಗರಿಂದ ಉದ್ಯೋಗ ಲಾಭವಾದರೂ ತಮ್ಮ ಪರಿಸರ ಹಾಳಾಗುವದು ಅವರ ಅಸಮಾಧಾನಕ್ಕೆ ಕಾರಣ. ಆದರೆ ಏನು ಮಾಡಲಾಗದು , ಉದ್ಯೋಗ ಕ್ಕೆ ಬೇರೆ ಯಾವದೇ ಅವಕಾಶವಿರದಿದ್ದಾಗ ಅವರು ಪ್ರವಾಸಿಗರನ್ನು ಆದರಿಸಲೇಬೇಕಾಗುತ್ತದೆ.ಪ್ರಯಾಣದ ಹವ್ಯಾಸದಿಂದ ಸದಾ ಪ್ರಯಾಣಿಸುತ್ತ ಪರಿಸರವನ್ನು ಹಾಳು ಮಾಡದಿರುವದು ನಾಗರೀಕರ ಆದ್ಯತೆಯಾಗಬೇಕು. ನಮ್ಮ ಮುಂದಿನ ಪೀಳಿಗೆಯು ಸ್ವಚ್ಛ ಸುಂದರ ಪರಿಸರಗಳಿಗೆ ಪ್ರಯಾಣಿಸುವ ಅವಕಾಶ ನಾವು ಮಾಡಿಕೊಡಬೇಕು.


One thought on “‘ಪ್ರಯಾಣವೆಂಬ ವ್ಯಸನ ಮತ್ತು ನಾವು’ ಲಲಿತಪ್ರಬಂಧ-ಜ್ಯೋತಿ , ಡಿ‌, ಬೊಮ್ಮಾ.

Leave a Reply

Back To Top