ಹೋಮ್ ಕೇರ್ ಹಗರಣ.
ಮಾಲತಿಶ್ರೀನಿವಾಸನ್.
ಇತ್ತೀಚೆಗೆ ನಗರಗಳಲ್ಲಿ ವೃದ್ಧರ,ರೋಗಿಗಳ,ಮತ್ತು ಮಕ್ಕಳ ಆರೈಕೆಗೆ ಮನೆಯಲ್ಲಿದ್ದು ಮನೆಯವರೊಡನೆ ಸಹಕರಿಸಿ
ಸಹಾಯಮಾಡಲು ಜನರನ್ನುಒದಗಿಸುವ ಸಂಘಗಳು
ಹೆಚ್ಚಳವಾಗಿವೆ ,ಹಿಂದೆ, ಒಂದೋ ಎರಡೋ nightingale,Red cross,ನಂತಹ ಸಂಸ್ಥೆಗಳು ಈ ಜವಾಬ್ದಾರಿ ಹೊರುತ್ತಿದ್ದವು,ಈಗ ಪ್ರತಿ ಸರ್ಕಾರಿ/ಹಾಗೂ
ಖಾಸಗಿ ಅಸ್ಪತ್ರೆಯಲ್ಲೂಇಂತಹ ಸಂಸ್ಥೆಗಳ ಸಂಚಾಲಕರು ಈ ಕೆಲಸ ಒಪ್ಪಿಕೊಂಡು, ನುರಿತ ಜನರನ್ನು ಒದಗಿಸುತ್ತಿರುವುದು ಶ್ಲಾಘನೀಯವಾದ ಸಮಾಜಸೇವ.
ಅವರ ಶುಲ್ಕ ,ಮುಂಗಡ ಹಣ ದುಬಾರಿ ಅನಿಸಿದರೂ
ತುರ್ತುಪರಿಸ್ಥಿತಿಯಲ್ಲಿ ಅವಶ್ಯಕತೆ ಇದ್ದಾಗ ಸಿಗುವ ನೆರವು
ಅಪ್ಯಾಯಮಾನ ಹಾಗೂ ಉಪಯುಕ್ತ.
ಇಂತಹ ಸಂಸ್ಥೆಗಳು ಕಳುಹಿಸಿದ ಅಪರಿಚಿತ ಸಹಾಯಕರನ್ನುತಿಂಗಳುಗಳು ಒಮೊಮ್ಮೆವರುಷಗಳು
ಜೊತೆಯಲ್ಲಿಟ್ಟುಕೊಂಡು,ವೃದ್ಧರ ,ರೋಗಿಗಳ ಆರೈಕೆಯ ಜೊತೆಗೆ ಇವರ ಅವಶ್ಯಕತೆಗಳನ್ನು ಪೂರೈಸುವುದು ಸುಲುಬದ ಕೆಲಸವಲ್ಲ. ಅನುಭವಕ್ಕೆ ಬಂದಾಗಮಾತ್ರ
ಅದರ ಒಳಿತು ಕೆಡುಕು ಮುಜುಗರಗಳ ಅರಿವಾಗುವುದು.
ಹತ್ತಿರದವರು,ತಾಯಿ ತಂದೆ ,ಅತ್ತೆ ಮಾವ,ಖಾಯಿಲೆ ಮಲಗಿದಾಗ,ಅವರ ಆರೈಕೆ ಮತ್ತು ದೈನಂದಿನ, ಒಳಗಿನ ಮತ್ತು ಹೊರಗಿನ ಕೆಲಸಗಳ ಒತ್ತಡ, ಸಹಾಯಕ್ಕೆ ಜನ ಬೇಕೆನಿಸುವುದು ಸಹಜ.
ಎಪ್ಪತ್ತುದಾಟಿರುವ ನಮ್ಮಿಬ್ಬರಿಗೂ ಇಂತಹ ಸಂಧರ್ಭ
ಎದುರಾಗಿದ್ದು ಸ್ವಂತ ತಂಗಿಯನ್ನು (65ವಯಸ್ಸು,) ಬಿದ್ದು ತೊಡೆಮೂಲೆ ಮುರಿದುಕೊಂಡು ಶಸ್ತ್ರ ಚಿಕಿತ್ಸೆಯನಂತರ
ಅವಳನ್ನು ನನ್ನ ಮನೆಗೆ ಆರೈಕೆಗಾಗಿ ಕರೆದುಕೊಂಡು ಬಂದಾಗ. ಸಹಾಯಕ್ಕೆ ಬಂದವರ ರೀತಿ ರಿವಾಜು ನೆನೆಸಿಕೊಂಡರೆ ಈಗ ನಗುಬರುತ್ತೆ.
ಅಸ್ಪತ್ರೆಯವರೆ ಸಂಪರ್ಕಿಸಲು ಹೇಳಿದ “ಹೋಮ್ ಕೇರ್”ಸಂಸ್ಥೆಯೊಡನೆ ಮಾತಾಡಿದಾಗ,ಸಹಾಯಕ್ಕೆ ಬಂದದ್ದು ಮಧ್ಯವಯಸ್ಸಿನ ಹೆಂಗಸು. ನಾನುಅನುಭವಸ್ಥೆ ರೋಗಿಗಳ ಎಲ್ಲ ರೀತಿಯ ಆರೈಕೆ ನನಗೆ ಗೊತ್ತು ಅಂತ ಹೇಳಿಕೊಂಡು ಬಂದ ಹೆಂಗಸು.
ತಂಗಿಗೆ ಸ್ನಾನ,ಓಡಾಟಕ್ಕೆ ಸಹಾಯ ಮಾಡುವುದರ ಜೊತೆಗೆ ಚರವಾಣಿಯಲ್ಲಿ ಸೀರಿಯಲ್ ನೋಡುವ ಹವ್ಯಾಸ,ಮೊದಲು ಸರಿ ಎನಿಸಿದರೂ,ವೈಫೈ ಪಾಸ್ವರ್ಡ್
ಕೊಡಿ ಅಂತ ದಿನಕ್ಕೆ ಹತ್ತು ಸರಿ ಕೇಳುತ್ತಿದದ್ದು ಮುಜುಗರವೆನ್ನಿ ಸುತ್ತಿತ್ತು.
ಇಳೆವಯಸ್ಸಿನಲ್ಲಿ ಮಕ್ಕಳು ದೂರದ ಪರದೇಶದಲ್ಲಿ, ಇಬ್ಬರೇಮನೆಲಿ ಬಿಟ್ಟಿಬಿಡೆಯಾಗಿ ಇದ್ದು ರೂಢಿ ಯಾದನಮಗೆ 24 ಘಂಟೆ ಅಪರಿಚಿತರೊಡನೆ ಇರುವಂತಹ ಸ್ಸನ್ನಿವೇಶ,ಜೊತೆಯಲ್ಲಿ ಊಟ ಉಪಚಾರ
ಬೇಕು ಬೇಡಿಕೆಗಳ ಜವಾಬ್ದಾರಿ.
ನಮ್ಮ ಸಹಾಯಕ್ಕೆ ತಮ್ಮ ಮನೆ ಮನೆಯವರನ್ನು ಬಿಟ್ಟು
ಬಂದಿರುವುದರ ಅರಿವು ಸಹಜವಾಗೆ ನಮ್ಮಲ್ಲಿ ಅವರ ಬಗ್ಗೆ ದಯೆ ಮೂಡಿಸಿದರು,ನಮ್ಮಮನೆಯ ಊಟ ತಿಂಡಿ ವಿಚಾರಗಳಿಗೆ ಹೊಂದಿಕೊಳ್ಳದೆ ತಮ್ಮದೇ ಬೇಕು ,
ಬೇಡದ ಅಭ್ಯಾಸಗಳನ್ನು ಹೇರಿದಾಗ ಸಹಜವಾಗಿ ಮುಜುಗರ ಅನಿಸಿತ್ತು.
“ಅಮ್ಮನಾವು ಕಾಫಿಕುಡಿಯೋಲ್ಲ,ಟೀ ನೆ ಅಭ್ಯಾಸ ,ಜೊತೆಗೆ Marie ಬಿಸ್ಕುಟ್ ಬೇಕು,ಬರಿ ಟೀ
ಕುಡಿದ್ರೆ gaastrikku”.ಅಂತ ಹೇಳಿದಾಗ,
“ಮಾರೀ ಬಿಸ್ಕುತ್ತು ನಾಯಿ ಇದ್ದಾಗ ತರ್ತಾ ಇದ್ದಿವಿ,ಈಗ ಇದ್ಯೆನೆ?” ಪತಿದೇವರ ನಗಾಡ್ತಾ ಒಗ್ಗರಣೆ.
ನೀವ್ ಸುಮ್ನಿರಿ ಅಂತ ಕೂಗಿ,ಕೆಲಸದ ಹುಡುಗನ್ನ ಟೀಪಟ್ನಾ ಬಿಸ್ಕುತ್ ತರೋದಕ್ಕೆ ಓಡಿಸಿದೆ.
ಮುಂದಿನ ಬೇಡಿಕೆ ಕೇಳಿ ಸುಸ್ತಾದೆ ನಾನು,”ಆಂಟಿ
ನಂಗೆ ತಂಗಳಪೆಟ್ಟಿಗೆ ಇಂದ ತೆಗದ ತಣ್ಣಗಿನ ಪದಾರ್ಥ್
ಮೈಗಾಗೋಲ್ಲ,ಮೊಸರು ಹೊರಗೆಇಟ್ಟು ಹಾಕಿ ಅಂದು
ತಂಗಿ ಕೋಣೆ ಸೇರಿದ್ಲು.
ಅಯ್ಯೋ ದೇವರೇ ಬೇಸಿಗೆ ಸೆಕೆಲಿ ಮೊಸರು ಫ್ರಿಡ್ಜ್ ನಿಂದ ಹೊರಗೆ, ದುಬಾರಿ ಬೆಲೆಗಳ ಕಾಲದಲ್ಲಿ ಉಳಿದದ್ದನ್ನು
ಮಾರನೆದಿನ ಬಿಸಿಮಾಡಿನಾವೆ ತಿನ್ನೋವಾಗ,4-5ಜನ ತಿನ್ನೋಮನೆಯಲ್ಲಿ ಸರಿಯಾಗೇ ಅಳತೆ ಮಾಡಿ ಮಾಡೋದ್ ಹೇಗೆ?,ಮಂಡೆ ಬಿಸಿಯಾಯ್ತು.ಈ ಮನೇಲಿ
ಕದ್ದು ಮುಚ್ಚಿ ಮಾಡೋ ಛಾನ್ಸೆ ಇಲ್ಲ,open kitchen
ಎಲ್ಲ ಒಪೆನ್ನೇ,ತಂಗಿಗಾಗಿ ಹಾಲು,ಜ್ಯುಸು ಅಂತ ಅವಳು
ಒಳಗು ಹೊರಗೂ ಓಡಾಡ್ತಾ ಒಂದ್ ಕಣ್ ನನ್ಮೇಲೆ.
ಇದೊಂದು ರೀತಿ “camel in the camp”ತರ ಆಯ್ತು
ತಂಗಿ ನಿದ್ದೆ ಮಾಡ್ತಾಯಿದ್ರೆ ಜೋರಾಗಿ ವೂಟ್ನಲ್ಲಿ ಸಿರಿಯಲ್ನೋಡೋದು.,ಗಳಿಗೆ ಒಂದುಸಲ ಇಂಟರ್ನೆಟ್ ಇಲ್ವ ಅಕ್ಕ ಅಂತ ಕೇಳೋದು, ತಾಳ್ಮೆ ಪರೀಕ್ಷೆ ನಡೆದಿತ್ತು.
ಇನ್ನು ರೋಗಿಗೆ ಕೊಡೋ ಔಷಧಿಗಳನ್ನು ಪರಕಿಸಿ ಇದು ಸರಿ ಅದು ಸರಿಇಲ್ಲ ಅಂತ ,ವೈದ್ಯರಿಗಿಂತ ತನಗೆ ಗೊತ್ತು
ಅನ್ನೋಜೋರು.
ಒಂದು ಸಂಜೆ ನೋವು ಜಾಸ್ತಿ ಅಂತ ತಂಗಿ ಹೇಳಿದಾಗ ಅವಳ ವೈದ್ಯರು ಹೇಳಿದ್ದ ಮಾತ್ರೆ ಕೊಡಲು ಹೋದಾಗ
“ಅಯ್ಯೋ ಇದೇನ್ ಕೊಡ್ತಿದ್ದೀರ ನೋವಿಗೆ ಎನೂ ಕೆಲಸ ಮಾಡಲ್ಲ,ಬೇರೆ ಹೇಳ್ತೀನಿ ಕೊಡಿ,ಇದರಲ್ಲಿ 10 ವರುಷದ ಅನುಭವ ನಂದು”ಅಂತ ವರಸೆ ತೆಗೆದ್ಲು ,ಮಾನಸಿಕವಾಗಿ ನೋವಿನಿಂದ ಕುಗ್ಗಿದ ತಂಗಿ ಅವಳ ಹೇಳಿದ ಮಾತ್ರೆನೆ ಬೇಕು ಅಂತ ರಾತ್ರಿ ಶುರು ,ನಗರದ ಹೊರಾವಲಯದಲ್ಲಿ
ಮನೆ, ಔಷದಿ ಅಂಗಡಿ ಹತ್ತಿರಿಲ್ಲ ,ಪತಿರಾಯರ ಸಿಟ್ಟುನೆತ್ತಿಗೇರಿತ್ತು.
ಇಂತಹ ಎಡಬಿಡಂಗಿ ಸಹಾಯಕರನ್ನು ಕಳುಹಿಸಿದ ಸಂಸ್ಥೆಗೆ ದೂರಿತ್ತರೆ, ಮುಂಗಡ ಹಣದ ಜೊತೆಗೆ 15ದಿನದ ಒಪ್ಪಂದದ ಪತ್ರ ನೆನಪಿಸಿ,ಬೇರೆಯವರನ್ನು ಕಳುಹಿಸಲು ಒಪ್ಪಿದಾಗ ಸರಿ ಎನಿಸಿತು.
15ದಿನದ ನಂತರ ಇವಳು ಹೊರಟುನಿಂತಾಗ ಪಾಪ ಎನಿಸದಿರಲಿಲ್ಲ, ಕೆಲಸ ಸರಿಯಿದ್ದರು ದಾಷ್ಟೀಕತೆ,ತಲೆಹರಟೆ ತಡೆಯುವುದು ಕಷ್ಟವಾಗಿತ್ತು,ಕಾಂಚಾನಮ್ ಕರ್ಮ ವಿಮೋಚನಮ್ ,ಅಂತ ಮನ ಹಗುರಮಾಡಿಕೊಳ್ಳಲು
ಕೈಗಿಷ್ಟು ಹಣ ಕೊಟ್ಟು ಕಳುಹಿಸಿ,,ಮಾರನೇ ದಿನ ಬರುವವಳ ಬಗ್ಗೆ ಯೋಚನೆ ಆರಂಭ.
ಮಾರನೇ ದಿನ ಬಂದ ಹುಡುಗಿ ಧಾರವಾಡದ ಪುಟ್ಟಗೌರಿ.”ಇವಲಿಂದ್ದ ಏನು ತೊಂದರೆ ಆಗೋಲ್ಲ ಅಮ್ಮ ಅಂತ ವ್ಯವಸ್ಥಾಪಕ ಭರವಸೆ ಕೊಟ್ಟು ಹೊರಟ.
ಎರಡನೇ ಅಂಕ ಪ್ರಾರಂಭವಾಯಿತು,ರಾತ್ರಿ ಮಲಗೊಕ್ಕೆ
ಅಂತ ಕೊಟ್ಟ ಹಾಸಿಗೆ ಮೇಲ್ ಕೂತು”ಅಮ್ಮವರೆ ಇದರಮೇಲ್ ಹಾಸ್ಕೊಳ್ಳೋಕ್ಕೆ ಒಂದ್ ದುಪಟ್ಟಿ ಕೋಡ್ರಲ್ಲ, “ಬೀರುಯಿಂದ ಹಳೆ ಬೆಡ್ಶೀಟ್ ಹೊರ ತೆಗೆದು ಕೊಟ್ಟಿದ್ದಾಯ್ತು.
ಏಪ್ರಿಲ್ ಬಿಸಿಲು ಶೆಕೆಕಾಲ,ಕಿಟಕಿತೆಗದ್ರೆ ಸೊಳ್ಳೆ,ಫ್ಯಾನ್ ಹಾಕೋದು ಅನಿವಾರ್ಯ, ಹೀಗಿರಲು,ಎಲ್ಲರೂ
ಮಲಗಿದ ನಂತರ ಮಧ್ಯರಾತ್ರಿ ತಂಗಿ ಕೂಗು,”ಫ್ಯಾನ್ ಹಾಕು ಶೆಕೆ, ಎಸ್ಟುಸಲಾ ಹೇಳೊದು,” ಎದ್ದು ನೋಡಿದರೆ ಪುಟ್ಟಗೌರಿ ಪಂಕ ಬಂದ್ ಮಾಡಿ ಕೂತಿದ್ಲು,ಯಾಕ್ ಪಂಕ ಬಂದ್ ಮಾಡ್ದೆ ಗೌರಮ್ಮ,ಅಂದ್ರೆ,”ಪಂಕ ಚಾಲು ಮಾಡಿದ್ರೆ ನಂಗ್ ತಲೀ ನೋಯ್ತದ್ರಿ ನಿದ್ದಿ ಬರಹಂಗಿಲ್ಲ,ಪಂಕದ್ ಗಾಳಿ ಆಗೋಹಂಗಿಲ್ಲ, ನಿದ್ದಿ ಕೆಟ್ಟರೆ ನ ಮುಂಜಾನ್ ಕೆಲಸ ಮಾಡೋಹಂಗೇ ಇಲ್ ನೋಡ್ರಿ”ಅಂದ್ಲು ಪುಟ್ಟಗೌರಿ
ಖಡಕ್ ಭಾಷೆಲಿ. ಅರೆ ಬೇಸಿಗೆ ಕಾಲ ಶೆಕೆ ಪಂಕ ಇಲ್ಲದಿದ್ರೆ ಹೇಗೆ ಗೌರಿ ಅಂದ್ರೆ”ಹಂಗಾರ್ ನಾ ಹೊರಗ್ ಮಲಗ್ ಲೇನು,ನೀವೇ ಇಲ್ ಮಲಾಗ್ರಿ ಅಕಿ ಕೂಡ”ಅಂದ್ಲು ಗೌರಮ್ಮ ,”ಅರೆ ನಿನ್ನ ಕರೆಸಿದ್ ಯಾಕೆ”ಅಂತ ಸ್ವಲ್ಪ ಜೋರ್ ಮಾಡಿದಾಗ,ಸರಿ ಪಂಕ ಹಾಕ್ರಿ ನಾ ಮುಸುಖ್ ಹಾಕ್ಕೊಂಡ ಮಲಗ್ತೇನೆ ಅಂತ ಮುಸುಕೆಳದಳು.
ಮತ್ತೆ ಮಧ್ಯ ರಾತ್ರಿ ತಂಗಿ ಕೂಗು,ನೀಡಗನ್ನಲಿ ಎದ್ದು ಬಂದು ನೋಡಿದ್ರೆ,ಫ್ಯಾನ್ ಬಂದ್,ಕೂಗಿದ್ದು ಕೇಳಿಸಲಿಲ್ಲಾರಿ,ಚಳಿ ಆಯ್ತು,ತಿಳೀದೆ ಪಂಕ ಬಂಧ್
ಮಾಡಿದೆ ನೋಡ್ರಿ ಅಂತ ಮತ್ತೆ ಸ್ವಿಚ್ ತಿರುಗಿಸಿದಳು.
ಮಲಗೊಕ್ಕೆ ಕೊನೆಗ್ ಬಂದಾಗ”ಖಾತ್ರಿ ಹೋಯ್ತು ಚಾಕು ಬಂತು ಡುಂ ಡುಂ ಅಂತ ಪತಿರಾಯರು ಕಿಚಾಯಿಸದಾಗ
,ಮೌನವಾಗಿ ಮುಸುಕೆಳೆದು ಬೆಳಗಾಗೋದನ್ನೇ ಕಾಯೋ ಹಾಗಾಯ್ತು.
ಅಂತೂ ಒಂದು ತಿಂಗಳು ಇಂತಹ ಇಟ್ಟುಕೊಂಡು ತಂಗಿ
ವಾಳ್ಕರ್ ಇಟ್ಟುಕೊಂಡು ನಡೆಯೋಷ್ಟು ಆದಾಗ ಪುಟ್ಟುಗೌರಿಗೂ ವಿದಾಯ ಹೇಳೋ ಸಮಯ
ಬಂತು.
ಹೊರತು ನಿಂತ ಪುಟ್ಟಗೌರಿ ಆಡಿದ ಮಾತು ಕೇಳಿ
ಮನಸ್ಸು ಬೆಚ್ಚಗಾಯ್ತು.”ಅಕ್ಕಾವ್ರೆ ನಿಮ್ಮ ಮನಿಸಾರು ತಿಂಡಿ ಹೊಟ್ಟಿಗ್ ಚಂದ್ ಆತು,ಕೈತುಂಬಾ ತಾಟಲ್ಲಿ ,ತಟ್ಟಿ ತುಂಬಾ ಬಡಿಸ್ತಿರಿ ,ಬೇರೆ ಕಡಿ ಮಂದಿ ಹಾಂಗ್ ಇರೋಹಂಗಿಲ್ರಿ, ಲೆಕ್ಕಮಾಡಿ ಉಣಲಿಕ್ಕೆ ಕೊಡತ್ತರ್ರಿ,
ನೀವ್ ಉಡೋದು ಒಂದೆರಡು ಕಾಟನ್ ಸೀರೆ ಕೋಡ್ರಲ್ಲ
ಒಂದ್ ನಾಉಟ್ಟು ಇನ್ನೊಂದ್ ನನ್ ಅವ್ವನ್ಗೆ ಕೊಡ್ತೀನಿ,
ನೋಡುತ್ಲು ಕೇಳ್ತಾಳ ಆಕಿ ಎನ್ ತಂದಿ ಅಂತ” ಅಂದ್ಲು
ಒಗದು ಇಟ್ಟಿದ್ದ ಎರಡು ಕಾಟನ್ ಸೀರೆ ಜೊತೆಗೆಸ್ವಲ್ಪ ಹಣ ಕೈಲಿಟ್ಟಾಗ,ಖುಷಿಯಾಗ್ ಕಾಲಹಿಡ್ಕೊಂಡ್ “ಆಶೀರ್ವಾದ ಮಾಡ್ರಿ ಅಕ್ಕಾವ್ರೆ ಒಳ್ಳಿ ದಾಗ್ಲಿ ಅಂತ”
ನಮಸ್ಕಾರ ಮಾಡಿದಾಗ,ಈ ಸಂಸ್ಕಾರ ,ಮುಗ್ದತೆ
ಈ ಪಟ್ಟಣದಲ್ಲಿ ಬೆಳೆದ ಹೆಣ್ಣು ಮಕ್ಕಳಲ್ಲಿ ಯಾಕೆ
ಮರೆಯಾಗ್ತಿದೆ ಅನಿಸಿ ಮನಸ್ಸಿಗೆ ಕಸಿವಿಸಿಯಾಯಿತು.
ತಮ್ಮ ಸಂಸಾರ ,ಮನೆಯವರನ್ನು ಬಿಟ್ಟು ಸಂಪಾದನೆಗಾಗಿ ಬೇರೊಬ್ಬರ ಮನೆಯಲ್ಲಿದ್ದು
ವೃದ್ಧರ ಮಕ್ಕಳ ರೋಗಿಗಳ ಆರೈಕೆ ಮಾಡುವ
ಈ ಸಹಾಯಕರ ಸೇವೆ ಕರ್ತವ್ಯ ನಿಷ್ಠೆಯ ಎರಡು ಮುಖಗಳು ಕಾಣುತ್ತೇವೆ ಸಮಾಜದಲ್ಲಿ.
ಮಗ ಸೊಸೆ ಕೆಲಸಕ್ಕೆ ಹೊರಡುತ್ತಲೇ ಮೇಲೆಳಲಾರದ
ವಯೋವೃದ್ಧೆಯ ಸಹಾಯಕರು,ಹಿರಿಯರ ಮೇಲೆ ಒಮ್ಮೊಮ್ಮೆ ಮಕ್ಕಳ ಮೇಲೆ ನಡೆಸುವ ದೌರ್ಜನ್ಯ ಅಸಹನೀಯ.ಊಟ ತಿಂಡಿ ಎಲ್ಲ ವ್ಯವಸ್ಥೆ ಮಾಡಿದ್ದರು
ಹೊತ್ತುಹೊತ್ತಿಗೆ ಕೊಡುವತಾಳ್ಮೆತೋರಿಸದೆ ,ಚರವಾಣಿ ಸಂಭಾಷಣೆ,ದೂರದರ್ಶನದ ಸೀರಿಯಲ್ ಆಕರ್ಷಣೆ,
ಇವರನ್ನುಸೆಳೆಯುತ್ತವೆ.ಇಷ್ಟ ಬಂದಾಗ ಊಟ ತಿಂಡಿ
ಕೊಡುವ ದೋರಣೆ,ಕೆಟ್ಟ ಭಾಷೆಯ ಪ್ರಯೋಗ.
ಎಲ್ಲೆಡೆ ಹೀಗೆ ಅಂತ ಹೇಳಲಾಗುವುದಿಲ್ಲ,ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಪ್ರೀತಿ ಕಾಳಜಿಯಿಂದ
ನೋಡಿಕೊಳ್ಳುವವರು ಇದ್ದಾರೆ,ಅವರ ಸೇವಾಭಾವ ದುಡ್ಡಿನಲ್ಲಿ ಅಳೆಯಲಾಗುವುದಿಲ್ಲ.
ಹಿಂದಿನ ಅವಿಭಕ್ತ ಕುಟುಂಬಗಳಲ್ಲಿ ಈ ರೀತಿಯ ಸಮಸ್ಯೆಗಳಿಗೆ ಅಷ್ಟು ಅವಕಾಶವಿರುತ್ತಿರಲಿಲ್ಲ,ಮನೆ
ತುಂಬಾ ಜನ, ಬಾಣಂತಿಯರ ,ರೋಗಿಗಳ ಆರೈಕೆ,ವೃದ್ಧರ ಸೇವೆ,ಮಕ್ಕಳಲಾಲನೆ-ಪಾಲನೆ,ಸಾಮೂಹಿಕ ಕ್ರಿಯೆಗಳಾಗಿ
ಭಾರವೆನಿಸುತ್ತಿರಲಿಲ್ಲ.
ಇಂದುಚಿಕ್ಕ ಒಮ್ಮೊಮ್ಮೆ ಚೊಕ್ಕವಲ್ಲದ ಸಂಸಾರಗಳ ವ್ಯವಸ್ಥೆ,ಸ್ವಾರ್ಥ,ಸಿಟ್ಟು,ಅಸಹನೆ,ಅಹಮಿಕೆಯಂತಹ
ನಕಾರಾತ್ಮಕ ಭಾವಗಳ ನರ್ತನ,ಪರಿಣಾಮ ಒತ್ತಡ
ಹಾಗೂ ಖಿನ್ನತೆ ಸಮಸ್ಯೆಗಳು.
ನಾ ಕಂಡ ರೀತಿಯ ರ್ಹೊಂಕೇರ್ ವ್ಯವಸ್ಥೆಯ ಬಗ್ಗೆ
ಸಣ್ಣ ನೋಟ.ಈ ವ್ಯವಸ್ಥೆ ಹಲವಾರು ಕುಟುಂಬಗಳಿಗೆ
ಜೀವನಾಧಾರ. ಇವರಸೇವೆ ಅವಶ್ಯಕತೆ ಬಿದ್ದಾಗ ಅನಿವಾರ್ಯ ಸಂಸಾರಗಳಿಗೆ/ಸಮಾಜಕ್ಕೆ. ಈ ವ್ಯವಸ್ಥೆ ಯ ರೂವಾರಿಗಳು ತಮ್ಮ ಕಾರ್ಯ ಮತ್ತಷ್ಟು ದಕ್ಷತೆಯಿಂದ ನಡೆಸಿದರೆ ಜನಸೇವೆಗೆ ಒಳಿತು.
ಕ
ಜ್ವಲಂತ ಸಾಮಾಜಿಕ ಸಮಸ್ಯೆಯ ಬಗ್ಗೆ ವಿಚಾರಪೂರ್ಣ ಲೇಖನ ನೀಡಿದ್ದೀರಿ.ಚಿಂತನೀಯ ಬರಹ!
ಉತ್ತಮ ಅನುಭವ ಕಥನ
ಇಂದಿನ ಸಾಮಾಜಿಕ ಸಮಸ್ಯೆ ಗಳಲ್ಲಿ ಒಂದು ನಿಮ್ಮ ಲೇಖನ ದ ಕಥಾವಸ್ತು ಮಾಲತಿ. ಚೆನ್ನಾಗಿ ಮೂಡಿಬಂದಿದೆ. ಚಿಕ್ಕ ಚಿಕ್ಕ ವಿಚಾರಗಳೂ ಸಹ ಕುಟುಂಬ ದ ಸದಸ್ಯರಲ್ಲಿ ಮಾನಸಿಕ ಒತ್ತಡ ಮತ್ತು ಮುಜುಗರ ಉಂಟು ಮಾಡುತ್ತದೆ ಎನ್ನುವುದು ತಿಳಿದುಬಂದಿದೆ.ಒಳ್ಳೆಯ ಲೇಖನ.
ಪದ್ಮಜ ರಾಧಾಕೃಷ್ಣ.