ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಿಯಮ

Abstract Expressionism | art | Britannica

ಡಾ.ಅಜಿತ್ ಹರೀಶಿ .

ಅಪಘಾತಗಳೆಲ್ಲ ಆಕಸ್ಮಿಕಗಳಲ್ಲ
ಕಾರಣವಿರಬಹುದಲ್ಲ
ಅಲಕ್ಷ್ಯ ಆತುರ ಅತ್ಯುತ್ಸಾಹ
ಕಲ್ಪಿಸುವ ಎದುರಿನ ಅಚಾತುರ್ಯ

ಬೇಕೆಂದಾಗ ಬಂಜೆತನ
ಬೇಡವಾದಾಗ ಫಲಿಸುವ ಗರ್ಭ
ಸುರತಕ್ಕೆ ಸುರಕ್ಷಿತ
ಸಂಗಾತಿ ಮಾತ್ರ!

ಯುಗ ಬದಲಾಗಿದೆ
ಸ್ವರ್ಗ ನರಕಗಳೆಲ್ಲವೂ
ಸೃಷ್ಟಿಯಾಗಿದೆ ಇಲ್ಲೇ
ತೆರೆಯಲಾಗಿದೆ
ಬದುಕಿನ ಕಂದಾಯ ಕಟ್ಟುವ
ಕೌಂಟರ್ ನಮ್ಮಲ್ಲೇ

ದೇವನ ಕಣ್ಣುಗಳು ಮಾರು-ಮಾರಿಗೆ
ಎಲ್ಲೆಲ್ಲೂ ಟವರ್ ಲೊಕೇಷನ್
ಅಪರಾಧಿಯಾಗದ ಸೂತ್ರ
ಜೀವಿಸುವ ಸಾಫ್ ಸೀದಾ

*********

About The Author

1 thought on “ಕಾವ್ಯಯಾನ”

Leave a Reply

You cannot copy content of this page

Scroll to Top