ಬದುಕಿನ ಸಂಗಾತಿ
ಕಾವ್ಯ ಸುಧೆ. ( ರೇಖಾ )
‘ಬದುಕಿನಲಿ ಎರಡನೇ ಅವಕಾಶ…!’
ಬದುಕಿನಲಿ ಎರಡನೇ ಅವಕಾಶ……….
ಈ ವಿಷ್ಯ ನೋಡಿದಾಗಏನಪ್ಪಾ ಹೀಗಂದ್ರೆ ಅಂತನಿಸ್ತು ಒಂದ್ಸಾರಿ. ಒಂದ್ ಕ್ಷಣ ತಲೆ ಎಲ್ಲೆಲ್ಲೊ ಓಡಾಡಿ ಬಂದ್ಬಿಡ್ತು. ಗೊತ್ತಾಗ್ದೆ ಚೇರ್ ಮೇಲ್ ಕೂತು ಹಾಗೆ ಕೆನ್ನೆ ಮೇಲ್ ಬೆರ್ಳಿಟ್ಕೊಂಡು ಕೂತ್ಕಂಡೆ. ಆಮೇಲ್ ವಸಿ ಹಾರ್ಟು ಓಪನ್ನಾಗಿ ವಿರಳವಾಗಿ ಆಲೋಚನೆಗಳೆಲ್ಲಾ ಬಂದು ಕ್ಯೂನಲ್ ನಿಂತ್ಕೊಂಡ್ವು.
ಹಿಂಗಂದಾಗ ಥಟ್ಟಂತ ಹೊಳ್ಯೋದು ಮದುವೆಗ್ ಸಂಬಂದ್ಸಿದ್ ವಿಷ್ಯ..
ಆದ್ರೆ ನೋಡ್ತಾ ಹೋದಂಗೆಲ್ಲಾ ಎಷ್ಟೊ ಮುಖ್ಯ ವಿಷ್ಯಗಳಲ್ಲೆಲ್ಲಾ ಅವಕಾಶ ಸಿಕ್ಕು, ವಂಚಿತವಾಗಿ, ಏನೆಲ್ಲಾ ಆಗಿರೋದು ಕಂಡು ಬರತ್ತೆ. ಸ್ವಂತ ಬದುಕಲ್ಲಿಲ್ದಿದ್ರೂ ಕಣ್ಣಿಗೆ ಕಂಡ ಎಲ್ಲರ ಲೈಫಲ್ಲೂ ನೋಡಿದಂಥಾ ಅನುಭೂತಿಗಳು ಕಣ್ಣೆದುರಿಗ್ ಬಂದ್ಬಿಡತ್ತೆ.
ಈ ಪ್ರಪಂಚದಲ್ಲಿ ಇರೋದು ಎರಡೇ ವಿಧದ ಕಾರಣೀಭೂತಗಳು. ಒಂದೇ ನಾಣ್ಯಕೆ ಎರ್ಡ್ ಮುಖ ಇದ್ದಂಗೆ, ನೋವು ನಲಿವು, ಕತ್ಲೆ ಬೆಳಕು, ಖಾರ ಸಿಹಿ, ಒಗರು ಕಹಿ, ನಂದು ನಿಂದು, ಮೇಲೆ ಕೆಳಗೆ, ಹೀಗೆ ತುಂಬಾ..
ಹಾಗಿರೋವಾಗ ನಾವ್ ಹುಟ್ಟಿ ಭೂಮಿಗ್ ಬರೋದೆ ಒಂದ್ ಅವಕಾಶ. ಅದು ದೇವ್ರು ತುಂಬಾ ಅಪರೂಪವಾಗಿ ಕೊಟ್ಬಿಡ್ತಾನೆ. ಆವಾಗಿಂದ ಬೆಳಿತಾ ಬಂದಾಗ ಬದುಕಿನ್ ದಾರಿಯಲ್ಲಿ ಏಳು ಬೀಳು ಶುರು ಆಗ್ಬಿಡತ್ತೆ, ಅಲ್ಲಿಂದ ಅನುಭವಗಳು ಸ್ಟಾರ್ಟಪ್ ಪಡ್ಕೊಂಡು ಪಾಠ ಕಲಿಸೋಕೆ ಮುಂದಡಿ ಇಟ್ಬಿಟ್ಟಿರತ್ತೆ ಲೈಫು.
ಸೊ ಆಗ ನೋಡಿ ಬೈ ಲಕ್ ಕೆಲವರ ಜೀವನ್ದಲ್ಲಿ ಎರಡನೆ ಅವಕಾಶ ಅನ್ನೊ ಸೆಕೆಂಡ್ ಚಾಪ್ಟರ್ ಶುರು ಆಗ್ಬಿಡತ್ತೆ, ಇಲ್ಲಾಂದ್ರೆ ಕೆಲವರಿಗೆ ಆ ಅವಕಾಶ ವಂಚಿತವಾಗಿ ಮೇನ್ ಚಾಪ್ಟರಲ್ಲೆ ಜೀವ್ನ ಸಾಗ್ಸೌರ್ರಿತಾರೆ . ಎಂಥಾ ಘೋರ ಅದು. ಮೇಲೇಳುವಷ್ಟು ಸುಖದ ಶಕ್ತಿ ಸಿಕ್ಕಿದ್ರೆ ಓಕೆ, ಇಲ್ಲಾಂದ್ರೆ ಕೊನೆವರ್ಗೂ ತೆವಳಿಕೊಂಡಿರ್ತಾರೆ.
ಹೀಗೇನೆ ನೋಡ್ತಾ ಹೋದಂಗೆಲ್ಲಾ ನಂಗೊಂಥರಾ ಡಿಫರೆಂಟ್ ವಿಷ್ಯನೆ ಹೊಳಿತು ಕಂಡ್ರಿ. ಅದ್ ಲಾಸ್ಟಲ್ಲಿದೆ ನೋಡಿ……
ಹೀಗ್ ನೋಡ್ತಾ ಹೋದಂಗೆಲ್ಲಾ ಜೀವನದ ಎರಡನೆಯ ಅವಕಾಶಗಳ ಮಧ್ಯಭಾಗದಲ್ಲಿ ಕ್ಷಮೆ, ವಿಮೋಚನೆ ಮತ್ತು ಮಾನವ ಚೇತನದ ಶಕ್ತಿಯ ನಂಬಿಕೆ ಇರುತ್ತದೆ – ಪ್ರತಿಯೊಬ್ಬ ವ್ಯಕ್ತಿಯು ತಮ್ಮನ್ನು ತಾವು ಪುನಃ ಪಡೆದುಕೊಳ್ಳಲು, ಹೊಸದಾಗಿ ಪ್ರಾರಂಭಿಸಲು ಮತ್ತು ತಮ್ಮ ಕನಸುಗಳನ್ನು ಹೊಸ ಚೈತನ್ಯದಿಂದ ಮುಂದುವರಿಸಲು ಅವಕಾಶಕ್ಕೆ ಅರ್ಹರು ಎಂಬ ನಂಬಿಕೆ.
ತಮ್ಮ ವೈಯಕ್ತಿಕ ಅಥವಾ ವೃತ್ತಿಪರ ಜೀವನದಲ್ಲಿ ತಪ್ಪುಗಳನ್ನು ಮಾಡಿದ ಅಥವಾ ಹಿನ್ನಡೆಗಳು ಮತ್ತು ವೈಫಲ್ಯಗಳನ್ನು ಅನುಭವಿಸಿದ ಯಾರಿಗಾದರೂ, ಎರಡನೇ ಅವಕಾಶಗಳ ಕಲ್ಪನೆಯು ನಮ್ಮ ಭೂತಕಾಲವು ನಮ್ಮನ್ನು ವ್ಯಾಖ್ಯಾನಿಸುವುದಿಲ್ಲ ಎಂಬುದು ನೆನೆಪಿನಲ್ಲಿರಬೇಕು.
ಮತ್ತು ಎರಡನೆಯ ಅವಕಾಶಗಳು ಕೇವಲ ವ್ಯಕ್ತಿಗಳಿಗೆ ಸೀಮಿತವಾಗಿಲ್ಲ ಆದರೆ ಸಂಸ್ಥೆಗಳು, ಸಮುದಾಯಗಳು ಮತ್ತು ಸಮಾಜಕ್ಕೆ ವಿಸ್ತರಿಸುತ್ತವೆ, ಅವರ ತಪ್ಪುಗಳು ಹವಾಮಾನ ಬದಲಾವಣೆ, ಸಾಮಾಜಿಕ ಅನ್ಯಾಯ ಮತ್ತು ಆರ್ಥಿಕ ಅಸಮಾನತೆಯನ್ನು ಒಳಗೊಂಡಿವೆ.
ಎರಡನೇ ಅವಕಾಶಗಳು ಈ ತಪ್ಪುಗಳನ್ನು ಒಪ್ಪಿಕೊಳ್ಳಲು ಹೆಚ್ಚು ಸಮರ್ಥನೀಯ ಮತ್ತು ಸಮಾನ ಭವಿಷ್ಯದ ಕಡೆಗೆ ಕೆಲಸ ಮಾಡಲು ಹಾಗೂ ಗುಂಪುಗಳ ನಡುವಿನ ವಿಭಜನೆಗೆ ಸೇತುವೆಯಾಗಿ ಮತ್ತು ಹೆಚ್ಚು ಒಳಗೊಳ್ಳುವ ಮತ್ತು ಒಗ್ಗೂಡಿಸುವ ಸಮಾಜವನ್ನು ರಚಿಸುವಲ್ಲಿ ಸಹಾಯಕವಾಗುತ್ತದೆ.
ನಮ್ಮ ಮೃದು ಹೃದಯದ ಮೂಲೆಗಳಲ್ಲಿ ಕೃತಜ್ಞತೆಯ ಮಧುರವಿದೆ, ಜೀವನವು ನಮಗೆ ಎರಡನೇ ಅವಕಾಶವನ್ನು ನೀಡಿದಾಗ ಹೊಸ ಆರಂಭದ ಪಿಸುಮಾತು ಕಥೆಗಳಲ್ಲದೇ ಹತಾಶೆಯಿಂದ ಭರವಸೆ ಅರಳುವ ಆ ದುರ್ಬಲ ಕ್ಷಣಗಳಲ್ಲಿ ನಾವು ನಿಜವಾಗಿಯೂ ಜೀವಂತವಾಗಿರುತ್ತೇವೆ.
ಈ ಸುಂದರವಾದ ಜೀವನವನ್ನು ನಾವು ಒಮ್ಮೆ ಮಾತ್ರ ಪಡೆಯುತ್ತೇವೆ ಮತ್ತು ಅದರ ನಂತರ ಏನಾಗುತ್ತದೆ ಎಂದು ನಮಗೆ ತಿಳಿದಿಲ್ಲವೆಂಬುದು ಜೀವನದ ಸಾರ್ವತ್ರಿಕ ಸತ್ಯವಲ್ಲವೇ…
ನಾವು ಒಂದೇ ಬಾರಿಗೆ ಜೀವನವನ್ನು ಪಡೆಯುತ್ತೇವೆ ಎಂಬ ಸಾಮಾನ್ಯ ಪ್ರವೃತ್ತಿಯು ನಮ್ಮಲ್ಲಿ ಇದೆ,
ಉದಾಹರಣೆಗೆ ವೃತ್ತಿ, ಸಂಪತ್ತು, ಸಂಬಂಧಗಳು, ಸ್ನೇಹ, ಆರೋಗ್ಯ, ಉದ್ಯೋಗ, ವ್ಯಾಪಾರ ಮತ್ತು ಇತರೆಗಳಲ್ಲಿ ನಮಗೆ ಒಂದೇ ಒಂದು ಅವಕಾಶವಿದೆ. ನಮ್ಮ ಆಲೋಚನಾ ಪ್ರಕ್ರಿಯೆಯು ಮೊದಲಿನಿಂದಲೂ ಬಹಳ ಕಿರಿದಾದ ರೀತಿಯಲ್ಲಿ ಅಭಿವೃದ್ಧಿಗೊಂಡಿದೆ, ಅಂದರೆ ನಾವು ಎಲ್ಲವನ್ನೂ ಒಂದೇ ಬಾರಿಗೆ ಅಥವಾ 1 ನೇ ಪ್ರಯತ್ನದಲ್ಲಿ ಮಾಡಬೇಕು ಮತ್ತು 2 ನೇ ಅವಕಾಶಕ್ಕೆ ಯಾವುದೇ ಅವಕಾಶವಿಲ್ಲ ಎಂಬಂತೆ ಸಾಗಿಬಿಡ್ತೀವಿ. ಇದೆ ಲಕ್.
ಆದ್ರೆ ನಾವು ಈಗ ತುಂಬಾ ಸಂಕುಚಿತ ಮನಸ್ಸಿನ ವ್ಯಕ್ತಿಗಳಾಗಿದ್ದೇವೆ, ನಮ್ಮ ಸ್ವಯಂ ಮತ್ತು ಇತರರಿಗೆ 2 ನೇ ಅವಕಾಶವನ್ನು ನೀಡಲು ನಾವು ಬಯಸುವುದಿಲ್ಲ. ನನ್ನ ಪ್ರಕಾರ ಇದು ನಮ್ಮಿಂದ ಸೃಷ್ಟಿಸಲ್ಪಟ್ಟ ಅತ್ಯಂತ ಗಂಭೀರವಾದ ಸಮಸ್ಯೆಯಾಗಿದೆ ಮತ್ತು ಇದು ಕಳಪೆ ಸಂಬಂಧಗಳು, ಸ್ನೇಹ, ವೃತ್ತಿ ಬೆಳವಣಿಗೆ, ಖಿನ್ನತೆ ಇತ್ಯಾದಿಗಳ ಫಲಿತಾಂಶಗಳಾಗಿ ಹೊರಹೊಮ್ಮುತ್ತದೆ.
ಈ ಕಾರಣಕ್ಕಾಗಿಯೇ ಹೆಚ್ಚಾಗಿ ಸಂಬಂಧಗಳು ಸ್ನೇಹಗಳು ಮುರಿದುಹೋಗುತ್ತವೆ, ಒಬ್ಬ ವ್ಯಕ್ತಿ ಒಮ್ಮೆ ತಪ್ಪು ಮಾಡಿದರೆ 2 ನೇ ವ್ಯಕ್ತಿ ಮೊದಲನೆಯವರೊಂದಿಗೆ ಎಲ್ಲಾ ಸಂಬಂಧಗಳನ್ನು ಕೊನೆಗೊಳಿಸಲು ಸಿದ್ಧನಾಗಿರುತ್ತಾನೆ. ನಾವು ಹೊಸ ಸಂಬಂಧಗಳಿಗೆ ಅಥವಾ ಹೊಸ ಸ್ನೇಹಕ್ಕೆ ಪ್ರವೇಶಿಸಿದಾಗ ಇತರರಿಂದ ನಮ್ಮ ನಿರೀಕ್ಷೆಗಳು ತುಂಬಾ ಹೆಚ್ಚಾಗಿರುತ್ತದೆ, ಅವರು ಯಾವುದೇ ಮಾತುಗಳನ್ನಾಡದೆ ನಮ್ಮನ್ನು ಅರ್ಥಮಾಡಿಕೊಳ್ಳಬೇಕೆಂದು ನಾವು ಬಯಸುತ್ತೇವೆ ಆದರೆ ಇನ್ನೊಬ್ಬ ವ್ಯಕ್ತಿಯೂ ನಮ್ಮಿಂದ ಅದೇ ರೀತಿಯ ನಿರೀಕ್ಷೆಗಳನ್ನು ಹೊಂದಿರಬಹುದು ಎಂಬುದನ್ನು ನಾವು ಮರೆತುಬಿಡುತ್ತೇವೆ.
ನಾವು ಮನುಷ್ಯರಾಗಿರುವುದರಿಂದ ಉದ್ದೇಶಪೂರ್ವಕವಾಗಿ ಅಥವಾ ಉದ್ದೇಶಪೂರ್ವಕವಲ್ಲದೇ ತಪ್ಪುಗಳು ಸಂಭವಿಸುತ್ತವೆ. ನನ್ನ ಪ್ರಕಾರ, ಒಬ್ಬ ವ್ಯಕ್ತಿಯು ತಪ್ಪನ್ನು ಮಾಡಿದ್ದರೆ ಅದರಲ್ಲಿ ಯಾವುದೇ ತಪ್ಪಿಲ್ಲ ಆದರೆ ಸಂಬಂಧ ಅಥವಾ ಸ್ನೇಹವನ್ನು ಕೊನೆಗೊಳಿಸುವ ಅಥವಾ ಎರಡನೇ ಅವಕಾಶವನ್ನು ನೀಡುವ ನಿರ್ಧಾರವು ಅಂತಹ ತಪ್ಪು ಉದ್ದೇಶಪೂರ್ವಕವಾಗಿ ಮಾಡಲ್ಪಟ್ಟಿದೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುತ್ತದೆ.ಹೌದು ಎಂದಾದರೆ ಅದು ಖಂಡಿತವಾಗಿ ಕೊನೆಗೊಳ್ಳಬೇಕು ಆದರೆ ಉದ್ದೇಶಪೂರ್ವಕವಾಗಿ ತಪ್ಪು ಮಾಡಿಲ್ಲದಿದ್ದ ಪಕ್ಷದಲ್ಲಿ , ಈ ಸಂದರ್ಭದಲ್ಲಿ ನಾವು ಆ ವ್ಯಕ್ತಿಗೆ 2 ನೇ ಅವಕಾಶವನ್ನು ನೀಡಬೇಕು ಎಂದು ನಾನು ಭಾವಿಸುತ್ತೇನೆ, ಆ ವ್ಯಕ್ತಿಯು ಅವನು ಅಥವಾ ಅವಳು ತಪ್ಪು ಮಾಡಿದ ಸತ್ಯವನ್ನು ಒಪ್ಪಿಕೊಳ್ಳಬೇಕು.ಅದಿರ್ಲಿ ಈ ತಪ್ಪು ಒಪ್ಪುಗಳೆಲ್ಲಾ ಓಕೆ. ಈ ಜಗತ್ತು ಈಗ ಇರುವುದಕ್ಕಿಂತ ಹೆಚ್ಚು ಸುಂದರವಾಗಿರುತ್ತದೆ, ಕಣ್ಣಾರೆ ನಿದರ್ಶನಗಳಿಂದ ಕಂಡಿದ್ದೇವೆ. ಸಣ್ಣ ಸಣ್ಣ ಹೆಜ್ಜೆ ನಮ್ಮ ಜೀವನದಲ್ಲಿ ಮತ್ತು ಇತರರಲ್ಲೂ ಮೌಲ್ಯಗಳನ್ನು ಹೆಚ್ಚಿಸುತ್ತದೆ.ಸ್ವಲ್ಪ ವಿರಳವಾಗಿ ನೋಡಣ…ನನಗೆ ಈ ಮ್ಯಾಟ್ರು ನೋಡ್ದಾಗ ನನ್ನ ತಲೆಗೆ ಬಂದಿದ್ದು ಅಂದ್ರೆ ಒಬ್ಬ ಅಂಗವಿಕಲನ ಬಗ್ಗೆ.
ಈ ಲೈಫಲ್ಲಿ ಆತ ಎಷ್ಟು ಹೋರಾಟಗಳ್ನೆಲ್ಲಾ ಎದುರಿಸ್ಬೇಕು ಪಾಪ. ಹುಟ್ಟುವಾಗ ಯಾವ್ದೊ ದೋಷವೆಂಬಂಥಾ ಪಾಷಾಣಕ್ಕೆ ಸಿಲುಕಿ ಹುಟ್ಟಿ ಬಂದಿರ್ತಾನೆ. ತನ್ನ ಅಂಗ ನ್ಯೂನ್ಯತೆಯೊಂದೆ ಮಹಾ ಶತ್ರುವಾಗಿ ಬಂದಿದೆ ಎನ್ನುವಂತೆ ಕಷ್ಟದ ಗಾಳಿಗೆ ಮೈಯೊಡ್ಡಿ ಕಾಡುತಿರುತ್ತೆ. ಅದರೊಟ್ಟಿಗೆ ಸಲಹುವ ಅಪ್ಪ ಅಮ್ಮ ಎಲ್ಲರೂ ಅವನಿಗಾಗಿ ಎಷ್ಟು ಚ್ಯಾಲೆಂಜ್ಗಳು ಕೈಗೆತ್ತಿಕೊಂಡಿರ್ತಾರೆ. ಅಬ್ಬಬ್ಬಾ ….. ಅಷ್ಟು ಅಂಗ ವೈಖಲ್ಯತೆ ಇದ್ದಾಗ್ಯೂ ಈ ಸಮಾಜದಲ್ಲಿ ಎಲ್ಲರಿಗೂ ಸಮನಾಗಿ ಮೇಲೇಳಬೇಕೆಂಬ ಛಲದ ಭರವಸೆಯ ಒಂದು ಮನೋಬಲ ಅವನಲ್ಲಿ ತುಂಬಿಬಿಟ್ಟಿರುತ್ತೆ.
ಹಿಂದೊಮ್ಮೆ ಟಿ ವಿ ಸಂದರ್ಶನದಲ್ಲಿ ಒಬ್ಬ ಅಂಗವಿಕಲನ ಬಗ್ಗೆ ನೋಡ್ದೆ. ಅವನ ಹೆಸ್ರು ಅಶ್ವಿನ್ ಅಂತ. ಆತನಿಗೆ ಇಡೀ ದೇಹವೇ ನಿಷ್ಪ್ರಯೋಜಕವಾಗಿದೆ. ಸಂಪೂರ್ಣ ಅವಲಂಬಿತ. ಆದ್ರೆ ಜ್ಞಾನ ಅನ್ನೊ ಒಂದು ಅವಕಾಶ ಅವನಿಗೆ ಸಿಕ್ಕಿತ್ತು. ಏನಂದ್ರೆ ಆತ ಸಾಫ್ಟ್ವೇರ್ ಇಂಜಿನಿಯರ್ ಗೋಲ್ಡ್ ಮೆಡಲಿಸ್ಟ್. ಇಷ್ಟೊಂದು ಸಾಧನೆ ಮಾಡಿ ಎಲ್ಲರಿಗೂ ಸಮನಾಗಿ ಬೆಳೆಯಬೇಕೆಂಬ ಮನೊ ಬಲ ಅವರಲ್ಲಿತ್ತು. ಈಗ ಎಲ್ಲಾರಿಗಿಂತಲೂ ಹೆಚ್ಚು ಸ್ಯಾಲರೀ ಕೂಡಾ ಪಡಿತಿದ್ದಾನಂತೆ. ಎಷ್ಟು ಹೆಮ್ಮೆ ಅಲ್ವಾ.
ಅವನ ಜ್ಞಾನಕ್ಕೆ ಓದಿಗೆ ಕಂಪನಿಯವರೇ ಮನೆಗೆ ಬಂದು ಅವನ ಟ್ಯಾಲೆಂಟ್ ನೋಡಿ ಕೆಲಸ ಕೂಡಾ ಕೊಟ್ರಂತೆ. ಅವನಿಗೆ ಅಂಗವೈಕಲ್ಯ ಕಾಡಿದ್ರೂ ಜ್ಞಾನ ವೈಖಲ್ಲ ಅವನಿಗಿರಲಿಲ್ಲ ನೋಡಿ. ಅದ್ರಿಂದ ಸಿಕ್ಕ ಅವಕಾಶವೆಲ್ಲ ಎರಡನೇ ಅವಕಾಶವೇ ಎಂಬಂತೆ ಮುನ್ನುಗಿದ್ದ. ಅದಕಾಗಿ ಎರಡನೇ ಅವಕಾಶಕ್ಕಾಗಿ ಈ ಸಮಾಜದಲ್ಲಿ ಮೇಲೆದ್ದು ಬದುಕಿ ತೋರಿಸಲು ತನ್ನ ಅಂಗ ವೈಖಲ್ಯತೆಯೇ ಮರೆತಂತೆ ವಿದ್ಯೆ, ಬುದ್ಧಿ, ಆತ್ಮ ವಿಶ್ವಾಸ, ಛಲ, ಧೈರ್ಯ, ಎಲ್ಲವೂ ಪಡೆಯಲು ಹಪಹಪಿಸುತ್ತಾನೆ, ಆಗ ಅವುಗಳೆಲ್ಲಾ ಸಿಕ್ಕಾಗ ಮೇಲೆದ್ದು ಮುಂದೆ ಬಂದು ನಾನೂ ಎಲ್ಲರಂತೆ ಬದುಕಬಲ್ಲೆ ಎಂಬ ಆತ್ಮವಿಶ್ವಾಸ ಮೂಡಿದಾಗ ಎರಡನೆ ಅವಕಾಶ ಸಿಕ್ಕಿದ್ದಕ್ಕೂ ಸಾರ್ಥಕವೆನಿಸುತ್ತೆ.
ಒಂದು ಬಾರಿ ಈ ಲೋಕವನ್ನೊಮ್ಮೆ ನೋಡ್ತಾ ಹೋದಂಗೆಲ್ಲಾ ಅಚ್ಚರಿಯ ಆಗರ. ಸಹಾನುಭೂತಿ, ಕರುಣೆ, ಅಯ್ಯೋ ಪಾಪ ಅನ್ನುವಂತೆ ಈ ಲೋಕ ಅವರನ್ನು ನೋಡುತ್ತೆ. ಲೆಕ್ಕಿಸದೆ ಅದೊಂದನ್ನೆ ತೊರೆದು ಎಲ್ಲರಿಗೂ ಸಮಾನವಾಗಿ ಬದುಕಬೇಕೆಂಬ ಛಲಕ್ಕೆ ಒಂದ್ ಅವಕಾಶ ಸಿಗಬೇಕಷ್ಟೆ.
ಪ್ರಾಮಾಣಿಕವೆಂಬುದು ಅವರಲ್ಲಿ ಎಂದಿಗೂ ಬಿಟ್ಟುಹೋಗುವುದಿಲ್ಲ, ಆದರೆ ಅವಕಾಶ ವಂಚಿತವಾಗಿ ಸಮಾಜದಲ್ಲಿ ಒಂದೊಂದು ಹಂತವನ್ನು ತಲುಪೋದಕ್ಕೆ ಹರಸಾಹಸವೇ ಮಾಡ್ತಿರ್ತಾರೆ. ಅವರ ಏಳಿಗೆಗಾಗಿ ಎಷ್ಟೋ ಸಂಸ್ಥೆಗಳು ಈಗ ಜಾರಿಯಲ್ಲಿವೆ, ಏಕೆಂದರೆ ಈ ” ಬದುಕಿನಲಿ ಎರಡನೆ ಅವಕಾಶ” ಅನ್ನೋದು ಇವರಿಗೆ ಸಿಗಬೇಕಷ್ಟೆ, ಹೊರತಾಗಿ ಎಲ್ಲಾ ಚೆನ್ನಾಗಿದ್ದು ಅವಕಾಶ ಸಿಕ್ಕಾಗಲೂ ಕೈಕಟ್ಟಿ ಕೂಡೋರಿಗೆ ಸಿಕ್ಕರೆ ವ್ಯರ್ಥವೇ ಸರಿ.
ಮದುವೆ, ಉದ್ಯೋಗ, ಎಜುಕೇಷನ್, ಬ್ಯುಸಿನೆಸ್, ಹೀಗೆ ಹಲ್ವಾರು ಕ್ಷೇತ್ರದಲ್ಲಿ ಎರಡನೆ ಅವಕಾಶ ಸಿಕ್ಕಿ ಮೇಲೆದ್ದವರಿದ್ದಾರೆ, ಆದ್ರೆ ಅಂಗವೈಖಲ್ಯತೆ ಬದಿಗಿಟ್ಟು ಅವಕಾಶ ಕೊಡಿಸಿದಾಗ ಅವರು ಮೇಲೇಳುವುದಿದೆಯಲ್ಲ ಅದು ತುಂಬಾ ಮುಖ್ಯ ಈ ಸಮಾಜದಲ್ಲಿ.
ಇದೊಂದು ವಿಭಿನ್ನ ವಿಷಯ ಅನಿಸ್ತು ಬರ್ದೆ.
ಬರಿತಾ ಹೋದ್ರೆ ತುಂಬಾ ಇದೆ.
ಓಕೆ
ಈಟೆ ಸಾಕು…
ಆದ್ರೆ ಎಲ್ರಿಗೂ ಹೀಗೆ ಲೈಪ್ನ ಹಲವು ಮಜಲುಗಳಲ್ಲಿ ಎರಡೆರ್ಡು ಅವ್ಕಾಶ ಸಿಗ್ತಿರತ್ತೆ ಆಗಾಗ ಬಿಡ್ಬೇಡಿ.
ಲಬಕ್ಕಂತ ಹಿಡ್ಕೊಂಡು ಮುಂದ್ವರೆದು ಬಿಡಿ ಆಯ್ತಾ..
———————————
ಕಾವ್ಯ ಸುಧೆ. ( ರೇಖಾ ).
ಸುಂದರ ಅರ್ಥಪೂರ್ಣ ಲೇಖನ
Sripad Algudkar ✍️