ರೇಖಾ ಸುದೇಶ್ ರಾವ್ ಕವಿತೆ-ಸೂಜಿ ಮಲ್ಲಿಗೆ

ಕಾವ್ಯ ಸಂಗಾತಿ

ರೇಖಾ ಸುದೇಶ್ ರಾವ್

ಸೂಜಿ ಮಲ್ಲಿಗೆ

ಸುಂದರವಾದ ತುರುಬು ಕಟ್ಟಿ ಕುಳಿತ ನಾರಿ
ನಲ್ಲ ಮಲ್ಲಿಗೆ ತರುವನೆಂದು ಕಾಯುತ್ತಾ ದಾರಿ
ಸೂಜಿ ಮಲ್ಲಿಗೆ ತಂದಾಗ ಅದೇನೋ ಅಚ್ಚರಿ
ಸುವಾಸನೆಗೆ ಮನ ಸೋತಳು ಬಾರಿ ಬಾರಿ
ನಲ್ಲೆಯ ಕರಗಳಿಗಿತ್ತನು ಪ್ರೀತಿಯನು ತೋರಿ
ನೀವೆ ಮುಡಿಸಿಯೆಂದಳು ಮುಗುಳು ನಗೆ ಬೀರಿ

ಅಂದವಾಗಿ ಕಟ್ಟಿರುವ ಮಲ್ಲಿಗೆ
ಹೂವ ಮಾರಿದಳಾಕೆ ಗಲ್ಲಿ ಗಲ್ಲಿಗೆ
ನಲ್ಲೆಗೆ ಮುಡಿಯಲು ತಂದಿಹನಿಲ್ಲಿಗೆ
ಪರಿಮಳ ಬೀರಿಹುದು ಎಲ್ಲೆಲ್ಲಿಗೆ

ಶ್ವೇತ ವರ್ಣದ ಕುಸುಮದ ಅಲಂಕಾರ
ಪ್ರಿಯತಮೆ ಕೇಶಕೆ ಸುಂದರ ಶೃಂಗಾರ
ಸುಗಂಧಭರಿತ ಪುಷ್ಪ ಕೊರಗಜ್ಜಗೆ ಪ್ರಿಯಕರ


Leave a Reply