ಮಂಜುಳಾ ಪ್ರಸಾದ್ ಕವಿತೆ-ಅಜ್ಜೀ.. ನಿನಗೊಂದು ಸಲಾಂ

ಕಾವ್ಯ ಸಂಗಾತಿ

ಮಂಜುಳಾ ಪ್ರಸಾದ್

ಅಜ್ಜೀ.. ನಿನಗೊಂದು ಸಲಾಂ

ಹೆಜ್ಜೆ ಎತ್ತಿಡಲು ಕಷ್ಟವಾದರೂ ನಾಟ್ಯದ ಜೀವಕಳೆ!
ಬದುಕಿನಂಚಿನಲ್ಲೂ ಕೈಬಿಡದ ಭರವಸೆಯ ಜೀವಸೆಲೆ!

ಅಜ್ಜಿಯಾದರೇನಂತೆ?
ಇಲ್ಲ ಅಭಿರುಚಿಗೆ
ಯಾವುದೇ ಕಟ್ಟುಪಾಡು,
ನೃತ್ಯಮಯವೀ ಜೀವನ
ನೀನೊಮ್ಮೆ ಅದರ ರುಚಿ
ಸವಿದು ನೋಡು!

ಬಾಳ ಉತ್ಸಾಹ ಚಿಗುರಿಸುವ,
ನೂರರಂಚಿನಲ್ಲೂ ಅರಳಿ
ನಗುವ ಹೊರಹೊಮ್ಮಿಸುವ
ಬತ್ತದ ಭಾವಗಳ ಹೊರಹಾಕುವ
ಅದಮ್ಯ ಚೇತನ,ಈ ನಾಟ್ಯ ಕಲೆ,
ನೋಡುಗರ ಕಣ್ಮನ ಸೆಳೆವ ಜೀವಕಳೆ!!

ಅಜ್ಜೀ ನೀ ನಮ್ಮ ಮನಸ ಕದ್ದು ಬಿಟ್ಟೆ.
ಸುಖಾಸುಮ್ಮನೆ ಮನಕೆಡಿಸಿಕೊಂಡು
ಇಪ್ಪತ್ತರಲ್ಲಿಯೇ ಬಾಳು ಮುಗಿಸುವ ಜೀವಗಳಿಗೆ ನೀನೊಂದು
ಪಾಠವಾಗಿ ಬಿಟ್ಟೆ!!
ನಗುತ ನಗಿಸಿ ಬಾಳುವ ಕಲೆ ತಿಳಿಸಿಕೊಟ್ಟೆ!!


ಮಂಜುಳಾ ಪ್ರಸಾದ್

6 thoughts on “ಮಂಜುಳಾ ಪ್ರಸಾದ್ ಕವಿತೆ-ಅಜ್ಜೀ.. ನಿನಗೊಂದು ಸಲಾಂ

  1. ಚೆನ್ನಾಗಿ
    ಬಂದಿದೆ
    ಜೀವನೋತ್ಸಾಹ ಕರಗುತ್ತಿರುವ ಈ ಕಾಲದಲ್ಲಿ ಬತ್ತದ ಬುಗ್ಗೆಯಾಗಿರುವ ಹಳೆ ತಲೆಮಾರಿನ ಜನ ಈಗಿನವರಿಗೆ ನಿಜಕ್ಕೂ ಪಾಠವಿದೆ!

  2. ಇರಬೇಕು ಮನೆಯಲ್ಲಿ ಅಜ್ಜಿ…. ಆಗಲೇ ಮನೆಗೊಂದು ಜೀವಕಳೆ

Leave a Reply

Back To Top