ಡಾ ಸುರೇಶ ನೆಗಳಗುಳಿ-ಗಜಲ್

ಕಾವ್ಯ ಸಂಗಾತಿ

ಡಾ ಸುರೇಶ ನೆಗಳಗುಳಿ

ಗಜಲ್

ಸಂತಸದ ದಿನಗಳವು ನಿನ್ನ ಜೊತೆ ಪಯಣ
ಜಗವನ್ನೆ ಮರೆಸಿದುವು ನಿನ್ನ ಜೊತೆ ಪಯಣ.

ಬಯಕೆಗಳ ಸಾಗರದ ಅಲೆಯ ಅಬ್ಬರ ಬಹಳ
ನೆನಪು ಮಾಲೆಯ ಸರವು ನಿನ್ನ ಜೊತೆ ಪಯಣ.

ತಿರುಗುತ್ತಲಿಹ ಗಾಳಿ ತಂಪು ತರಲೆಂದಿಹುದು
ತಂಗಾಳಿ ಮೈ ಮನವು ನಿನ್ನ ಜೊತೆ ಪಯಣ.

ಕಿರಿಕಿರಿಯ ನಾದಗಳು ಕಾಡಿನಲಿ ಹಲವು ಬಗೆ
ಮಧುರ ಕಂಠದ ಸ್ವರವು ನಿನ್ನ ಜೊತೆ ಪಯಣ

ಪಾರಿತೋಷಕವೇಕೆ “ಸುರೇಶ” ನಿಗೆ ನಾಕದಲಿ
ತೋಷದೋಕುಳಿ ವರವು ನಿನ್ನ ಜೊತೆ ಪಯಣ.


    ಡಾ ಸುರೇಶ ನೆಗಳಗುಳಿ

Leave a Reply

Back To Top