ವಿಶೇಷಲೇಖನ
ಲಲಿತಾ ಮ ಕ್ಯಾಸನ್ನವರ
ವರ್ಧಮಾನ ಮಹಾವೀರ.
ಜಿನನನ್ನು ನಂಬಿದವರು ಜೈನರು. ಅಹಿಂಸೆಯನ್ನು ಮೂಲಮಂತ್ರವಾಗಿರಿಸಿಕೊಂಡ, ಅಹಿಂಸಾ ಪರಮೋಧರ್ಮ ಎನ್ನುವ ಮೂಲಮಂತ್ರವನ್ನುಇರಿಸಿ ಪಾಲಿಸಿಕೊಂಡು ಹೋಗುತ್ತಿರುವ ಧರ್ಮವೇ ಜೈನ ಧರ್ಮ. ತ್ಯಾಗವೇ ಜೈನ ಧರ್ಮದ ಮೂಲ ಮಂತ್ರ. ಅತ್ಯಂತ ವಿಶಾಲ ಸೂಕ್ಷ್ಮ ಮನೋಭಾವದ ಅತ್ಯಂತ ಪ್ರಾಚೀನ ಧರ್ಮವೂ ಜೈನ ಧರ್ಮವಾಗಿದೆ ಇಂತಹ ಧರ್ಮವು ಪ್ರಥಮ ತೀರ್ಥಂಕರರಾದ ವೃಷಭನಾಥ ಭಗವಾನರಿಂದ ಪ್ರಾರಂಭವಾಗಿ 24ನೇ ತೀರ್ಥಂಕರದೇವ ಭಗವಾನ್ ಮಹಾವೀರ ರವರಿಗೆ ಸಾಗಿದೆ. ಜೈನ ಧರ್ಮದಲ್ಲಿ ದಿಗಂಬರರು ಮತ್ತು ಶ್ವೇತಾಂಬರರು ಎನ್ನುವ ಎರಡು ಪಂಥಗಳಿವೆ. ತ್ಯಾಗ ವೈರಾಗ್ಯ ತಪವು ಜೈನ ಧರ್ಮದ ಮೂಲ ಮಂತ್ರ. ಜೈನ ಮುನಿಗಳು ಎಲ್ಲ ಬಂಧಗಳಿಂದ ಮುಕ್ತಾರಾದವರು. ಧರ್ಮ ಪಾಲನೆ ಸೇವೆ ಮಾಡುವವರು ಶ್ರಾವಕರು. ಪಂಚಾಣುವ್ರತಗಳನ್ನು ಪಾಲಿಸುವವರೇ ಜೈನರು, ಜೈನ ಧರ್ಮೀಯರು.
ಮಹಾವೀರರ ಕಾಲ ಸುಮಾರು ಕ್ರಿಸ್ತಪೂರ್ವ 599 ರಿಂದ 527 ಇಕ್ಷ್ವಾಕು ವಂಶದ ರಾಜ ಸಿದ್ಧಾರ್ಥ ಮತ್ತು ತ್ರಿ ಶಲಾದೇವಿಯ ಕುಮಾರನಾಗಿ ವೈಶಾಲಿ ನಗರದ ಕುಂಡಲ ಗ್ರಾಮದಲ್ಲಿ ಜನಿಸಿದರು. ರಾಜ ವೈಭವದಿಂದ ಇರಬೇಕಾದ ಇವರಲ್ಲಿ ಬಾಲ್ಯದಲ್ಲಿ ವೈರಾಗ್ಯ ಮೂಡಿ ಕಠೋರ ತಪಸ್ಸಿನಿಂದ ಜೀವನವನ್ನು ಜೈನ ಧರ್ಮಕ್ಕಾಗಿ ಮುಡುಪಿಟ್ಟರು ಇವರನ್ನು ಅನುಯಾಯಿಗಳನ್ನು ಗಣದರರು ಎನ್ನುವರು. ವರ್ಧಮಾನರು 12 ವರ್ಷಗಳ ಕಠೋರ ತಪಸ್ಸು ಮಾಡಿ ನಂತರ ಧ್ಯಾನೋದಯ ಪಡೆದು ತೀರ್ಥಂಕರರಾದರು ಅಂದಿನ ಕಾಲದ ಜನರ ಆಡು ಭಾಷೆಯಾಗಿದ್ದ ಪ್ರಾಕೃತ ಭಾಷೆಯಲ್ಲಿ ಧರ್ಮಬೋಧನೆ ಮಾಡಿದರು. ಅಹಿಂಸೆ ಸತ್ಯ ಅಚೌರ್ಯ ಬ್ರಹ್ಮಚರ್ಯ ಅಪರಿಗ್ರಹದಂತಹ ಪಂಚಶೀಲ ತತ್ವಗಳ ಕುರಿತು ಬೋಧಿಸಿದರು ತಮ್ಮ 72ನೇ ವಯಸ್ಸಿನಲ್ಲಿ ಬಿಹಾರದ ಪಾವಪುರಿಯಲ್ಲಿ ನಿರ್ವಾಣ ಹೊಂದಿದರು.
ಮಹಾವೀರರ ಬೋಧನೆಗಳು:
ಸಾರ್ವಜನ ಹಿತಾಯ ಸರ್ವಜನಿ ಸುಖಾಯ ಎಂಬ ಧ್ಯೇಯ ವಾಕ್ಯದಲ್ಲಿ ಜೀವ ಪ್ರವರ ಮಹತ್ವವನ್ನು ಜೈನ ಧರ್ಮ ಸಾರ್ತ್ತದೆ 8 ರಥಗಳ ಆಧಾರದ ಮೇಲೆ ಜೀವನ ನಡೆಸಬೇಕೆಂದು ಮಹಾವೀರರು ಬೋಧಿಸಿದ್ದಾರೆ ಅವುಗಳಿಗೆ ಅಷ್ಟ ಸೋಪಾನಗಳು ಎನ್ನುವರು.
ಅಷ್ಟ ಸೋಪಾನಗಳನ್ನು ಗುಪ್ತಿ ಮತ್ತು ಸಮಿತಿ ಎಂದು ಎರಡು ಭಾಗದಲ್ಲಿ ವಿಂಗಡನೆ ಮಾಡಿದ್ದಾರೆ. ಅವು ಗುಪ್ತಿ:3
1.ವಾಗ್ ಗುಪ್ತಿ(ಮೌನ, ಸಂಯಮ)
2.ಮನೋಗುಪ್ತಿ(ಮನಸ್ಸಿನ ಸಂಯಮ)
3.ಶ್ರೇಯಗುಪ್ತಿ (ವಿಶೇಷವಾಗಿ ಕರ್ಮೆಂದ್ರಿಯಗಳ ಸಂಯಮ)
ಸಮಿತಿ: 5
1. ಭಾಷಾ ಸಮಿತಿ: ಎಚ್ಚರವಾಗಿ ಚಿಂತಿಸಿ ಹಿತವಾದ ವಾಕ್ಯಗಳನ್ನು ನುಡಿಯುವುದು.
2.ಏಷನಾ ಸಮಿತಿ: ಆಸೆಗಳನ್ನು ನಿಯಂತ್ರಿಸುವುದು.
3. ಆಲಾಪ ಸಮಿತಿ: ಆಹಾರದಲ್ಲಿ ಹಿತಮಿತ ಮತ್ತು ಪರಿಶುದ್ಧತೆ.
4.ಈರ್ಯಾಸಮಿತಿ: ವಿಹಾರಾದಿಯಲ್ಲಿ ಸಾವಧಾನತೆಯನ್ನು ಪಾಲಿಸುವುದು
5.ವ್ಯತಿಸಂಗ ಸಮಿತಿ: ಪರಿಶುದ್ಧಿ ಸಮಯದಲ್ಲಿ ಎಚ್ಚರಿಕೆ ವಹಿಸುವುದು.ಹೀಗೆ ಎಂಟು ಪ್ರಕಾರವಾಗಿ ವಿಂಗಡಿಸಿದ್ದಾರೆ.
ಈ 8 ಸರಳ ನಿಯಮವನ್ನು ಅಹೋರಾತ್ರಿ ಪರಿಪಾಲಿಸಿದರು ಆತ್ಮಸಂಯಮವು ಸಾಧ್ಯವಾಗಿ ಆಸೆ ದೂರವಾಗಿ ಜೀವ ಪರಿಶುದ್ಧವಾಗಿದೆ ಎಂದು ತಿಳಿಸಿದರು, ಉದಾಹರಣೆಗೆ ಜೈನ ಧರ್ಮದಲ್ಲಿ ಆಹಾರ ಕ್ರಮ ತೆಗೆದುಕೊಳ್ಳೋಣ ಜೈನ ಸಾವಕರು ಎರಡು ಬಾರಿ ಆಹಾರ ಸೇವಿಸುತ್ತಾರೆ ಶ್ರಾವಕರು ಸೂರ್ಯಾಸ್ತಕಿಂತ ಮೊದಲಿಗೆ ಆಹಾರ ಸೇವಿಸಿದರೆ ಜೈನ ಮುನಿಗಳು ವೃತದಾರಿಗಳಾಗಿ ಏಕಾಹಾರ ಅಥವಾ ನಿರಾಹಾರಿಗಳಾಗಿರುತ್ತಾರೆ. ಶ್ರಾವಕರು ಅಲ್ಪಭಾಷಿಕರಾಗಿರುತ್ತಾರೆ. ಮುನಿಗಳು ಧ್ಯಾನಿಗಳಾ ದರೆ ಗೃಹಸ್ಥರು ಸ್ವಾಧ್ಯಾಯಿಗಳಾಗಿರುತ್ತಾರೆ. ಇದರಿಂದ ಜೀವಿಯು ಸಂಯಮಿಯಾಗಿ ಜ್ಞಾನಿಯಾಗಿ ಆತ್ಮ ಕಲ್ಯಾಣಕ್ಕೆ ತಾನೇ ಮಾರ್ಗ ಕಂಡುಕೊಳ್ಳುತ್ತಾನೆ ಎಂದು ಬೋಧಿಸಿದ ಮಹಾವೀರರ ಬೋಧನೆಗಳು ಇಂದಿನ ಯುವಕರಿಗೆ ಮಾರ್ಗದರ್ಶಕವಾಗಿದೆ.
ಉದಾಹರಣೆಗೆ ಒಂದೆರಡು ಅನ್ನು ಇಲ್ಲಿ ವಿಮರ್ಶಿಸಲಾಗಿ.
ಅಹಿಂಸೆ: ಅಹಿಂಸೆ ಎನ್ನುವುದು ಅತಿ ಸೂಕ್ಷ್ಮಾತಿ ಸೂಕ್ಷ್ಮ ಭಾವ ಕೇವಲ ಪ್ರಾಣಿಹಿಂಸೆ ಅಷ್ಟೇ ಅಲ್ಲ ಇಲ್ಲಿ ಒಂದು ಜೀವಿಯನ್ನು ಮಾತನ್ನು ನೋಟ ಭಾವದಿಂದ ಯೋಚಿಸಿದರು ಅದು ಹಿಂಸೆಯೇ ಅದಕ್ಕೆ ಯಾವುದೇ ಜೀವಿಗೂ ಕನಸಿನಲ್ಲೂ ಹಿಂಸೆ ಮಾಡಬಾರದು , ಇಂದಿನ ಯುವಜನಾಂಗ ಆಧುನಿಕ ಯುಗದ ಬೆನ್ನುಹತ್ತಿ ಅತ್ಯಂತ ಹಿಂಸಾತ್ಮಕ ಕಾರ್ಯದಲ್ಲಿ ಭಾಗಿಯಾಗಿ ಮನ ಕ್ಲೇಶ ಮಾಡಿಕೊಳ್ಳುವುದರ ಜೊತೆಗೆ, ಸಮಾಜದ ಅನಾರೋಗ್ಯಕ್ಕೂ ಕಾರಣವಾಗುತ್ತಿದ್ದಾರೆ ಆದ್ದರಿಂದ ಯುವಜನಾಂಗ ಅಹಿಂಸೆಯನ್ನು ಪಾಲಿಸಿ ತಮ್ಮ ಲೌಕಿಕ ಜೀವನದ ಜೊತೆಗೆ ಸಾಮಾಜಿಕ ಕಳಕಳಿಯನ್ನು ಮಾಡಬೇಕಾಗಿದೆ.
ಅನೇಕಾಂತವಾದ: ಭಗವಾನ್ ಮಹಾವೀರರು ಅಸಂತೋಷ ,ದುಃಖದ ಕಾರಣ ಒಂದೇ ಮುಖದಲ್ಲಿರುವುದಿಲ್ಲ, ಅ ಸಂತೋಷದ ಮೂಲ ಅರಿಯಬೇಕು ಎಂದು ಬೋಧಿಸಿ ಸ್ವಾಧ್ಯಾಯದ ಮಹತ್ವ ತಿಳಿಸಿದರು. ಇದು ಇಂದಿನ ಯುವ ಪೀಳಿಗೆಗೆ ಅತ್ಯುಪಯುಕ್ತವಾಗಿದ್ದು ಇದನ್ನು ಅನ್ವಯಿಕೊಳ್ಳಬೇಕಾಗಿದೆ. ಚಿಕ್ಕ ಚಿಕ್ಕ ಸಮಸ್ಯೆಗಳಿಗೆ ಪರಿಹಾರ ತಿಳಿಯದೆ ವಿಚಲಿತ ರಾಗದೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಿಕೆಯ ಬಗ್ಗೆ ಚಿಂತಿಸಿ ವಿಮರ್ಶಿಸಿ ನಿರ್ಣಯ ಕೈಗೊಳ್ಳಬೇಕು ಎಂದು ಶ್ರೀ ಮಹಾವೀರ ರವಾಣಿ ತಿಳಿಸಿದೆ.
ಅಪರಿಗ್ರಹ: ಆಸೆಯೇ ದುಃಖಕ್ಕೆ ಮೂಲ ಆಸೆಯನ್ನು ತ್ಯಜಿಸಬೇಕೆಂದು ಅಪರಿಗ್ರಹದ ಮಹತ್ವ ಅಂದು ಸಾರಿದರು ಇಂದಿನ ಆಧುನಿಕ ಯುಗದಲ್ಲಿ ಅದೇ ದುಃಖಕ್ಕೆ ಕಾರಣವಾಗಿ ಯುವ ಪೀಳಿಗೆಯು ಅತ್ಯಾಸೆಗೆ ಕಟ್ಟುಬಿದ್ದು ದುಃಖವನ್ನು ಅನುಭವಿಸುತ್ತಿದ್ದಾರೆ. ಅಪರಿಗ್ರಹ ತತ್ವವನ್ನು ಪಾಲಿಸಿ ಶಾಂತಿಯನ್ನು ಅನುಭವಿಸಬೇಕಾಗುತ್ತದೆ.
ಹೀಗೆ ಬಹಳ ಹಿಂದೆ ಬೋಧಿಸಿದ ಮಹಾವೀರರ ಬೋಧನೆಗಳು ಇಂದಿಗೂ ಸರ್ವಧರ್ಮ ಸರ್ವಕಾಲ ಸರ್ವಮಯವಾಗಿ ನಿತ್ಯ ನಿರಂತರ ದಾರಿದೀಪವಾಗಿವೆ, ಧರ್ಮವನ್ನು ಧರ್ಮದ ತಿರುಳನ್ನು ತಿಳಿಯುವುದರ ಮೂಲಕ ಪಾಲಿಸುವುದರ ಮೂಲಕ ಧರ್ಮ ಪರಿಪಾಲಕರಾಗೋಣ ಎಂದು ಪಣತೊಟ್ಟು ಮಹಾವೀರರ ವಾಣಿಗಳು ನಿತ್ಯ ಸತ್ಯ ಎನ್ನುವುದು ತನ್ನಿಂತಾನೆ ಗೋಚರಿಸುವಂತೆ ಮಾಡೋಣವೇ…