ಎ ಎಸ್. ಮಕಾನದಾರ ಕವಿತೆ/ಹನಿಗಳು

ಕಾವ್ಯ ಸಂಗಾತಿ

ಹನಿಗಳು

ಎ ಎಸ್. ಮಕಾನದಾರ

ತುಟಿಯ ಬೆಟ್ಟ
ಒಮ್ಮೆ ಮೀಟಿ ಬಿಡು ಗೆಳತಿ
ನನ್ನೆದೆಯ ವೀಣೆ
ನಿನ್ನ ಕಣ್ಣೋಟದ ತಂತಿಯಿಂದ ಮಧು ಹೀರಿ

ಅಮಲೇರಿದಂತಾಗಿದೆ
ದಣಿದ ದೇಹ ಕಣ್ಣ ಸೂರ್ಯ
ಕತ್ತಲೂರಿಗೂ
ಸಲಾಂ ಹೇಳುತಿಹನು

ತುಟಿಯ ಬೆಟ್ಟದ
ತುತ್ತ ತುದಿಯಿಂದ ಜಾರಿ ಬೀಳುತಿಹನು

ಅರ್ಜುನ ನ ಬಾಣಕ್ಕಿಂತಲೂ
ತೀಕ್ಷಣವಾಗಿದೆ
ನಿನ್ನ ಮಾದಕತೆಯ ಕಣ್ಣೋಟ
ಉಳಿ ಸುತ್ತಿಗೆಗೆ ಕರಗಲೊಲ್ಲದು

ಕಲ್ಲಾದ ಹೃದಯ
ಮೆಣದಂತೆ ಕರಗಿದೆ


ಎ ಎಸ್. ಮಕಾನದಾರ

Leave a Reply

Back To Top