ಎಲ್. ಎಸ್. ಶಾಸ್ತ್ರಿ ಕವಿತೆ-ಅರಳು- ಮರಳು

ಕಾವ್ಯ ಸಂಗಾತಿ

ಅರಳು- ಮರಳು

ಎಲ್. ಎಸ್. ಶಾಸ್ತ್ರಿ

ದಿನನಿತ್ಯ ಅರಳುವದು
ನಮ್ಮ ಧರ್ಮ
ಅರಳಿದ್ದು ಬಾಡುವದು
ಪ್ರಕೃತಿ ಧರ್ಮ,

ಹಾಗಂತ ನಾವು
ಅರಳದೇ ಇರಲಾಗುವದಿಲ್ಲ
ನಾವರಳಿದಾಗ
ನಮ್ಮ ಸೌಂದರ್ಯದಿಂದ
ರಸಿಕನ ಮನ
ಕ್ಷಣಕಾಲವಾದರೂ‌ ಅರಳಿದರೆ
ನಾವರಳಿದ್ದು ಸಾರ್ಥಕ!

ಯಾರಿಗಾಗಿಯೋ ಅಲ್ಲ
ನಾವು ಅರಳುವದು;
ಯಾರೋ ಅರಳಿಸುತ್ತಾರೆ
ಯಾರೋ ಬಾಡಿಸುತ್ತಾರೆ
ಯಾರೋ ಮತ್ತೆ
ಹುಟ್ಟಿಸುತ್ತಾರೆ,

ಜಗತ್ತು ನಮ್ಮದಲ್ಲ
ನಾವು ಜಗತ್ತಿನವರು
ಬಂದು ಹೋಗುವ
ಕ್ಷಣಕಾಲದ ಅತಿಥಿಗಳು .
ನಾವು ಸಾವನ್ನು ಮರೆತರೂ
ಸಾವು ನಮ್ಮನ್ನು ಮರೆಯುವದಿಲ್ಲ…

ಪುನರಪಿ ಜನನಂ, ಪುನರಪಿ ಮರಣಂ
ಪುನರಪಿ ಜನನೀ ಜಠರೇ ಶಯನಂ
ಭಜಗೋವಿಂದಂ ಮೂಢಮತೇ….


Leave a Reply

Back To Top