ಕಾವ್ಯ ಸಂಗಾತಿ
ತನಗಗಳು
ವ್ಯಾಸ ಜೋಶಿ

ಮನವು ದೂರಾದಾಗ
ಧ್ವನಿ ಭಾಳ ಎತ್ತರ,
ಹತ್ತಿರದ ಮನಕೆ
ಪಿಸುಮಾತೂ ಮಧುರ.
ಸತ್ಯ ಪಾಪ, ಒಬ್ಬಂಟಿ
ಸುಳ್ಳು ಜಾಣ ಸಂಸಾರಿ,
ಮಕ್ಕಳು ಮರಿ ಹುಟ್ಟಿ
ಸುಳ್ಳಿಗೆ ರಾಯಭಾರಿ.
ಸಂತೋಷವು ಹಾಗೆಯೇ
ಎಲ್ಲರನು ಕರೆದು
ಕೂಗಿತು ಶಿಳ್ಳೆ ಹಾಕಿ
ಮೌನವನು ಮುರಿದು.
ಅಮೀಬಾದ ಸಂತಾನ
ಈ ಚಾಡಿ ಮಾತುಗಳು,
ಕ್ಷಣ ಕ್ಷಣ ಹುಟ್ಟೋವು
ಮಾತಿನ ಮರಿಗಳು.
ಸುಮ್ಮನೆ ಅಂದ ಮಾತು
ಊರೂರು ಸುತ್ತಾಡ್ತಿದೆ
ರೆಕ್ಕೆ ಪುಕ್ಕದೊಂದಿಗೆ
ಯಾವುದೇ ಖರ್ಚಿಲ್ಲದೆ.
ಗುಸು ಗುಸು ಮಾತಿಗೆ
ಮೇಲಷ್ಟು ಒಗ್ಗರಣೆ
ರುಚಿರುಚಿ ಮಾಡ್ಬಿಟ್ಟು
ಉಚಿತ ವಿತರಣೆ.
———————
ವ್ಯಾಸ ಜೋಶಿ

ಚೆನ್ನಾಗಿದೆ