ಅನುವಾದಿತ ತೆಲುಗು ಕವಿತೆ

ಕಾವ್ಯ ಸಂಗಾತಿ

ಹೋಗು…!

ತೆಲುಗು ಮೂಲ : ಗೀತಾಂಜಲಿ (ಡಾ|| ಭಾರತಿ)
ಕನ್ನಡ ಅನುವಾದ : ಧನಪಾಲ‌ ನಾಗರಾಜಪ್ಪ

ಹೋಗು…
ನಿನ್ನನು ನೀನು ಬಚ್ಚಿಟ್ಟುಕೊಂಡು
ನಿನ್ನೊಳಗೆ ನನ್ನನ್ನು ಬಚ್ಚಿಟ್ಟುಕೊಂಡು
ಹೋಗು…!

ನೀನೊಂದು ಮಡಿಕೆಗಳು ಬಿದ್ದು
ಮಾಗಿದ ಹಣ್ಣ ಪರಿಮಳ ಬೀರುತಿರುವೆ
ನಿನ್ನೊಳಗೆ ಬೀಜ ಸಿದ್ಧವಾಗಿದೆ
ಹೋಗು…

ಎಲ್ಲಿಯಾದರೂ…
ಕನಸುಗಳು ಕಾಣುತಿರುವ ನೆಲದ ಮೇಲೆ ಬಿದ್ದು ನಾಟಿಕೊ ಹೋಗು!
ನಿನ್ನನ್ನು ‌ನೀನು ತೆಗೆದುಕೊಂಡು…
ನನ್ನನ್ನು ನಿನ್ನೊಳಗೆ ಬಚ್ಚಿಟ್ಟುಕೊಂಡು ಹೋಗು
ಹೊರಟುಹೋಗು!


ತೆಲುಗು ಮೂಲ : ಗೀತಾಂಜಲಿ (ಡಾ|| ಭಾರತಿ)
ಕನ್ನಡ ಅನುವಾದ : ಧನಪಾಲ‌ ನಾಗರಾಜಪ್ಪ

One thought on “ಅನುವಾದಿತ ತೆಲುಗು ಕವಿತೆ

Leave a Reply

Back To Top