ದೇವಯಾವನ ಅವರ ಮಲಯಾಳಂ ಕವಿತೆ ʼಕವಿತೆಗಳ ಕಥೆ…!ʼಯ ಕನ್ನಡಾನುವಾದ ಐಗೂರು ಮೋಹನ್ ದಾಸ್, ಜಿ. ಅವರಿಂದ

ಕೆಲ ಕವಿತೆಗಳು
ಹೀಗೆಯೇ ಇರುತ್ತದೆ…..!
ಪೂತಿ೯ಯಾಗದೇ ಅಧ೯ದಲ್ಲಿಯೇ
‘ಅಕ್ಷರ’ಗಳು ಮರೆತು
ಹೋಗುವ ಕವಿತೆಗಳು….!!!

ಕೆಲವೊಂದು
ಪೂಣ೯ವಾಗಿ ‘ಅನುವಾದ ‘ವಾಗದ
ಕವಿತೆಗಳು…..!!

ಇನ್ನೂ ಕೆಲವು
‘ಕಣ್ಣೀರು’ನಲ್ಲಿ ಅಳಿಸಿ
ಹೋಗಿರುವ
ನತದೃಷ್ಟ ಕವಿತೆಗಳು….!!

ಜೊತೆಗೆ ‘ನೆನಪು’ಗಳನ್ನು
ಬಿಟ್ಟು ಹೋದವರ
ಕಾಗುಣಿತ ‘ತಪ್ಪು’ಗಳಿಂದ
ಅಪೂರ್ಣವಾಗಿರುವುದು
ಸಹ ‘ ಕವಿತೆ ‘ಗಳಾಗಿ
ಉಳಿದಿವೆ….!!!.


Leave a Reply

Back To Top