ʼಮದನಾರಿʼ -ಡಾ.‌ಲೀಲಾ ಗುರುರಾಜ್ ಅವರ ಕವಿತೆ

ಕೆಂದುಟಿಯು ಕರೆದಿಹುದು
ಬಂಧಿಸುತ ಮೋಹದಲಿ
ಮಂದಗತಿ ಹೆಜ್ಜೆಯದು ಹಂಸದಂತೆ
ಅಂದುಗೆಯು ಕಾಲಿನಲಿ
ಚಂದವನು ತೋರುತಲಿ
ಮುಂದಿರುವ ಮದನಾರಿ ಮೆರೆಯುತಿಹಳು

ಬರಸೆಳೆದು ಬಾಲೆಯನು
ಸರಸಕ್ಕೆ ಕರೆಯುತಲಿ
ಶರದಂಥ ನೋಟವನು ಬೀರುತಿಹನು
ಮರೆಸುತ್ತ ಜಗವನ್ನೆ
ಸರಸರನೆ ಬಳಿಸಾರಿ
ತುರುಬಲ್ಲಿ ಮಲ್ಲಿಗೆಯ ಮುಡಿಸುತಿಹನು


Leave a Reply

Back To Top