ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಶಾಕ್ಯ ದೊರೆಯ ಸುತ
ಸಾಮ್ರಾಜ್ಯ ತೆಜೆಸಿದಾತ
ನಡು ರಾತ್ರಿಯಲಿ ಎದ್ದು
ನಡೆದಾತ ಆದನವನು ಬುದ್ಧ….

ಶುದ್ಧ ಯಶೋದಯ ಆಗಲಿ
ಮುಗ್ದ ಮಗುವ ಮರೆತು
ನಡೆದ ಸಾಮ್ರಾಜ್ಯವ ಬಿಟ್ಟು
ವಿಮಲ ಭಕ್ತಿಯ ಶೋಧಿಸಿತ….

ಸಿದ್ಧಾರ್ಥ ನೀನಾದೆ ಜಗಕೆ ಬುದ್ಧ
ನಿನ್ನ ಸಿದ್ಧಾಂತ ಸೈದಾಂತವು
ನಮ್ಮ ಮನದ ಗಗನವೇರಿ
ಭಾವ ಉಕ್ಕಿ ಹರಿಯುತ್ತಿದೆ….

ಅಹಿಂಸೆ ಸತ್ಯದ ‌ ಭಕ್ತಿ ಪಾಲನೆ
ಪಾಲಿಸಿ ಲಾಲಿಸಿ ಸಿದ್ದರಾದೆವು
ನಿನ್ನ ಸೂಕ್ತ ಚೈತನ್ಯ ನಿತ್ಯ ಹರಿಯುತಿರೆ
ನಮ್ಮಮನ-ಮನೆಯ ಪಾವನ …..

ನೀ ಹುಟ್ಟಿದ ದೇಶದಲಿ ನಾವು ಜನನಿಪರು
ಅಭಿಮಾನ ಬಿಗುಮಾನದಲಿ ಮೆರೆಯತಿರಲು
ತಾರತಮ್ಯದ ಪಯಣದ ಜಗದಲಿ ಅಂಧಕರು
ನಿನ್ನ ಹೆಸರಿನಲ್ಲಿ ಸಾವಿರ ತಪ್ಪು ಕಲ್ಪನೆ ಮೆರೆಸಿ

ಭಕ್ತಿ ಚಿತ್ತದೋಳು ಹುಳಿಯ‌ ಹಿಂಡುತ
ಹೊರಟಿಹರು ಜನಾಂಗವು ತಿಳಿಯದಾಗಿದೆ
ಎತ್ತ ನಡೆದಿದೆ ನಮ್ಮ ಪಯಣ ಎತ್ತ
ಹೊರಳಿದೆ ನಮ್ಮ ಜನ???

ನಾವು ನಿನ್ನ ಭೂಮಿಯ ಅವರೇ ????
ಪ್ರಶ್ನೆ ಹುಟ್ಟಿದೆ ಬುದ್ಧ – ಬದ್ಧನಾದ ಅಹಿಂಸೆ
ಅಳಿಸಿ ಒರೆಸಿ ಹೋಗುತ್ತಿದೆ ….ಬುದ್ಧ ಮತ್ತೆ ಬರುವೆಯಾ??


About The Author

Leave a Reply

You cannot copy content of this page

Scroll to Top