ಸಂಕ್ರಾಂತಿ ಗಜಲ್

ಕಾವ್ಯ ಸಂಗಾತಿ

ಸಂಕ್ರಾಂತಿ ಗಜಲ್

celebrating Traditional Thai Pongal festival to sun god with pot, lamp,wood fire stove, fruits and sugarcane. Making Sakkarai / sugar pongal and ven pongal in sand stove in traditional method.

ಬರುವ ಕಷ್ಟಗಳು ಸ್ವೀಕರಿಸು ಬದುಕು ಸಂಕ್ರಾಂತಿ |
ಕನಸುಗಳಿಗೆ ಬಣ್ಣ ತುಂಬಿಸು ಬದುಕು ಸಂಕ್ರಾಂತಿ ||

ನಿನ್ನಿಷ್ಟಕ್ಕೆ ಆಗಾಗ ಖುಷಿಪಡು ಕಾಯಕ ಪ್ರೀತಿಸು |
ಕಳೆದ ದಿನಗಳಲಿ ಸಂಚರಿಸು ಬದುಕು ಸಂಕ್ರಾಂತಿ ||

ಸಿಹಿ ಕಹಿ ಬಾಳಿನಲ್ಲಿ ಎಳ್ಳು ಹಂಚಿದ ರೊಟ್ಟಿ ಹಂಗ |
ಹೊಳಿಗೆ ಹೂರಣ ಸುಖಿಸು ಬದುಕು ಸಂಕ್ರಾಂತಿ ||

ನಲ್ಲೆಯ ಮಾತು ಜೀವ ಭಾವ ಬೆರತ ಬೇವು ಬೆಲ್ಲ |
ಕಲ್ಲರಳಿ ಹೂವಾಗಿ ಪ್ರೇಮಿಸು ಬದುಕು ಸಂಕ್ರಾಂತಿ ||

‘ಮುತ್ತು’ ಜಗದ ನೆಲಕ್ಕೂ ನಿನ್ನಾಳುವ ಹಕ್ಕಿದೆ |
ಈ ಮಣ್ಣ ಋಣ ತೀರಿಸು ಬದುಕು ಸಂಕ್ರಾಂತಿ ||


ಮುತ್ತು ಬಳ್ಳಾ ಕಮತಪುರ

Leave a Reply

Back To Top