ಕಾವ್ಯ ಸಂಗಾತಿ
ಹೀಗೆ ರಸ್ತೆಯಲ್ಲಿ
ಭಾವಗಳು
ಮನವ ತುಂಬುವ
ಪರಿಮಳದ
ಮಧುರ ಮಲ್ಲಿಗೆ
ಅಲ್ಲ ಖಂಡಿತ
ಅವು ಮಾರಾಟಕ್ಕೆ
ಹಾಗಂತ
ಹೀಗೆ ರಸ್ತೆಯಲ್ಲಿ
ಬಿದ್ದಿಲ್ಲ
ಅಲ್ಲ ಕವನ ಸಂಕಲನಗಳು
ತಿಪ್ಪೆಗುಂಡಿ ಕಸದ ತೊಟ್ಟೆ
ಬಿಡು ನಿನ್ನ ದ್ವೇಷ ಅಸೂಹೆ
ಕೋಪ ತಾಪ ಸಣ್ಣತನ
ನಿನ್ನ ಮನದ ಮನೆಯ
ಕಸವ ಕಿತ್ತೆಸೆ
ಸ್ವಚ್ಛಗೊಳಿಸು
ಅಂದದ ಚೆಂದದ
ಸುಂದರ ಹೃದಯ
ಆಗ ನಿನ್ನ ಕಾವ್ಯ ಕವನ
ಹವಳು ಪೋಣಿಸಿದ ಮುತ್ತಿನ ಹಾರವು.
–
ಡಾ ಶಶಿಕಾಂತ ಪಟ್ಟಣ ಪುಣೆ

Beautiful Poem
Dr Mritynjay Shettar
Super
ನಿಜ… ಭಾವಗಳು ಮಧುರ ಮಲ್ಲಿಗೆ ಪರಿಮಳ
ಸುಂದರ ಕವನ
ಎಂತಹ ಸುಂದರ ಕವನ ನೈಜ ಭಾವಗಳ ಅನಾವರಣ
ವಿದ್ಯಾ ಮಗದುಂ ಗೋಕಾಕ
Excellent poem amazing style
Prabhuling Kalyanshetti Pune
ನವ್ಯ ರಸ ಭಾವ ಸ್ನೇಹ ಸಂಬಂಧ ವೃದ್ಧಿಗಾಗಿ ಹಪ ಹಪಿಸುವ ಕ್ರಿಯಾಶೀಲ ಭಾವ ಕವಿ
ಬಸವರಾಜ್ ವಾಲಿ ಮುಳಗುಂದ
ಭಾವಗಳ ಪುಂಜ ನಿಮ್ಮ ಕವನ ಕಂಪು