ಕಾವ್ಯ ಸಂಗಾತಿ
ಸಿಂಧು ಭಾರ್ಗವ
ʼಮನದರಸಿಗೆ ಕೋರಿಕೆʼ

ಬಂದರೆ ಸಾಕೇ, ಎದುರು ನಿಂತರೇ ಸಾಕೆ
ಸವಿ ಮಾತನಾಡಬಾರದೇ ಸಖಿ..
ಕೋಪವು ಏತಕೆ? ಹುಸಿ ತಾಪವು ಏತಕೆ
ಬಿಸಿ ಅಪ್ಪುಗೆಯ ನೀಡಬಾರದೇ ಸಖಿ..
ತವರು ಮನೆಯಲ್ಲಿನ ತೋಷವು
ನಿನಗಿಲ್ಲಿ ಸಿಗದೇ ಹೇಳು?
ಚಿಂತೆಯ ಮಾಡದೇ ನಂಬಿಕೆಯಿಂದ
ಸಾಗಿಸು ಬದುಕಿನ ತೇರು..
ಹರಟೆ ಹೊಡೆಯುವೆ ಸಮಯವ ಕಳೆಯುವೆ
ತಾಯಿ ತಂಗಿಯರ ಜೊತೆಯಲ್ಲಿ
ನಾದಿನಿ, ಅತ್ತೆಯರನು ಹಾಗೆಯೇ
ಭಾವಿಸಿ ಮಾತಿಗಿಳಿಯಬಹುದಿಲ್ಲಿ..
ಮನೆಯ ಕೆಲಸವನೆಲ್ಲವೂ
ಮಾಡುತ ದಣಿದು ಬಾಡಿ ಕೂರದಿರು
ಗಾಯನ ಕೇಳುತ, ಮನದಲೇ ಕುಣಿಯುತ
ಹರುಷದಿ ಸಮಯವ ನೀ ಕಳೆಯು
ಸಿಂಧು ಭಾರ್ಗವ
