ಕಾವ್ಯ ಸಂಗಾತಿ
ಕನ್ನಡಿ ಕೂಡ ಗುರುತು ಹಿಡಿಯದು

ದೊಡ್ಡ ಸಿಟಿಯಲ್ಲಿ ಕೆಲಸ ಮಾಡುವ ಹುಡುಗ
ತಪ್ಪಾಯಿತು ಎಣಿಕೆ
ಬೆದಕುವರು ಕಣ್ಣ ಕಪ್ಪು ಕಾಡಿಗೆ
ಬಿಟ್ಟಿದ್ದರಂತೂ ಗಡ್ಡ
ಹುಡುಕುವರು ತಲೆಮ್ಯಾಲಿನ ಟೊಪ್ಪಿ
ಗೊಣಗುವರು
ಮಾತು ಕೆದಕುವರು
ಗಡಿರೇಖೆಗಳು ಗೋಡೆಗಳಾಗುವುವು
ಯುದ್ಧಗಳು ಠೇಂಕರಿಸುವುವು
ನೀನು
ಹಿಂದುವೋ…
ಮುಸಲ್ಮಾನನೋ..
ಕ್ರಿಶ್ಚಿಯನ್ನೋ…
ಯಾರೂ ಕೇಳುವುದಿಲ್ಲ
ಆದರೆ…
ಅವರು ನಿರ್ಧರಿಸುತ್ತಾರೆ
ಬೆಲೆ
ನಿರ್ಧರಿಸುತ್ತಾರೆ!
ಆಗ ಮಾಲ್ ನ ರೆಸ್ಟ್ ರೂಮಿನ ಕನ್ನಡಿ ಕೂಡ ಗುರುತು ಹಿಡಿಯದು
ಹುಡುಗನ ಕಣ್ಣು ತುಂಬಿದ ಸಮುದ್ರ.
ಬಿ.ಶ್ರೀನಿವಾಸ

ತುಂಬ ಚನ್ನಾಗಿದೆ
ತುಂಬಾ ಚೆನ್ನಾಗಿದೆ ಸರ್