ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ʼಎಲ್ಲವೂ ನೀನೆನಗಿʼ

ನೀನು ನನ್ನವಳು
ಇದ್ದು ಬಿಡು ನನ್ನೊಡನೆ
ಬೇರೇನೂ ಬೇಡೆನು
ಎಲ್ಲವೂ ನೀನೆನಗೆ
ನನ್ನ ಕನಸು ಮನಸ್ಸು
ಭಾವ ಬಯಕೆ
ಒಲವು ಪ್ರೇಮದ ಪುತ್ಥಳಿ
ನೈಜ ನಗೆಯ ತೇಜ
ಸ್ನೇಹ ಪ್ರೀತಿಯ ಬೀಜ
ದೂರ ದಾರಿಯ ಮನುಜ
ಮಧುರ ಪ್ರೇಮದ ಕಣಜ
ನಿನ್ನ ನೆನಪಲ್ಲಿ ಹುಟ್ಟುವವು
ನನ್ನ ಹನಿಗವನ ಸಹಜ
ನನ್ನ ನಿನ್ನ ಕೂಡುವಿಕೆ
ಹೃದಯ ತುಂಬಿದ ಸಂಗಮ


2 thoughts on “ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ʼಎಲ್ಲವೂ ನೀನೆನಗಿʼ

  1. ನಿಮ್ಮ ಒಲವಿನ ,ಪ್ರೇಮ ಭಾವ ಚೆನ್ನಾಗಿ ಮೂಡಿ ಬಂದಿದೆ.

Leave a Reply

Back To Top