ಗಜಲ್…

ಗಜಲ್…

ಜಬೀವುಲ್ಲಾ ಎಮ್. ಅಸದ್

ಬದುಕಿನ ಮಳಿಗೆಯಲಿ ಭಾವಗಳ ಮಾರಾಟ
ದೈನಂದಿನ ಜೀವನದಲಿ ನೋವುಗಳ ಚೀರಾಟ

ಒಬ್ಬರು ಮತ್ತೊಬ್ಬರಂತಿಲ್ಲ ನೋಡು ಲೋಕದಲಿ
ಮುಖವಾಡ ಬಳಸುತಲಿ ಮನಸುಗಳ ಹಾರಾಟ

ಕಾಣ ಕೇಳದ ಕನಸುಗಳ ಬೆನ್ನಹತ್ತಿ ಓಡುತಿಹರು
ನಿಜವಾಗದ ಬಯಕೆಗಳಲಿ ಮತಿಗಳ ಈಜಾಟ

ಜನುಮವೇ ಆಶಾಶ್ವತ ಎಂದು ಮರೆತಿರುವೆವಲ್ಲ
ಜಾತಿ ಧರ್ಮಗಳ ಹೆಸರಿನಲ್ಲಿ ಮನುಜರ ಕಾದಾಟ

ಸದಾ ಚಿಗುರುವ ಬಾಧೆಗೆ ಕೊನೆಯಲ್ಲಿ ಅಸದ್
ಸಾವು ಸಂಧಿಸುವವರೆಗೂ ನಿಲ್ಲದ ಗೋಳಾಟ

***************************

Leave a Reply