ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಾದಾನುಸಂಧಾನ

(ಅಂಕಣ ಬರಹಗಳ ಸಂಗ್ರಹ)

ಪುಸ್ತಕದ ಹೆಸರು: ನಾದಾನುಸಂಧಾನ (ಅಂಕಣ ಬರಹಗಳ ಸಂಗ್ರಹ)
ಲೇಖಕರು: ಆಶಾಜಗದೀಶ್
ಪುಟಗಳು: 200
ಬೆಲೆ: 220/-
ಪ್ರಕಾಶನ: ಸಾಹಿತ್ಯ ಲೋಕ ಪ್ರಕಾಶನ, ಬೆಂಗಳೂರು
ಪ್ರಕಾಶಕರ ಹೆಸರು ಮತ್ತು ದೂರವಾಣಿ: ರಘುವೀರ್, 9945939436

ಕವಯಿತ್ರಿ, ಅಂಕಣಕಾರ್ತಿ ದೀಪಾ ಹಿರೇಗುತ್ತಿ ಯವರು ಹೀಗೆ ಬರೆಯುತ್ತಾರೆ: ಆಶಾ ನಮ್ಮ ನಡುವಿನ ಪ್ರತಿಭಾವಂತ ಲೇಖಕಿ. ಕಥೆ, ಕವನ, ಅಂಕಣ ಈ ಮೂರೂ ಪ್ರಕಾರಗಳಲ್ಲಿ ಯಶಸ್ವಿಯಾಗಿ ಬರೆಯುತ್ತಿದ್ದಾರೆ. ತಮ್ಮ ಶಾಲೆ ಮತ್ತು ಕೌಟುಂಬಿಕ ಜವಾಬ್ದಾರಿಗಳ ನಡುವೆ ನಿರಂತರವಾಗಿ ಬರೆಯುತ್ತಿರುವ ಆಶಾ ಅಚ್ಚರಿ ಹುಟ್ಟಿಸುತ್ತಾರೆ. “ನಾದಾನುಸಂಧಾನ” ಎಂಬ ಈ ಬರಹಗಳ ಗುಚ್ಛದ ವಿಷಯ ವೈವೀಧ್ಯತೆ ಅವರ ಓದಿನ ವಿಸ್ತಾರಕ್ಕೆ ಸಾಕ್ಷಿ. ಹಿರಿಯ, ಸಮಕಾಲೀನ ಬರಹಗಾರರ ಲೇಖನ, ಕಥೆ, ಕಾದಂಬರಿ, ಕವಿತೆಗಳನ್ನು ಓದಿ ವಿಶ್ಲೇಷಿಸಿ ಅವುಗಳ ಬಗ್ಗೆ ಬಹು ಆಪ್ತವಾಗಿ ಬರೆಯುತ್ತಾರೆ. ಜೊತೆಗೆ ತಮ್ಮ ಅನುಭವಗಳನ್ನು ದಾಖಲಿಸುತ್ತಾ ಒಂದು ವಿಶಿಷ್ಟ ಎನ್ನಬಹುದಾದ ಶೈಲಿಯನ್ನು ರೂಢಿಸಿಕೊಂಡಿದ್ದಾರೆ. ಆಶಾ ಓರ್ವ ಸ್ನೇಹಮಯಿ ಸಹೃದಯಿ ಕವಯಿತ್ರಿ ಎಂಬುದನ್ನು ಸಾಬೀತುಪಡಿಸುವ ಗದ್ಯ ಅವರದ್ದು….

*************************************

About The Author

Leave a Reply

You cannot copy content of this page

Scroll to Top