ಕವಿತೆ
ಹೀಗೆ
ಗೋನವಾರ ಕಿಶನ್ ರಾವ್
ಹೆಣ್ಣೆಂದರೆ,ಪೂಜೆ-ಅಸಡ್ಡೆ
ಉಭಯನೀತಿ,
ಕೀಳು,
ಅವಮಾನ- ಅತ್ಯಾಚಾರ,
ಭರತವರ್ಷೇ,
ಭರತಖಂಡೇ
ಜಂಬೂ ದ್ವೀಪದಿ,
ಗಂಡುಕಾಮಿಗಳ
,ಹೀನಾಯ, ನಡೆ,
ಪುರುಷಗಣಗಳಿಗೆಲ್ಲ
ಚುಕ್ಕೆಬೊಟ್ಟು
ನೆನಪು.
ತವರು ಮನೆಗೆ ಬಂದ ಹೆಣ್ಣು
ವರುಷದಲಿ , ಹುಟ್ಟಿದ ಕೋಣೆ
ತೋರಿಸಲು ತವರಿಗೆಮತ್ತೆ
ಹುಟ್ಟಿ ಬೆಳೆದ ಮನೆಯನೇ
ನೋಡುವ ಮತ್ತೆ ಮತ್ತೆ ನೋಡುವ
ಕಹಿ ಚಪಲ,
ಮನೆ-ಮನವ ಮುರಿದಿರುವ
ಕ್ರೂರ ಜಗದ ಈ ಕೆಟ್ಟ
ಗಂಡುಗಳ ಸಂತೆ
ನಿರ್ಭಯದ ಅಂಗಡಿಯಲಿ
ಸಾವು ಕೊಳ್ಳುವ ಅ ದಂಡು
ಪಾಠ ಕಲಿಯದೆ ಮತ್ತೆ
ಹತರಾಸ್!!
ಕಲಿತದ್ದು ರಾವಣನಿಂದ ?
ಕೀಚಕನಿಂದ ?
ಅವರು ಮಣ್ಣಾದರೂ
ಇವರು, ಗಲ್ಲಾ ದರೂ
……… ಹೀಗಾದರೆ ?
ಹೇಗೆ ?
ತಡವಾಗಿ ಬಂದ ಉತ್ತರವಿರದ
ಪ್ರಶ್ನೆ,! ಶೇಷ ಪ್ರಶ್ನೆ ??
*****************************************************