ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅರಿವು

Brown and Green Grass Field during Sunset

ಬಿ.ಎಸ್.ಶ್ರೀನಿವಾಸ್

ಹೊತ್ತಾಯಿತು ಗೊತ್ತಾಯಿತು
ಪಯಣ ಮುಗಿಯಲಿದೆಯೆಂದು
ರವಿಯು ಮುಳುಗಿ
ತಾರೆ ಮಿನುಗಿ
ಶಶಿ ಆಗಸ ಬೆಳಗುವನೆಂದು

ಹೊತ್ತಾಯಿತು ಗೊತ್ತಾಯಿತು
ಗಳಿಸಿದ್ದು ಉಳಿಸಿದ್ದು
ಚಿಟಿಕೆಯಷ್ಟೇ ಎಂದು
ಅರಿಯುವುದು ಅಳಿಸುವುದು
ಬೆಟ್ಟದಷ್ಟಿದೆಯೆಂದು

ಹೊತ್ತಾಯಿತು ಗೊತ್ತಾಯಿತು
ಬಾಳಲೆಕ್ಕಾಚಾರದಲಿ
ಒಂದನೊಂದು ಕೂಡಿದರೆ
ಎರಡೇ ಆಗಬೇಕಿಲ್ಲವೆಂದು
ಶೂನ್ಯವೂ ಮೂಡಬಹುದೆಂದು

Body of Water during Golden Hour

ಹೊತ್ತಾಯಿತು ಗೊತ್ತಾಯಿತು
ಭರದಿ ಹರಿದ ನದಿಯು ಧುಮುಕಿ
ಕಡಲ ಸೇರಲಿದೆಯೆಂದು
ತನ್ನತನವ ಕಳೆದುಕೊಂಡು
ಅಲೆಅಲೆಯಲಿ ಸುಳಿಯುವುದೆಂದು

ಹೊತ್ತಾಯಿತು ಗೊತ್ತಾಯಿತು
ನನ್ನದೆಂಬುದೆಲ್ಲ ನನ್ನದೇ
ಆಗಿರಬೇಕಿಲ್ಲವೆಂದು
ಋಣಸಂದಾಯವಾಗದೆ
ಬಿಡುಗಡೆಯು
ಸಾಧ್ಯವೇ ಇಲ್ಲವೆಂದು


ಕಿರುಪರಿಚಯ:

ಹವ್ಯಾಸಿ ಬರಹಗಾರರು, ಎರಡು ಕವನಸಂಕಲನಗಳುಪ್ರಕಟವಾಗಿವೆ. ವೃತ್ತಿ-ಭಾರತೀಯ ಸ್ಟೇಟ್ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕರು

About The Author

11 thoughts on “ಕಾವ್ಯಯಾನ”

  1. ಶ್ರೀನಿವಾಸ್ ಬಿ.ಎಸ್

    ನನ್ನ ಕವನವನ್ನು ಪ್ರಕಟಿಸಿದ್ದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು ಮಧುಸೂದನ್ ಅವರೇ

    1. ಶ್ರೀನಿವಾಸ್ ಬಿ.ಎಸ್

      ಹೃತ್ಪೂರ್ವಕ ಧನ್ಯವಾದಗಳು ಶ್ರವಣಕುಮಾರಿಯವರೇ

  2. ಅರ್ಥಗರ್ಭಿತವಾದ ಕವಿತೆ. ಸೃಷ್ಟಿ ಕರ್ತನ ಮರ್ಮವರಿಯಲು ಅಸಾಧ್ಯ. ತಿಳಿಯುವ ಬಯಕೆ ಬಗೆಹರಿಸಲು ಯುಗ ಯುಗ ಗಳು ಸಾಲದು. ಗೊತ್ತಾಯಿತು ಮರ್ಮವದು ಎಂದು ವೇಳೆ ಜಾರಿತು ತಿಳಿಯುವ ಸಾಹಸದಲ್ಲಿ.

  3. ತುಂಬಾ ಚೆನ್ನಾಗಿದೆ.. ಸರಳವಾಗಿ ಜೀವನದ ಬಗ್ಗೆ ಅರಿವು ಮೂಡಿಸಿ ದ್ದೀರಾ..

    1. ಶ್ರೀನಿವಾಸ್ ಬಿ.ಎಸ್

      ನಿಮ್ಮ ಸಹೃದಯ ಸ್ಪಂದನೆಗೆ ಹೃತ್ಪೂರ್ವಕ ಧನ್ಯವಾದಗಳು

  4. ಬಹಳ ಚೆನ್ನಾಗಿತ್ತು. ಬದುಕು ಮತ್ತು ಅದರ ಗೋಜಲು / ಸವಾಲುಗಳನ್ನ ಎದುರಿಸೋ ಹಾಗು ಸಂಬಾಲಿಸಿ – ಸಾಗಿಸೋ ಜಾಣ್ಮೆ ಮತ್ತು ಪರಿ ಜೀವನದ ಸಡಗರ-ಸಂಭ್ರಮಗಳನ್ನು ನಡೆಸಿ ನಿಭಾಯಿಸಿರುವ ಅನುಭವಸ್ಥರಾದ ನಮ್ಮ ಹಿರಿಯರೇ ಇನ್ನೂ ಕಲಿಯಬೇಕು, ಇನ್ನಷ್ಟು ಚೆನ್ನಾಗಿ ನಿಭಾಯಿಸ ಬಹುದು ಅನ್ನುವ ಮನಃಸಿಥ್ಥಿತಿಯಲ್ಲಿರುವಾಗ, ಎಳೆಯ ವಯಸ್ಸಿನವರು ಎಷ್ಟು ಕಲಿಯಬೇಕು, ಎಷ್ಟು ಹುಮ್ಮಸ್ಸಿರಬೇಕು? ಈ ಥರಹದ ಒಂದು ಒಳ ನೋಟವನ್ನು ಕಲ್ಪಿಸಿದ ತಮ್ಮ ಲೇಖನಕ್ಕೂ ಇದನ್ನು ನಮ್ಮಲ್ಲಿ ಹಂಚಿಕೊಂಡು ತಮಗೂ ನಮ್ಮ ನಮನ ಮತ್ತು ಹ್ರೃದಯಪೂರ್ಣ ಧನ್ಯವಾದಗಳು.
    — ರಾಘವೇಂದ್ರ

  5. ಶ್ರೀನಿವಾಸ್ ಬಿ.ಎಸ್

    ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು

  6. Narasimha Murthy

    ಜೀವನದ ಅರಿವಿನ ಅರ್ಥಗರ್ಭಿತ ಕವಿತೆಗೆ ಕೋಟಿ ಕೋಟಿ ನಮಸ್ಕಾರಗಳು.

    ನರಸಿಂಹ ಮೂರ್ತಿ

    1. ಶ್ರೀನಿವಾಸ್ ಬಿ.ಎಸ್

      ನಿಮ್ಮ ಸಹೃದಯ ಸ್ಪಂದನೆಗೆ ಹೃತ್ಪೂರ್ವಕ ಧನ್ಯವಾದಗಳು

Leave a Reply

You cannot copy content of this page

Scroll to Top