Month: October 2019

ಅನುಭವ

ಭಯದ ನೆರಳಲ್ಲಿ ಹೆಬ್ರಿ ಸದಾನಂದ ಶೆಟ್ಟಿ ಭಯದ ನೆರಳಲ್ಲಿ ಕೈಯಲ್ಲಿ ಸಣ್ಣ ಬ್ಯಾಗ್ ಹಿಡಿದ ನಾನು ನನ್ನ ಭಾವಿ ಪತ್ನಿ ನೋಡೊ ಬರದಲ್ಲಿ ಹೆಜ್ಜೆ ಹಾಕಿದೆ 40 ನಿಮಿಷ ಕಳೆದ ನ೦ತರ ಮಾವನ ಮನೆ ನಾಯಿಗಳ ಬೊಗಳುವಿಕೆಗೆ ಚಿಮಿಣಿ ಹಿಡಿದು ಹೊರ ಬ೦ದಳು ನನ್ನ ಭಾವಿ ಪತ್ನಿ, ಕಗ್ಗತ್ತಲು ” ಯಾರದು ಜಾಗ್ರತೆ ನಾಯಿ ಕಚ್ಚುತ್ತೆ ”ಅ೦ದಾಗ ” ನಾನು ಕಣೆ” ಅ೦ದಾಗ ಆಕೆಗೆ ಸಣ್ಣವರಿದ್ದಾಗಲಿ೦ದ ಗೊತ್ತಿದ್ದರಿ೦ದ ಓಡಿ ಹೋಗಿ ನಾಯನ್ನು ಕಟ್ಟಿ, ತ೦ಗಿಯನ್ನುದ್ದೇಶಿಸಿ ” ರತ್ನ […]

ಲಹರಿ

ಜೀವನ ಅನ್ನೋ ಸೈಕಲ್ ಶಂಭುಗೌಡ ಆರ್.ಜಿ. ಹುಟ್ಟೆಂಬುದ ಹುಟ್ಟಿದಾಗಿಂದ ಜೀವನ ಅನ್ನೋ ಸೈಕಲ್ ಹತ್ತಿ ಪೆಟಲ್ ತುಳ್ದಿದ್ದೋ ತುಳಿದಿದ್ದು…ಮಾರ್ಗ ಮಧ್ಯದಲ್ಲಿ ಹೆಸರಿಲ್ಲದ ಕಾಣದ ಕೈ ಒಂದು ಬೀಸಾಕಿದ ಬಿಕನಾಸಿ ಮುಳ್ಳು ಅಂಟಿಲ್ಲದಿದ್ದರೂ ಅಂಟ್ಕೊಂಡು ಪಂಚರ್ ಆಗಿ ಪಂಚರಂಗಿ ಟೈಟಲ್ ಇರೋ ಪಂಚರ್ ಅಂಗಡಿಯವರೆಗೂ ನಟರಾಜ ಸರ್ವಿಸ್ ನಲ್ಲಿ ನಡೆದು ರಿಪೇರಿ ಮಾಡಿಸಿ ಮತ್ತದೇ ಸೈಕಲ್ ಹತ್ತಿ ಕಾಣದ ಕನಸುಗಳ ಮೂಟೆಗಳನ್ನ ಹೊತ್ತು ಮತ್ತದೇ ಹೆಸರಿಲ್ಲದ ನನಸಿನ ನಗರಿಯತ್ತ ಪಯಣ ಶುರು.ಮಾರ್ಗ ಮಧ್ಯದಲ್ಲಿ ಬೇಟಿಯಾಗೋ ಅಪರಿಚಿತ ಮುಖಗಳನ್ನ ಪರಿಚಯಕ್ಕೂ […]

ಕಾವ್ಯಯಾನ

ಮುಖವಾಡ ಸುಜಾತ ರವೀಶ್ ಮುಖವಾಡ *** ಕಿತ್ತೊಗೆಯಬೇಕೆನಿಸುತಿದೆ ಅಂಟಿಕೊಂಡಿರುವ ಈ ಮುಖವಾಡಗಳ ಬಿಸಿ ಧಗೆಯ ಕುಲುಮೆಯಲ್ಲಿ ಉಬ್ಬೆಗೆ ಹಾಕಿದಂತಿದೆ ನೈಜತೆಯ ಶುದ್ದ ಹವೆಯಲ್ಲಿ ಮನ ಉಸಿರಾಡಬಯಸುತಿದೆ. ಮನದಲ್ಲಿ ಜ್ವಾಲಾಮುಖಿ ಸಿಡಿಯುವಂತಿದ್ದರೂ ಲಾವಾರಸ ಹೊರಚಿಮ್ಮದಂತೆ ಜಾಗೃತಿ ವಹಿಸಬೇಕಾಗಿದೆ ಶಾಂತತೆಯ ಮುಖವಾಡ ತೊಟ್ಟು ಬದುಕು ದೂಡಬೇಕಾಗಿದೆ. ಗೋಸುಂಬೆಯ ಹಾಗೆ ಬಣ್ಣ ಬದಲಿಸುತಿರುವವರ ನೋಡಿದಾಗೆಲ್ಲ ಮುಖಕ್ಕೆ ರಾಚುವಂತೆ ಬೈದುಬಿಡಬೇಕೆಂದೆನಿಸಿದರೂ ಸಭ್ಯತೆಯ ಮುಖವಾಡ ಧರಿಸಬೇಕಾಗಿದೆˌನಟಿಸಬೇಕಾಗಿದೆ. ಪರಂಪರಾನುಗತ ಉರುಳುಗಳಿಂದ ಬಿಡಿಸಿಕೊಳ್ಳಬೇಕೆನಿಸಿದರೂ ಹಕ್ಕಿಯಂತೆ ಸ್ವೇಚ್ಛೆಯಾಗಿ ನೀಲನಭದಿ ವಿಹರಿಸಬೇಕೆಂದರೂ ಮತ್ತೆ ಸಂಪ್ರದಾಯದ ಮುಖವಾಡದ ಹಿಂದೆ ನಿಲ್ಲಬೇಕಾಗಿದೆ. ಆಸೆ […]

ಪುಸ್ತಕ ವಿಮರ್ಶೆ

ಕೃತಿ: ಭಾವಗಳು ಬಸುರಾದಾಗ. ಕವಿ:ಅರುಣ್ ಕೊಪ್ಪ ವಿಮರ್ಶೆ: ಜಿ.ವಿ.ಕೊಪ್ಪಲತೋಟ ಭಾವಗಳು ಬಸುರಾದಾಗ ಕವನ ಸಂಕಲನಕ್ಕೆ ಹಿರಿಯ ಪತ್ರಕರ್ತ ಶ್ರಿÃ ಜಯರಾಮ ಹೆಗಡೆ ಶಿರಸಿ ಮುನ್ನುಡಿ ಬರೆದಿದ್ದಾರೆ. ಬೆನ್ನುಡಿಯಲ್ಲಿ ಸಾಹಿತಿ ಡಾ|| ಬೇರ್ಯರಾಮಕುಮಾರ ಅವರು ಅರುಣಕೊಪ್ಪ ಅವರನ್ನು ಪರಿಚಯಿಸಿದ್ದಾರೆ. ಸಾಲದೂ ಎಂಬಂತೆ ಡಾ|| ಅಜಿತ್ ಹೆಗಡೆ ಹರೀಶಿಯವರೂ ಕೂಡಾ ಇವರನ್ನು ಓದುಗರಿಗೆ ಪರಿಚಯಿಸಿದ್ದಾರೆ. ಇವರ ಮೊದಲ ಕವನ ಸಂಗ್ರಹ ಹನಿಗಳ ಹಂದರ ಎರಡನೆ ಸಾಹಿತ್ಯ ಕೃತಿಯೇ ಭಾವಗಳು ‘ಬಸುರಾದಾಗ’ (ಕವನ ಸಂಕಲನ) ಈ ಸಂಕಲನದಲ್ಲಿ ಸಣ್ಣದು ದೊಡ್ಡದು ಸೇರಿ […]

ಚಿಂತನೆ

ಇಷ್ಟಕ್ಕೆ ಹೀಗೆ ವರಿ ಮಾಡೋದಾ? ಪಿ.ಎಂ.ಇಕ್ಭಾಲ್ ಕೈರಂಗಳ ಮಾನಸಿಕವಾದ ಸಮಸ್ಯೆಗಳೇ ಹಾಗೆ‌. ಬಲು ಸಂಕೀರ್ಣ.  ಹೀಗೇ ಇರುತ್ತದೆ ಎಂಬ ನಿಯಮವಿರಲ್ಲ.  ಒಂದೊಂದು ಸಮಸ್ಯೆಯೂ ವೈವಿಧ್ಯ. ಅವುಗಳ ತೀವ್ರತೆ ಎಷ್ಟು ಎಂದು ಅವುಗಳನ್ನು ಅನುಭವಿಸುವ ನತದೃಷ್ಟರಿಗೇನೇ ಗೊತ್ತು. ಆದರೆ ಒಂದು ನೆನಪಿರಲಿ. ‘ನನ್ನ ಸಮಸ್ಯೆಗೆ ಪರಿಹಾರವಿಲ್ಲ’ ಎಂದು ತಿಳಿದು ಹತಾಶರಾದರೆ ಸಮಸ್ಯೆಯ ವ್ಯಾಪ್ತಿ ಮತ್ತಷ್ಟು ದೊಡ್ಡದಾಗುತ್ತದೆ. ಮಾನಸಿಕವಾಗಿ ಅನುಭವಿಸುವ ನೋವು, ಕೊರಗು ಅಥವಾ ಒತ್ತಡ ಸಣ್ಣ ಸಮಸ್ಯೆಯೇನಲ್ಲ. ಇತರರಿಗಾಗಿ ಅವರ ವಿಷಯದ ಆಳಕ್ಕಿಳಿದು ವಸ್ತುನಿಷ್ಠವಾಗಿ ಚಿಂತಿಸಿ ಅರ್ಥೈಸಲು ಮುಂದೆ […]

ಕಾವ್ಯಯಾನ

ಪ್ರಕಾಶ್ ಕೋನಾಪುರ ಬಟ್ಟೆಗೆ ಮುಕ್ತಿ ಬೇಕಿದೆ! ಈಗೀಗ ಕತ್ತಲಲ್ಲಿಯೇ ಬೆತ್ತಲಾಗಬೇಕೆಂದೇನಿಲ್ಲಬೆಳಕಿನಲ್ಲೂ ಬೆತ್ತಲಾಗಬಹುದುಬಟ್ಟೆ ಕಳಚುವವರಿದ್ದರೆ ಬೆತ್ತಲಾಗಲು ಕತ್ತಲಿಗೆ ಕಾಯುವ ಮೂರ್ಖರೇಕತ್ತಲಲ್ಲಿ ಬೆತ್ತಲಾಗುವವರನ್ನೂ ನೋಡಬಹುದೀಗತ್ರಿನೇತ್ರಿಗರು ಗೋರಿಯೊಳಗೆ ಬೆತ್ತಲಾಗಿ ಮಲಗಿದವನಿಗೆ ಪದವಿಬಿರುದುಬಾವಲಿ ಅಷ್ಟೈರ್ಯಗಳು ಬಟ್ಟೆ ಹೊದಿಸಲಾಗಲಿಲ್ಲ ಹೆರಿಗೆನೋವಿನಿಂದ ನರಳುತ್ತಿರುವ ಹೆಣ್ಣೇನಾಚದಿರು ಬೆತ್ತಲಾಗಿಹೆನೆಂದು ಹೊಸಜೀವದ ಸೃಷ್ಟಿಗೆಬಟ್ಟೆ ತೊಟ್ಟ ನೀಚರೆದರು   ಬಟ್ಟೆಗೆ ಬಸಿರು ಮುಚ್ಚಿಡಲಾಗುವುದಿಲ್ಲಹಾಗೆಯೇ ಮನುಷ್ಯನ ಹೊಲಸನ್ನೂ ಓ ಮನುಷ್ಯನೇ ಬೆತ್ತಲಾಗದಿರುನಿನ್ನ ಕೊಳಕು ದೇಹವನ್ನು ನೋಡಲಾಗುವುದಿಲ್ಲಕೊಳಕನ್ನು ಮುಚ್ಚಿಟ್ಟು ಸುಸ್ತಾದಬಟ್ಟೆಗೆ ಮುಕ್ತಿ ಬೇಕಿದೆ  ============= ಪರಿಚಯ: ಬಿ.ಎಸ್ಸಿ(ಕೃಷಿ) ಪದವೀಧರ, ಶಿಕಾರಿಪುರದಲ್ಲಿ ವಾಸ, ಜಿಲ್ಲಾ ಉಪಾಧ್ಯಕ್ಷ,ಆಮ್ ಆದ್ಮಿ […]

ಕಾವ್ಯಯಾನ

ನಚಂ ವಯಸಲ್ಲದ ವಯಸ್ಸಲ್ಲಿ ಹೊತ್ತಲ್ಲದ ಹೊತ್ತಲ್ಲಿ ಕತ್ತಲೆಯ ಬೆನ್ನತ್ತಿ ಬಂದ ಓ ಬೇಳಕೆಂಬ ಕನಸೇ ಹೇಳು ನಿನೆಲ್ಲಿಗೆ ಹೋದೆ ಮನದ ಇರುಳು ತೊಲಗಲೇ ಇಲ್ಲ ನಿನ್ನ ಹೆಜ್ಜೆ ಮೂಡಲೇ ಇಲ್ಲ ಕಣ್ಣಬಿಟ್ಟು ನೋಡಿದೊಡೆ ಕಾಲವೇ ಕೇಳೇದಿತ್ತು ಕತ್ತಲೇ ಮಾತ್ರ ಉಳಿದಿತ್ತು! ಕರುಣೇ ಇಲ್ಲದ ಕಾಲದ ಬೇಳಕೇ ನೀನಾಗದಿರು ಮರಭೂಮಿಯ ನಿರ್ಗುಳ ಹುಡುಕುತ್ತಿರುವೆ ಹುಡುಕುತ್ತಿರುವೆ ನಿನ್ನ ಬಾ ಬೇಳಗೊಮ್ಮೆ ಬದುಕ ಹಬ್ಬವೆಂಬ ನೆಪಹೂಡಿ…. ಬಂದು ನಿಲ್ಲು ಬೇಳಕೇ ಕಾಲದ ಬಿರುಗಾಳಿಗೆ ಆರದೆ ನಿನ್ನ ಹಸಿವು ನನಗೂ ಇದೆ ಅರಿತು […]

ಕಥಾಗುಚ್ಛ

ಜಿ.ಹರೀಶ್ ಬೇದ್ರೆ ಯಾಣ ಬಿಸಿಲು ಬೆವರಿಗೆ ಹೊಂದಿಕೊಂಡು ಬೆಳೆದಿದ್ದ ಮೈಮನಗಳಿಗೆ ಮೊದಲ ಬಾರಿಗೆ ಥರಗುಟ್ಟುವ ಚಳಿಯಲ್ಲಿ ಹೊದೆಯಲು ಏನೂ ಇಲ್ಲದೆ ರಾತ್ರಿಯೆಲ್ಲಾ ಮುದುಡಿಕೊಂಡೇ ಮಲಗಿ, ಪುಣ್ಯಾತ್ಮರ ಮನೆಯೊಂದರಲ್ಲಿ ತಾಮ್ರದ ಹಂಡೆಯಲ್ಲಿ ಹದವಾಗಿ ಕಾಯಿಸಿದ ನೀರನ್ನು  ಸ್ನಾನ ಮಾಡುವ ಅವಕಾಶ ಸಿಕ್ಕಿತು.  ಒಮ್ಮೆ ಹಬೆಯಾಡುವ ಬಿಸಿನೀರು ಮೈಮೇಲೆ ಬಿದ್ದೊಡನೆ ಹಿಂದಿನ ದಿನ ನಡೆದೂ ನಡೆದು ಸುಸ್ತಾಗಿದ್ದ ನೋವೆಲ್ಲಾ ಅರ್ಧ ಮಾಯವಾದಂತಾಗಿತ್ತು. ಬಚ್ಚಲು ಮನೆಯೂ ಹಿಂಭಾಗದಲ್ಲಿ ಇದದ್ದರಿಂದ ಎಲ್ಲರೂ ಸ್ನಾನ ಆಗುವ ತನಕ ಅಲ್ಲೇ ಹಿಂದೆ ಗಿಡಮರಗಳನ್ನು ನೋಡುತ್ತಾ, ಮಾತನಾಡುತ್ತಾ […]

ಪುಸ್ತಕ ಬಿಡುಗಡೆಯ ಸಂಭ್ರಮ

ಲೋಕಾರ್ಪಣೆ ‘ಪಂಚವರ್ಣದ ಹಂಸ‘ ಸಾಹಿತ್ಯಾಸಕ್ತರಿಗೆ ಸ್ವಾಗತ ಕವಿ ಸತ್ಯಮಂಗಲ ಮಹಾದೇವ ಅವರ ಕವನ ಸಂಕಲನದ ಲೋಕಾರ್ಪಣೆಯ ಕಾರ್ಯಕ್ರಮ ದಿನಾಂಕ: 04/11/2019, ಸೋಮವಾರ ಸಮಯ: ಸಂಜೆ 6 ಗಂಟೆಗೆ ಸ್ಥಳ: ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಸಭಾಂಗಣ

ನ್ಯಾನೊ ಕಥೆಗಳು

ಅಂಬ್ರೀಶ್ ಎಸ್ ಹೈಯ್ಯಾಳ್… ಒಂದು– ಬರಗಾಲದಿಂದ ತತ್ತರಿಸಿದ ಜನ ದೇವರ ಮೊರೆ ಹೋದರು. ಮಳೆ ಬರಲೆಂದು ಪ್ರಾರ್ಥಿಸಿದರು. ಆದರೆ ದೇವಸ್ಥಾನದಲ್ಲಿ ಪೂಜಾರಿಯಿಂದ ಪ್ರತಿದಿನವೂ ದೇವರನ್ನು ನೀರಿನಿಂದ ತೊಳೆದು ಹಾಲು ತುಪ್ಪದ ಅಬಿಷೇಕ ಜರಗುತಿತ್ತು. ಎರಡು– ಅದು ಬೇಸಿಗೆ ಸಮಯ.ಅಲ್ಲೊಂದು ಉದ್ಯಾನವನದಲ್ಲಿ. ನೀರಿನ ಕಾರಂಜಿಯಾಟದ ಕಾರ್ಯಕ್ರಮ ಏರ್ಪಾಡಾಗಿತ್ತು. ಹೊಮ್ಮಿಸುವ ಸಂಗೀತಕ್ಕೆ ಬಣ್ಣ ಬಣ್ಣದ ನೀರಿನ ಕಾರಂಜಿ ನೃತ್ಯವಾಡುತಿತ್ತು. ಆದರೆ ಅಲ್ಲಿ ನೋಡುತ್ತಾ ಕುಳಿತ ಪ್ರೇಕ್ಷಕರು ಬಾಯಾರಿಕೆಯಾಗಿ ನೀರಿಲ್ಲದೆ ಪರದಾಡುತಿದ್ದರು. ಮೂರು– ಅಲ್ಲೊಂದು ಕಾಡು. ಕಾಡಿನ ಮದ್ಯೆ ಹರಿಯುವ ನದಿಯೊಂದು […]

Back To Top