ನ್ಯಾನೊ ಕಥೆಗಳು
ಅಂಬ್ರೀಶ್ ಎಸ್ ಹೈಯ್ಯಾಳ್… ಒಂದು– ಬರಗಾಲದಿಂದ ತತ್ತರಿಸಿದ ಜನ ದೇವರ ಮೊರೆ ಹೋದರು. ಮಳೆ ಬರಲೆಂದು ಪ್ರಾರ್ಥಿಸಿದರು. ಆದರೆ ದೇವಸ್ಥಾನದಲ್ಲಿ ಪೂಜಾರಿಯಿಂದ ಪ್ರತಿದಿನವೂ ದೇವರನ್ನು ನೀರಿನಿಂದ ತೊಳೆದು ಹಾಲು ತುಪ್ಪದ ಅಬಿಷೇಕ ಜರಗುತಿತ್ತು. ಎರಡು– ಅದು ಬೇಸಿಗೆ ಸಮಯ.ಅಲ್ಲೊಂದು ಉದ್ಯಾನವನದಲ್ಲಿ. ನೀರಿನ ಕಾರಂಜಿಯಾಟದ ಕಾರ್ಯಕ್ರಮ ಏರ್ಪಾಡಾಗಿತ್ತು. ಹೊಮ್ಮಿಸುವ ಸಂಗೀತಕ್ಕೆ ಬಣ್ಣ ಬಣ್ಣದ ನೀರಿನ ಕಾರಂಜಿ ನೃತ್ಯವಾಡುತಿತ್ತು. ಆದರೆ ಅಲ್ಲಿ ನೋಡುತ್ತಾ ಕುಳಿತ ಪ್ರೇಕ್ಷಕರು ಬಾಯಾರಿಕೆಯಾಗಿ ನೀರಿಲ್ಲದೆ ಪರದಾಡುತಿದ್ದರು. ಮೂರು– ಅಲ್ಲೊಂದು ಕಾಡು. ಕಾಡಿನ ಮದ್ಯೆ ಹರಿಯುವ ನದಿಯೊಂದು […]
ಕಾವ್ಯಯಾನ
ಬಿದಲೋಟಿ ರಂಗನಾಥ್ ಮೌನದ ಗೆರೆಯ ನಡುವೆ.. ಒಡಲುರಿಯ ಕನಸೊಂದು ಚುಕ್ಕಿಗಳತ್ತ ಮುಖ ಮಾಡಿ ಭಾವದಗೂಡಿನಲಿ ಅರಳಿ ಮುತ್ತಾಗಿ ಸಮುದ್ರದ ಮೇಲೆ ಬರೆದ ಕವನದ ಕರುಳ ತಂತಿಯಲಿ ಸುತ್ತಿಕೊಂಡ ಸಂಬಂಧ ಕಿತ್ತಾಡಿ ತಿನ್ನಲಿಲ್ಲ ಒಟ್ಟಾಗಿ ಬೆಳೆಯಲಿಲ್ಲ ಅತ್ತು ಕರೆದು ಕಣ್ಣೀರ ಕಡೆಯಲಿಲ್ಲ ಅದೆಂಥದ್ದೋ ಭಾವದ ಸೆಳೆತ ಹತ್ತಿರ ನಿಂತೆ ಹಾಡುತ್ತಿದೆ ಕಣ್ಣ ಕನ್ನಡಿಯ ಬಿಂಬದಲಿ ಕಟ್ಟಿದ ಕನಸುಗಳ ಕಂತೆ ಬಿಚ್ಚಿ ನೋಡುವ ಬಯಲ ಕುದುರೆ ಈ ಜಗದ ಮಿಣುಕು ಬೆಳಕು ಎಲ್ಲೋ ನಿಂತು ನೋಡಿ ಬೆಸೆದ ಅನುಬಂಧ ಮೀಟುತ್ತಿದೆ […]
ಮಹಿಳೆ
ನಾನು ಹೆಣ್ಣೆಂಬ ಹೆಮ್ಮೆ ನನಗಿದೆ! ಐಶ್ವರ್ಯ .ಎಲ್ ನಾನೊಂದು ಹೆಣ್ಣಾಗಿ ಈ ವಿಷಯದ ಬಗ್ಗೆ ಬರೆಯೋಕೆ ನನಗ್ಯಾವ ಮುಜುಗರವಾಗ್ಲಿ, ಅವಮಾನವಾಗ್ಲಿ ಇಲ್ಲ. ಬದಲಾಗಿ ನಾನೊಬ್ಬ ಹೆಣ್ಣೆಂಬ ಹೆಮ್ಮೆ ನನಗಿದೆ. ನೀವೆಲ್ಲ ಅನ್ಕೊಬಹುದು ಇದೇನು ಜಗಜ್ಜಾಹೀರು ಮಾಡೊ ವಿಷಯಾನ ಅಂತ ಆದ್ರೆ ಜಗತ್ತಿನ ಅದೆಷ್ಟೊ ಜೀವಗಳಿಗೆ ಗೊತ್ತಿಲ್ಲ ಹೆಣ್ತನದ ನಿಗೂಢತೆ, ನೋವುಗಳ ಬಗ್ಗೆ. ಕಂಬಳಿ ಹುಳುವದು ರೆಕ್ಕೆ ಕಟ್ಟುವ ಕಾಲದಂತೆ ಮೊಣಕಾಲಿನವರೆಗೂ ಲಂಗವೆತ್ತಿ ಕುಂಟೆಬಿಲ್ಲೆ ಆಡುತ್ತಿದ್ದವಳಿಗೆ ಹಿಂದೆಂದೂ ಆಗದಂತ ಕಿಬ್ಬೊಟ್ಟೆಯ ಬಾಧ, ಅಲ್ಲಿಂದಲೇ ಶುರುವಾಯ್ತೆನೋ ಹೆಣ್ಣೊಬ್ಬಳ ದೈಹಿಕ ಹೋರಾಟ, […]