Day: October 22, 2019

ತಂತಿಯೊಳಗಣ  ಶಬ್ದ !

ಕಾವ್ಯ ಸಂಗಾತಿ ತಂತಿಯೊಳಗಣ  ಶಬ್ದ ! ಬಿದಲೋಟಿ ರಂಗನಾಥ್ ನಾನು ಶರಾಬಿನ ದಾಸ ಘಟಶೋಧನೆಯಲ್ಲಿನ ಬಂಧವನ್ನು ಹುಡುಕುತ್ತಲೇ ಹೋದೆ ಅವನ ನೆರಳಿತ್ತು ಅವಳ ಒಲವಿತ್ತು ನಾನೇ ಇರಲಿಲ್ಲ. ಶೋಧಿಸಿಸಲು ಎದೆಗೂಡಲ್ಲಿದ್ದ ಹಂಸದ ನಡಿಗೆಯ ಹೆಜ್ಜೆಯ ಸುತ್ತಿ ಹೊಲೆದ ಪಾಪದ ಮೂಟೆಯ. ತಿರುಗಿದೆ ಕಾಡು –ಮೇಡು ಬೆಟ್ಟ ಕಣಿವೆ ಕಂದರ ನಾ ಬಯಸಿದ್ದು ಸಿಗಲಿಲ್ಲ ಧ್ಯಾನದ ಹೆಜ್ಜೆ ಮುಟ್ಟಿ ನೋಡಿದೆ ಸಕಲವೂ ನನ್ನೊಳಗೇ ಇತ್ತು ತಂತಿ ಮೀಟಿದ ಶಬ್ದ ನಿಜದ ನೆಲೆಯ ಬದುಕಿಗೆ ದಾರಿ ತೋರಿ ಬಯಲ ಪದಗಳು […]

ಲೇಖನ

ಆ ದೃಶ್ಯಗಳನ್ನು ಅಲಂಕರಿಸಿ ಹಂಚುತ್ತಿದ್ದಾರೆ! ಪಿಎಂ ಇಕ್ಬಾಲ್ ಕೈರಂಗಳ ಕೆಲವು ದೌರ್ಜನ್ಯದ ವಾರ್ತೆಗಳು, ವೀಡಿಯೋಗಳು FB ಮತ್ತು ವಾಟ್ಸಪಲ್ಲಿ ಷೇರು ಆಗಿ ನಮ್ಮ ಕಣ್ಣಿಗೆ ಬೀಳುತ್ತಿರುವುತ್ತವೆ. ನೋಡಕ್ಕಾಗದೇ ನೋಡುತ್ತೇವೆ. ಆಗೆಲ್ಲಾ ಮನಸ್ಸು ವಿಪರೀತ ಹರ್ಟುಗೊಳ್ಳುತ್ತದೆ. ಹೃದಯವನ್ನು ಯಾರೋ ಹಿಂಡಿದಂತಾಗುತ್ತದೆ. ಕೆಲವು ನಮ್ಮನ್ನು ಅಳಿಸಿಯೇ ಬಿಡುತ್ತವೆ. ವಿಕೃತ ಮನಸ್ಸಿನ ಪೈಶಾಚಿಕ ಮನುಷ್ಯರ ವಿರುದ್ಧ ರಕ್ತ ಕುದಿಯುತ್ತದೆ. ಅವರನ್ನು ಜೀವಂತ ಸುಡಬೇಕೆಂದು ಅನಿಸುತ್ತದೆ. ಕ್ರೌರ್ಯ, ದೌರ್ಜನ್ಯಗಳ ತಾಕತ್ತೇ ಹಾಗೆ. ಒಂದೆರಡು ನಿಮಿಷದ ವಾರ್ತೆಯಾಗಿ ಅಥವಾ ವೀಡಿಯೋ ಆಗಿ ಸಿಕ್ಕರೆ ನಮಗೆ […]

ಕಾವ್ಯಯಾನ

ಹೊಸ ಹಾಡು ದೇವಯಾನಿ ನೆನಪಿಗೆಂದು ಕೊಳಲ ನಾನೆಂದೂ ಕೇಳಲೇ ಇಲ್ಲ ಚಕ್ರ ಹಿಡಿಯಲೆಂದೇ ಹೊರಟವನು ನೀನು , ಕೊಳಲು ಬೇಕಿರಲಿಲ್ಲ ಏನು ಮಾಡಲಿ ಈ ಕೊಳಲ ಗಾಳಿ ನುಸುಳಿದರೂ ರಾಧೆ ರಾಧೇ ಎಂದೇ ಉಲಿಯುತ್ತಿದ್ದ ಕೊಳಲೀಗ ಬರಿ ಬಿದಿರ ಕೊಳವೆಯಾಗಿ ಬಿದ್ದಿದೆ ನೀನು ಕೊಳಲೂದಲೆಂದೇ ಗೋಕುಲಕೆ ಈ ಜಗಕೆ ಬರಲಿಲ್ಲ ಬಿಡು ಆದರೂ ಚಕ್ರ ಹೊತ್ತ ಕೈ ಸೋತಾಗ ಕೊಳಲ ನೆನಪಾಗದ್ದೇ ನನಗೆ ವಿಸ್ಮಯ ಕೊಳಲೆಂದರೆ ರಾಧೆ ಎಂದುಕೊಂಡಿದ್ದೆ ಎಂದು ಹೆಮ್ಮೆ ಪಡುತ್ತಿದ್ದೆ ನಾನು ಕೊಳಲ ತೊರೆದಷ್ಟೇ […]

ಪುಸ್ತಕ ಸಂಭ್ರಮ

ಪುಸ್ತಕ ಬಿಡುಗಡೆ ಕಾವ್ಯಕಂದೀಲು ಬಳಗ,ಬಾಗಲಕೋಟೆ ಹಾಗೂ ಕನ್ನಡಸಾಹಿತ್ಯಪರಿಷತ್ತು,ಬಾಗಲಕೋಟೆ ಹಾಗೂ ಫೀನಿಕ್ಸ್ ಪ್ರಕಾಶನ’_ ತೀರ್ಥಹಳ್ಳಿ,  ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ;20/10/2019ರಬಾನುವಾರ ಬಾಗಲಕೋಟೆಯ  ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕನ್ನಡ ಸಾಹಿತ್ಯ ಲೋಕದ ಎರಡು  ಹೊಸ ಪುಸ್ತಕಗಳೂ ಲೋಕಾರ್ಪಣೆಗೊಂಡವು ‘ನವಿಲೂರ _ದಾರಿಯಲ್ಲಿ’ (ಕಥಾಸಂಕಲನ)- ಶ್ರೀಹರಿದೂಪದ  ‘ತೊರೆದು ಜೀವಿದಬಹುದೆ?’(ಭಾವಲಹರಿಗಳ ಗುಚ್ಛ)-ಪುನರ್ವಸು ಪ್ರಶಾಂತ್         

Back To Top