ಕಾವ್ಯಯಾನ
ಮನದ ಹನಿಗಳು ಅನಿತ ಕೃಷ್ಣಮೂರ್ತಿ ಸಿದ್ದವಾದ ಸೆಳೆತದ ಹೊಸ್ತಿಲು ಸದ್ದಿರದೆ ಸುಳಿದಾಡಿದೆ ಸ್ನೇಹ ಸೇತುವೆ ಹತ್ತಲು ಸಾಧಿಸಲು ಗುರಿ ಮುಂದಿನ ಹಾದಿ ನೂರಾರು ಬಾಧಿಸಲು ಕಾಯಬಹುದು ಆಲೋಚನೆಯ ಕರಾರು ಮನಸಲಿ ಕತ್ತಲಿರುವಾಗ ಕಣ್ಣಿನ ಹೊಳಪು ಬೆಳಕಾಗಿ ಸುತ್ತಲಾಗಲಿಲ್ಲ ನಾನೇಕೆ ಹುಡಕಲಿ ನಿನ್ನ ಅಲ್ಲಿ ಇಲ್ಲಿ ಮಾಸದಂತೆ ಉಳಿದಿದೆ ನಿನ್ನದೇ ಚಿತ್ರ ಮನದ ಭಿತ್ತಿಯಲಿ ಹಟದ ಬೇಲಿಯನ್ನೇ ಸುತ್ತಿಕೊಂಡಿದ್ದ ಮನಸು ದಾಟಿ ಬಂದಿತ್ತು ಕಂಡು ನಿನ್ನ ಮಂದಸ್ಮಿತದ ಸೊಗಸು ಕಾದಿದೆ ತೆಪ್ಪವೊಂದು ಸೇರಿಸಲು ದೂರ ತೀರವನು ಕಾಡಿದೆ ನೆನಪೊಂದು […]
ಕಾಡುವ ಹಾಡು
ಈ ಬಾರಿ ರಾಜ್ಯೋತ್ಸವ ವಿಶೇಷಕ್ಕೆ ಕಾಡುವ ಹಾಡು “ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ” ಸುಜಾತ ರವೀಶ್ ಕನ್ನಡ ಭಾಷೆ ನಾಡು ಸಂಸ್ಕೃತಿಯನ್ನು ಹೊಗಳುವ ವರ್ಣಿಸುವ ಬಿಂಬಿಸುವ ಹಾಡುಗಳು ಸಾವಿರಾರು. ಆದರೂ ಚಿಕ್ಕಂದಿನಲ್ಲಿ ಆಕಾಶವಾಣಿಯಲ್ಲಿ ಕೇಳುತ್ತಿದ್ದ ಈ ಹಾಡು ಅಂದಿನಿಂದಲೂ ಮನದಲ್ಲಿ ಬೇರೂರಿದೆ. ನಿಜವಾದ ಅರ್ಥದಲ್ಲಿ ಕಾಡುವ ಹಾಡಾಗಿದೆ .ಯಾವುದು ಅಂತೀರಾ ?ಅದೇ ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ ಭಿಕ್ಷುಕನಾದರೂ ಕನ್ನಡ ನಾಡಲ್ಲೆ ಮಡಿವೆ ಸಂಗಮ ಚಿತ್ರದ ಈ ಹಾಡನ್ನು ವಿವಿ ಶ್ರೀನಿವಾಸ್ ಮತ್ತು ಸಿಕೆ ರಾದವರು ಹಾಡಿದ್ದಾರೆ […]
ಅನುಭವ
ಭಯದ ನೆರಳಲ್ಲಿ ಹೆಬ್ರಿ ಸದಾನಂದ ಶೆಟ್ಟಿ ಭಯದ ನೆರಳಲ್ಲಿ ಕೈಯಲ್ಲಿ ಸಣ್ಣ ಬ್ಯಾಗ್ ಹಿಡಿದ ನಾನು ನನ್ನ ಭಾವಿ ಪತ್ನಿ ನೋಡೊ ಬರದಲ್ಲಿ ಹೆಜ್ಜೆ ಹಾಕಿದೆ 40 ನಿಮಿಷ ಕಳೆದ ನ೦ತರ ಮಾವನ ಮನೆ ನಾಯಿಗಳ ಬೊಗಳುವಿಕೆಗೆ ಚಿಮಿಣಿ ಹಿಡಿದು ಹೊರ ಬ೦ದಳು ನನ್ನ ಭಾವಿ ಪತ್ನಿ, ಕಗ್ಗತ್ತಲು ” ಯಾರದು ಜಾಗ್ರತೆ ನಾಯಿ ಕಚ್ಚುತ್ತೆ ”ಅ೦ದಾಗ ” ನಾನು ಕಣೆ” ಅ೦ದಾಗ ಆಕೆಗೆ ಸಣ್ಣವರಿದ್ದಾಗಲಿ೦ದ ಗೊತ್ತಿದ್ದರಿ೦ದ ಓಡಿ ಹೋಗಿ ನಾಯನ್ನು ಕಟ್ಟಿ, ತ೦ಗಿಯನ್ನುದ್ದೇಶಿಸಿ ” ರತ್ನ […]
ಲಹರಿ
ಜೀವನ ಅನ್ನೋ ಸೈಕಲ್ ಶಂಭುಗೌಡ ಆರ್.ಜಿ. ಹುಟ್ಟೆಂಬುದ ಹುಟ್ಟಿದಾಗಿಂದ ಜೀವನ ಅನ್ನೋ ಸೈಕಲ್ ಹತ್ತಿ ಪೆಟಲ್ ತುಳ್ದಿದ್ದೋ ತುಳಿದಿದ್ದು…ಮಾರ್ಗ ಮಧ್ಯದಲ್ಲಿ ಹೆಸರಿಲ್ಲದ ಕಾಣದ ಕೈ ಒಂದು ಬೀಸಾಕಿದ ಬಿಕನಾಸಿ ಮುಳ್ಳು ಅಂಟಿಲ್ಲದಿದ್ದರೂ ಅಂಟ್ಕೊಂಡು ಪಂಚರ್ ಆಗಿ ಪಂಚರಂಗಿ ಟೈಟಲ್ ಇರೋ ಪಂಚರ್ ಅಂಗಡಿಯವರೆಗೂ ನಟರಾಜ ಸರ್ವಿಸ್ ನಲ್ಲಿ ನಡೆದು ರಿಪೇರಿ ಮಾಡಿಸಿ ಮತ್ತದೇ ಸೈಕಲ್ ಹತ್ತಿ ಕಾಣದ ಕನಸುಗಳ ಮೂಟೆಗಳನ್ನ ಹೊತ್ತು ಮತ್ತದೇ ಹೆಸರಿಲ್ಲದ ನನಸಿನ ನಗರಿಯತ್ತ ಪಯಣ ಶುರು.ಮಾರ್ಗ ಮಧ್ಯದಲ್ಲಿ ಬೇಟಿಯಾಗೋ ಅಪರಿಚಿತ ಮುಖಗಳನ್ನ ಪರಿಚಯಕ್ಕೂ […]
ಕಾವ್ಯಯಾನ
ಮುಖವಾಡ ಸುಜಾತ ರವೀಶ್ ಮುಖವಾಡ *** ಕಿತ್ತೊಗೆಯಬೇಕೆನಿಸುತಿದೆ ಅಂಟಿಕೊಂಡಿರುವ ಈ ಮುಖವಾಡಗಳ ಬಿಸಿ ಧಗೆಯ ಕುಲುಮೆಯಲ್ಲಿ ಉಬ್ಬೆಗೆ ಹಾಕಿದಂತಿದೆ ನೈಜತೆಯ ಶುದ್ದ ಹವೆಯಲ್ಲಿ ಮನ ಉಸಿರಾಡಬಯಸುತಿದೆ. ಮನದಲ್ಲಿ ಜ್ವಾಲಾಮುಖಿ ಸಿಡಿಯುವಂತಿದ್ದರೂ ಲಾವಾರಸ ಹೊರಚಿಮ್ಮದಂತೆ ಜಾಗೃತಿ ವಹಿಸಬೇಕಾಗಿದೆ ಶಾಂತತೆಯ ಮುಖವಾಡ ತೊಟ್ಟು ಬದುಕು ದೂಡಬೇಕಾಗಿದೆ. ಗೋಸುಂಬೆಯ ಹಾಗೆ ಬಣ್ಣ ಬದಲಿಸುತಿರುವವರ ನೋಡಿದಾಗೆಲ್ಲ ಮುಖಕ್ಕೆ ರಾಚುವಂತೆ ಬೈದುಬಿಡಬೇಕೆಂದೆನಿಸಿದರೂ ಸಭ್ಯತೆಯ ಮುಖವಾಡ ಧರಿಸಬೇಕಾಗಿದೆˌನಟಿಸಬೇಕಾಗಿದೆ. ಪರಂಪರಾನುಗತ ಉರುಳುಗಳಿಂದ ಬಿಡಿಸಿಕೊಳ್ಳಬೇಕೆನಿಸಿದರೂ ಹಕ್ಕಿಯಂತೆ ಸ್ವೇಚ್ಛೆಯಾಗಿ ನೀಲನಭದಿ ವಿಹರಿಸಬೇಕೆಂದರೂ ಮತ್ತೆ ಸಂಪ್ರದಾಯದ ಮುಖವಾಡದ ಹಿಂದೆ ನಿಲ್ಲಬೇಕಾಗಿದೆ. ಆಸೆ […]
ಪುಸ್ತಕ ವಿಮರ್ಶೆ
ಕೃತಿ: ಭಾವಗಳು ಬಸುರಾದಾಗ. ಕವಿ:ಅರುಣ್ ಕೊಪ್ಪ ವಿಮರ್ಶೆ: ಜಿ.ವಿ.ಕೊಪ್ಪಲತೋಟ ಭಾವಗಳು ಬಸುರಾದಾಗ ಕವನ ಸಂಕಲನಕ್ಕೆ ಹಿರಿಯ ಪತ್ರಕರ್ತ ಶ್ರಿÃ ಜಯರಾಮ ಹೆಗಡೆ ಶಿರಸಿ ಮುನ್ನುಡಿ ಬರೆದಿದ್ದಾರೆ. ಬೆನ್ನುಡಿಯಲ್ಲಿ ಸಾಹಿತಿ ಡಾ|| ಬೇರ್ಯರಾಮಕುಮಾರ ಅವರು ಅರುಣಕೊಪ್ಪ ಅವರನ್ನು ಪರಿಚಯಿಸಿದ್ದಾರೆ. ಸಾಲದೂ ಎಂಬಂತೆ ಡಾ|| ಅಜಿತ್ ಹೆಗಡೆ ಹರೀಶಿಯವರೂ ಕೂಡಾ ಇವರನ್ನು ಓದುಗರಿಗೆ ಪರಿಚಯಿಸಿದ್ದಾರೆ. ಇವರ ಮೊದಲ ಕವನ ಸಂಗ್ರಹ ಹನಿಗಳ ಹಂದರ ಎರಡನೆ ಸಾಹಿತ್ಯ ಕೃತಿಯೇ ಭಾವಗಳು ‘ಬಸುರಾದಾಗ’ (ಕವನ ಸಂಕಲನ) ಈ ಸಂಕಲನದಲ್ಲಿ ಸಣ್ಣದು ದೊಡ್ಡದು ಸೇರಿ […]