‘ಖಂಡಿತಾ ಜಾಗ್ರತೆ ಮಾಡುತ್ತೇವೆ ನಾರಾಯಣಣ್ಣ. ಇನ್ನು ಮುಂದೆ ನಮ್ಮಿಂದ ಯಾರೀಗೂ ಯಾವ ತೊಂದರೆಯೂ ಆಗದಂತೆ ನೋಡಿಕೊಳ್ಳುತ್ತೇವೆ!’ ಎಂದು ಗೋಪಾಲನೂ ಭರವಸೆ ನೀಡಿದ. ಆಗ ನಾರಾಯಣರು ಸುಮಿತ್ರಮ್ಮನತ್ತ ತಿರುಗಿ, ‘ಇದಕ್ಕೇನಂತೀರಿ ಸುಮಿತ್ರಮ್ಮಾ ಆಗಬಹುದಲ್ಲ…?’ ಎಂದು ನಗುತ್ತ ಪ್ರಶ್ನಿಸಿದರು.
ದಾರಾವಾಹಿ ಆವರ್ತನ ಅದ್ಯಾಯ-27 ಗುರೂಜಿಯ ಮನೆಯಿಂದ ಹಿಂದಿರುಗಿದ ಸುಮಿತ್ರಮ್ಮ ಆತುರಾತುರವಾಗಿ ಮನೆಗೆ ಬಂದವರು ಕೈಕಾಲು ಮುಖ ತೊಳೆಯಲು ಬಚ್ಚಲಿಗೆ ಹೋದರು. ಆಹೊತ್ತು ಲಕ್ಷ್ಮಣಯ್ಯ ವರಾಂಡದಲ್ಲಿ ಕುಳಿತುಕೊಂಡು ಜೈಮಿನಿ ಭಾರತದ ಚಂದ್ರಹಾಸನ ಪ್ರಸಂಗವನ್ನು ಓದುತ್ತಿದ್ದರು. ಅದರಲ್ಲಿ, “ಮಂತ್ರಿ ದುಷ್ಟಬುದ್ಧಿಯು ಕುಳಿಂದನನ್ನು ಸೆರೆಯಲ್ಲಿಟ್ಟು ಕುಂತಳಪುರಕ್ಕೆ ಬರುವಾಗ ಹಾವೊಂದು ಅವನೆದುರು ಬಂದು, ನಿನ್ನ ಮನೆಯಲ್ಲಿದ್ದ ನಿಧಿಯನ್ನು ಕಾಯುತ್ತಿದ್ದೆ. ಆದರೆ ನಿನ್ನ ಮಗ ಅದೆಲ್ಲವನ್ನೂ ವೆಚ್ಚ ಮಾಡಿದ! ಎಂದು ಹೇಳಿ ಹೊರಟು ಹೋಯಿತು” ಎಂಬ ಕಥೆಯ ಕೊನೆಯಲ್ಲಿದ್ದರು. ಅಷ್ಟೊತ್ತಿಗೆ ಸುಮಿತ್ರಮ್ಮ ನಗುತ್ತ ಬಂದು […]
ಅಷ್ಟು ಕೇಳಿದ ಸುಮಿತ್ರಮ್ಮನಿಗೆ ವಿಸ್ಮಯವಾಯಿತು. ‘ಅಯ್ಯೋ ದೇವರೇ, ಇವರ ಶಕ್ತಿಯೇ…!’ ಎಂದುಕೊಂಡವರು ಗುರೂಜಿಯ ಮೇಲೆ ಇನ್ನಷ್ಟು ಗೌರವ ತಳೆದು, ‘ಹೌದು ಹೌದು ಗುರೂಜೀ…ಅದೊಂದು ಘಟನೆಯಲ್ಲಿ ನಾವಿಬ್ಬರೂ ಅರೆಜೀವವಾಗಿ ಬಿಟ್ಟಿದ್ದೆವು!’ ಎಂದರು ನೋವಿನಿಂದ.
ದಾರಾವಾಹಿ ಆವರ್ತನ ಅದ್ಯಾಯ-25 ಸುಮಿತ್ರಮ್ಮನ ಭಯಭಕ್ತಿಯ ಪ್ರಾರ್ಥನೆಗೆ ಒಲಿದು ನಾಗರಹಾವು ಮಾಯವಾದುದು (ವಾಸ್ತವದಲ್ಲಿ ಆ ಹಾವು ಅವರೆಲ್ಲರ ಕಣ್ಣು ತಪ್ಪಿಸಿ ಹೊರಗೆ ಹೊರಟು ಹೋದುದು) ವಠಾರದವರಿಗೆಲ್ಲ ವಿಸ್ಮಯವನ್ನು ತರಿಸಿತು! ಜೊತೆಗೆ ಸುಮಿತ್ರಮ್ಮನ ಮೇಲೆ ಅವರೆಲ್ಲರಲ್ಲಿ ಆವರೆಗೆ ಇದ್ದಂಥ ಅಸಹನೆ, ಅಸಡ್ಡೆಗಳೂ ತುಸು ಮರೆಯಾಗಿ ಅದರ ಬದಲಿಗೆ ಯರ್ರಾಬಿರ್ರಿ ಗೌರವಾದರಗಳು ಮೂಡಿಬಿಟ್ಟವು. ಇತ್ತ ತಮ್ಮ ಪ್ರಾರ್ಥನೆಗೆ ಬೆಲೆಕೊಟ್ಟು ನಾಗದೇವನು ಹೊರಟು ಹೋದುದು ಸುಮಿತ್ರಮ್ಮನನ್ನೂ ರೋಮಾಂಚನಗೊಳಿಸಿತು. ಅದೇ ಕಾರಣದಿಂದ ಅವರಲ್ಲಿ ನಾಗರಹಾವಿನ ಬಗ್ಗೆ ಸ್ವಲ್ಪ ಧೈರ್ಯವೂ ಹುಟ್ಟಿತು. ಆದರೆ ಲಕ್ಷ್ಮಣಯ್ಯನ […]
ಆಗ ಶಂಕರನೂ, ಪುರಂದರಯ್ಯನೂ ತುಸು ಗೆಲುವಾದರು. ನಂತರ ಹಾವು ಮತ್ತು ಮೊಟ್ಟೆಗಳನ್ನು ದಹಿಸುವ ಶಾಸ್ತ್ರೋಕ್ತ ವಿಧಿಗೆ ಚಾಲನೆ ನೀಡಿದ ಏಕನಾಥರು ಮೃತ ಸರ್ಪ ಕುಟುಂಬವನ್ನು ದೇಸಿ ದನದ ತುಪ್ಪದಿಂದಲೇ ಸುಟ್ಟು ಅವುಗಳ ಆತ್ಮಗಳಿಗೆ ಚಿರಶಾಂತಿ ಕೋರಿದರು.
ತೀವ್ರ ಭಯ, ಗೊಂದಲದಿಂದಲೇ ಗಮನಿಸುತ್ತಿದ್ದ ಶೀತರಕ್ತ ದೇಹಿಯಾದ ನಾಗರಹಾವಿನ ರಕ್ತದೊತ್ತಡವೂ ತುಸುಹೊತ್ತು ನೆತ್ತಿಗೇರಿಬಿಟ್ಟಿತು. ಆದ್ದರಿಂದ ಆ ಹಾವು, ಇನ್ನೂ ತಾನಿಲ್ಲಿ ನಿಂತೆನೆಂದರೆ ಈ ಮನುಷ್ಯರು ನನ್ನ ತಿಥಿ ಮಾಡಿ, ಭೂರೀ ಭೋಜನ ಸವಿಯುವುದು ಖಂಡಿತಾ! ಎಂದು ಯೋಚಿಸಿದ್ದು ಮಿಂಚಿನವೇಗದಲ್ಲಿ ಹೊರಗೆ ಹರಿದು ಕಣ್ಮರೆಯಾಗಿಯಿತು.
‘ಅಯ್ಯೋ, ನೀವು ಇಷ್ಟೆಲ್ಲ ಕಥೆ ಹೇಳಿದ ಮೇಲೆ ಇನ್ನು ಬೇರೇನು ನಿರ್ಧರಿಸಲಿಕ್ಕಾಗುತ್ತದೆ ಗುರೂಜಿ? ಹೇಗೆ ಹೇಳುತ್ತೀರೋ ಹಾಗೆ ಮಾಡುವ. ಆದರೂ ಒಂದು ಮಾತು ನೋಡಿ, ಇನ್ನು ಮುಂದೆ ನೀವೂ ನನ್ನೊಟ್ಟಿಗಿದ್ದುಕೊಂಡು ಸಹಕರಿಸುತ್ತೀರಿ ಎಂದಾದರೆ ಮಾತ್ರ ನಾನೂ ಈ ವಿಷಯದಲ್ಲಿ ಮುಂದುವರೆಯುತ್ತೇನೆ!’ ಎಂದೆನ್ನುತ್ತ ಅವರನ್ನು ಮೆಚ್ಚಿಸುವ ವಿನಯತೆ ನಟಿಸಿದ.
ತನ್ನ ಕೋಳಿಗಳು ಸುಮಿತ್ರಮ್ಮನ ಅಂಗಳದಲ್ಲಿ ಹರಡಿದ ಕೊಳಕನ್ನು ತೊಳೆದುಕೊಟ್ಟ ರಾಧಾ ಅವುಗಳ ಮೇಲೆ ಬೇಸರಗೊಂಡು ಮನೆಗೆ ಹೊರಟಳು. ಅವಳ ಸ್ವಚ್ಛತಾ ಅಭಿಯಾನ ಮುಗಿಯುವವರೆಗೆ ತಮ್ಮ ಆವರಣದ ಹೊರಗೆಯೇ ನಿಂತುಕೊಂಡು ಗಮನಿಸುತ್ತಿದ್ದ ಸುಮಿತ್ರಮ್ಮನಿಗೆ ಅವಳು ಹೊರಟು ಹೋಗುತ್ತಲೇ ರಪ್ಪನೆ ಒಂದು ವಿಷಯವು ನೆನಪಾಯಿತು.
ಈಗ ಏಕನಾಥರು ಹತೋಟಿಗೆ ಬಂದರು. ‘ಆದರೆ ನಮಗೀಗ ಅಂಜನದಲ್ಲಿ ಇನ್ನಷ್ಟು ಸಂಗತಿಗಳು ಕಂಡು ಬಂದಿವೆ ಮಾರಾಯಾ ಅದನ್ನೂ ಹೇಳುತ್ತೇವೆ ಕೇಳು!’ ಎಂದರು ಗಂಭೀರವಾಗಿ. ಅಷ್ಟು ಕೇಳಿದ ಶಂಕರನ ಚಡಪಡಿಕೆ ಇಮ್ಮಡಿಯಾಗಿ ಏಕನಾಥರ ಮೇಲೆ ಅವನಲ್ಲಿ ಅಸಹನೆ ಹುಟ್ಟಿತು. ಆದರೆ ಅದರ ನಡುವೆಯೂ ‘ಅದೇನಿರಬಹುದು…?’ ಎಂಬ ಆಸಕ್ತಿಯೂ ಕೆರಳಿತು. ‘ಹೌದಾ ಗುರೂಜಿ, ಏನದು ಹೇಳಿ…?’ ಎಂದ ಅವರನ್ನೇ ದಿಟ್ಟಿಸುತ್ತ.
ದಾರಾವಾಹಿ ಆವರ್ತನ ಅದ್ಯಾಯ-19 ಬ್ಯಾಂಕರ್ ನಾರಾಯಣರು ಕೆನರಾ ಬ್ಯಾಂಕ್ ನಿವೃತ್ತ ಉದ್ಯೋಗಿ. ಅವರ ಹೆಂಡತಿ ಗಿರಿಜಕ್ಕ. ಇವರ ಮೂವರು ಮಕ್ಕಳೂ ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ಮತ್ತು ಸಂಸಾರದ ನಿಮಿತ್ತ ಹೊರದೇಶದಲ್ಲೂ, ಪರವೂರಿನಲ್ಲೂ ನೆಲೆಸಿದ್ದರು. ಆದ್ದರಿಂದ ಈಗ ಎರಡೂವರೆ ಸಾವಿರ ಚದರಡಿಯ ಮಾಳಿಗೆ ಮನೆಯಲ್ಲಿ ಗಂಡ ಹೆಂಡತಿ ಇಬ್ಬರೇ ಇರುವುದು. ಮನೆಗೆಲಸದ ವೆಂಕಮ್ಮ ದಿನಾ ನಿಶ್ಶಬ್ದವಾಗಿ ಬಂದು ತನಗೆ ನಿಗದಿಪಡಿಸಲಾದ ಕೆಲಸಕಾರ್ಯಗಳನ್ನು ಚೊಕ್ಕವಾಗಿ ಮಾಡಿಕೊಟ್ಟು ಹೊರಟು ಹೋಗುತ್ತಾಳೆ. ಹಬ್ಬ ಹರಿದಿನಗಳಲ್ಲೂ ಇನ್ನಿತರ ಶುಭದಿನಗಳಲ್ಲೂ ನಾರಾಯಣ ದಂಪತಿಯ ಮಕ್ಕಳು ತಮ್ಮ […]