ಇಬ್ಬರೂ ವಚನಕಾರರ ಬದುಕಿನ ಹಿನ್ನೆಲೆಯಲ್ಲಿ ಈ ವಚನವನ್ನು ಗಮನಿಸಬಹುದು. ಬಸವಣ್ಣನವರು ಭಕ್ತಿಭಂಡಾರಿ ಹೇಗೋ ಹಾಗೇ ಬಿಜ್ಜಳನ ಭಂಡಾರದ ಮೇಲ್ವಿಚಾರಣೆ ನೋಡಿಕೊಳ್ಖುತ್ತಿದ್ದವರು. ಅಕ್ಕ ಮಹಾರಾಣಿಯಾಗಿದ್ದವಳು ಕೊನೆಗೆ ತನಗಾಗಿ ಎಲ್ಲವನ್ನೂ ಬಿಟ್ಟು ಬಂದವಳು. ಈ ಹಿನ್ನೆಲೆಯಲ್ಲಿ ಇಬ್ಬರೂ ಆರ್ಥಿಕವಾಗಿ ಸಬಲರು ಮತ್ತು ಸಮಾಜದ ಮೇಲ್ವರ್ಗದಲ್ಲಿ ಇದ್ದವರು. ಹೆಣ್ಣಾಗಿ ಅಕ್ಕ ತಾನೇ ಎಲ್ಲ ಬಿಟ್ಟು ದಿಟ್ಟವಾಗಿ ನಿಂತವಳು, ಆತ್ಮ ಸಂಗಾತಕ್ಕೆ ನೀ ಎನಗುಂಟು ಎಂದು ನಡೆದಂತೆ, ಈ ದೇಹವ ನಾಯಿತಿಂದರೇನು ನೀರು ಕುಡಿದರೇನು ಎಂದು ನಿಂತವಳು. ಈ ಎಲ್ಲ ಹಿನ್ನೆಲೆಯಲ್ಲಿ ಈ ವಚನದಲ್ಲಿ ಒಡಮೂಡುವ ಭಾವದಿಂದ ಇಬ್ಬರ ನಿರ್ಧಾರಗಳೂ ಮಹತ್ತರವಾದವುಗಳು.
ಎರಡು ವಚನಗಳನ್ನು ಗಮನಿಸಿದರೆ ಎರಡು ತನ್ನ ಭಾಷೆ, ರಾಚನಿಕ ವಿನ್ಯಾಸ ಮತ್ತು ಕೇಳುಗನ ಮೇಲೆ ಬೀರುವ ಪರಣಾಮದಲ್ಲಿ ಭಿನ್ನವಾದ ಮಾರ್ಗಗಳನ್ನು ಹಿಡಿದವುಗಳೇ ಆಗಿವೆ. ಒಂದು ಪ್ರಶ್ನಾರ್ಥಕವಾಗಿ ನಡೆದರೆ, ಮತ್ತೊಂದು ಬದಲಾದ ಕಾಲ, ಸಮಾಜಕ್ಕೆ ಹಿಂದಿನ ಮೌಲ್ಯವೊಂದನ್ನು ಸಾರಿ ಹೇಳಬೇಕಾದಾಗ ಉಂಟಾದ ಖೇಧ, ಸಿಟ್ಟುಗಳು ಕೆಲಸ ಮಾಡಿವೆ. ‘ಅರಿವುಳ್ಳೊಡೆ’ ಎಂಬ ಒಂದು ಪದವನ್ನು ಬಳಸಿ ಅರಿವನ್ನು ಉಂಟುಮಾಡುವುದರ ಕಡೆಗೆ ತನ್ನ ಉದ್ದೇಶವನ್ನು ದಾಸಿಮ್ಮಯ್ಯ ಯಶಸ್ವಿಯಾಗಿ ಹಸ್ತಾಂತರ ಮಾಡಿಬಿಡುತ್ತಾನೆ, ಆದರೆ ಬಸವಣ್ಣನವರಲ್ಲಿ ಸಿಟ್ಟು, ದೋಷಣೆಗಳು ಬಂದಿವೆ
ಈಗ ಬಸವಣ್ಣನವರು ಪೂರ್ವಪಕ್ಷ ಮತ್ತು ಪ್ರತಿಪಕ್ಷಗಳಿಗೆ ಈ ಎರಡು ಹೆಸರುಗಳನ್ನು ಪ್ರಶ್ನಾರ್ಥಕವಾಗಿಯೇ ಬಳಸಿ ಏನನ್ನು ಸೂಚಿಸುತ್ತಿದ್ದಾರೆ ಎಂಬುದನ್ನು ಹೀಗೆ ಪಟ್ಟಿ ಮಾಡಿಯೇಬಿಡಬಹುದು.
ಆಹಾರ, ಆಚಾರ, ವಿಚಾರ, ಬದುಕಿನ ಕ್ರಮ, ಧರ್ಮ, ತತ್ವ, ಸಿದ್ಧಾಂತ, ಅಭಿರುಚಿ, ಭಾಷೆ ಹೀಗೆ ಒಡೆಯುತ್ತಲೇ ಬದುಕುವ ನಮಗೆ ಬಸವಣ್ಣನವರ ವಚನವು ಮನುಷ್ಯರು ಒಗ್ಗೂಡಲು ಸಾವಿರ ಕಾರಣಗಳಿವೆ, ಅದಕ್ಕೆ ಮೂಲ ಆಂತರ್ಯದಲ್ಲಿ ಸಹಿಸಿಕೊಳ್ಳುವ ಗುಣ ಬೇಕಿದೆ ಎಂಬುದನ್ನು ತಿಳಿಸುತ್ತದೆ.
ಹಳೆಯ ಅಂಕಣ ಹೊಸ ಓದುಗರಿಗೆ
ಆರ್.ದಿಲೀಪ್ ಕುಮಾರ್ ಬರೆಯುತ್ತಾರೆ-
ಅಕ್ಕನ ವಚನಗಳ ಅಂಕಿತ ಚೆನ್ನಮಲ್ಲಿಕಾರ್ಜುನ. ಕೆಲವು ಕಡೆ ಶ್ರೀ ಎಂದು, ಸಿರಿ ಎಂದು, ಶ್ರೀಶೈಲ ಎಂದು ಮಲ್ಲಿಕಾರ್ಜುನನೊಡನೆ ಸೇರಿಕೊಳ್ಳುತ್ತದೆ. ಬಸವ ಯುಗದ ವಚನ ಮಹಾಸಂಪುಟದಲ್ಲಿ ಇದಕ್ಕೆ ಸಾಕ್ಷಿಗಳೂ ದೊರೆಯುತ್ತವೆ. ಅಕ್ಕನ ವಚನಗಳ ವಿಶೇಷತೆಯೇ ಮಾರ್ದವತೆ. ಆ ವಚನ ಹೀಗಿದೆ
ಆರ್.ದಿಲೀಪ್ ಕುಮಾರ್
ವಚನ ವಿಶ್ಲೇಷಣೆ ಮಾಡುತ್ತಾ-
ಇಲ್ಲಿ ಬಾಯಾರಿಕೆಯಿಂದ ಬಳಲುತ್ತಿರುವ ವ್ಯಕ್ತಿಗೆ ಪಾಯಸವನ್ನು ಕೊಡುವ ಚಿತ್ರಣವನ್ನು ಕೊಟ್ಟು ದೈವವೆನ್ನುವುದು, ಆತ್ಮಜ್ಞಾನವೆನ್ನುವುದು ಬಾಯಾರಿಗೆಯನ್ನು ತೊಡೆಯುವ ಪರಿಶುದ್ಧವಾದ ನೀರಿನ ಹಾಗೆ ಎಂದು ಸೂಚಿಸುತ್ತಾನೆ
ಆರ್.ದಿಲೀಪ್ ಕುಮಾರ್
ಈ ಸತ್ತಿಗೆ ಕಾಯಕದ ಮಾರಿತಂದೆಯ ಒಟ್ಟೂ ೧೦ ವಚನಗಳು ಇದುವರೆವಿಗೂ ದೊರೆತಿವೆ. ಐಘಂಟೇಶ್ವರಲಿಂಗ ಎಂಬ ಅಂಕಿತನಾಮವನ್ನು ಇವು ಹೊಂದಿವೆ. ಅವನ ಒಂದು ಅತ್ಯದ್ಭುತ ವಚನವು ಹೀಗಿದೆ. ಇದೇ ವಚನವನ್ನು ಬಳಸಿ ಅವನ ಕಾಯಕವೆಂದು ಮಹಾಸಂಪುಟ ಸಂಪಾದಕರು ವ್ಯಾಖ್ಯಾನವನ್ನು ಮಾಡಿರುವುದು
ಈ ಮೇಲಿನ ವಚನಗಳನ್ನು ಇಟ್ಟಿರುವ ಕ್ರಮದಿಂದ ಇಬ್ಬರು ವ್ಯಕ್ತಿಗಳ ನಡುವಿನ ಸಂವಾದದೋಪಾದಿಯಲ್ಲಿ ಕಾಣುತ್ತಿದೆ. ಇದೊಂದು ಕಾಲ್ಪನಿಕ ಗ್ರಹಿಕೆಯಷ್ಟೇ. ಹೀಗೆ ನಡೆದಿರಬಹುದು ಎಂಬುದು ನನ್ನ ಗ್ರಹಿಕೆಯಷ್ಟೇ. ನಾನು ಗಮನಿಸಿರುವ ಹಾಗೆ ಈ ಸಂವಾದ ಕ್ರಮವೆಂಬುದನ್ನು ಹಲಗೆಯಾರ್ಯನ ಶೂನ್ಯಸಂಪಾದನೆ ಈ ಎರಡು ವಚನಗಳಿಗೆ ಅನುಸರಿಸಿಲ್ಲ.
ಅಂಕಣ ಬರಹ ಊರೊಳಗೆ ಪಂಥ ರಣದೊಳಗೆ ಓಟವೆ ವಚನಕಾರರಲ್ಲಿ ಎಂಟು ಜನ ಮಾರಿತಂದೆ ಹೆಸರಿನವರು ಇದ್ದಾರೆ. ಅವರಲ್ಲಿ ಅರಿವಿನ ಮಾರಿತಂದೆಯೂ ಒಬ್ಬ. ಈತ ಹಿರಿಯ ವಚನಕಾರ. ಫ. ಗು. ಹಳಕಟ್ಟಿಯವರು “ಈತನು ಬಸವೇಶ್ವರರ ಕಾಲದಲ್ಲಿ ಶಿವಾನುಭವ ಮಂಟಪದಲ್ಲಿದ್ದನೆಂದು ವೀರಶೈವರಲ್ಲಿ ಐತಿಹ್ಯವಿರುವುದಿಲ್ಲ. ಆದ್ದರಿಂದ ಬಸವೇಶ್ವರನ ಕಾಲಕ್ಕಿಂತಲೂ ಈಚಿನವನಿರಬೇಕು. ಆದರೆ ೧೫ ನೇ ಶತಮಾನದ ಅಂತ್ಯಭಾಗದಲ್ಲಿದ್ದ ಪ್ರಸಿದ್ಧಿ ಹೊಂದಿದ ಗುಬ್ಬಿಯ ಮಲುಹಣನು ಈ ಅರಿವಿನ ಮಾರಿತಂದೆಯ ಉಕ್ತಿಗಳನ್ನು ತನ್ನ ‘ಗಣಭಾಷ್ಯ ರತ್ನಮಾಲೆ’ ಯಲ್ಲಿ ಉದಾಹರಿಸಿದ್ದಾನೆ. ಅಲ್ಲದೇ ಅನೇಕ ವಚನ ಸಂಗ್ರಹಗಳಲ್ಲಿ […]
ಅಂಕಣ ಬರಹ ಕೇಡಿಲ್ಲದ ಪದ ದೊರಕೊಂಬುದು ಕಿನ್ನರಿ ಬೊಮ್ಮಯ್ಯ ವಚನಕಾರರಲ್ಲಿಯೇ ಒಂದಷ್ಟು ಸಿಟ್ಟು ಸೆಡವುಗಳುಳ್ಳ ಮನುಷ್ಯ. ನೇರ ನಡೆ – ನುಡಿಗೆ ಹೆಸರಾದಂತೆ, ಪರೀಕ್ಷಿಸಿಯೇ ಎಲ್ಲವನ್ನೂ ಎಲ್ಲರನ್ನೂ ಒಪ್ಪುವವನು. ಇದಕ್ಕೆ ಸಾಕ್ಷಿಯಾಗಿ ಶೂನ್ಯಸಂಪಾದನೆಗಳಲ್ಲಿ ಬಂದಿರುವ ಅಕ್ಕನನ್ನು ಪರೀಕ್ಷಿಸುವ ಸಂದರ್ಭವನ್ನೊಮ್ಮೆ ನೋಡಿ. ಅವಳನ್ನು ಪರೀಕ್ಷಿಸಿ ‘ಹುಲಿನೆಕ್ಕಿ ಬದುಕಿದೆನು’೧ ಎಂದು ಅಕ್ಕನನ್ನು ಹುಲಿಯೆಂದು ಕರೆದು ಗೌರವಿಸಿ ಅವಳು ಕೊಡುವ ಉತ್ತರಕ್ಕೆ ಭಯದಿಂದಲೇ ಮಾತನಾಡುತ್ತಾನೆ. ಈ ಸಂದರ್ಭವು ಶೂನ್ಯಸಂಪಾದನೆಗಳಲ್ಲಿ ಬಹುಮಹತ್ವದ ಭಾಗ. ವಚನಚಳುವಳಿಯ ಕೊನೆಯ ಹಂತದಲ್ಲಿನ ಕ್ರಾಂತಿಕಲ್ಯಾಣವಾದ ಸಂದರ್ಭದಲ್ಲಿ ನಡೆದ ಯುದ್ಧವನ್ನು […]