ರಾಮಕೃಷ್ಣ ಗುಂದಿ ಅವರ ಆತ್ಮಕಥೆ—23
ಆತ್ಮಾನುಸಂಧಾನ
ಅಂಕೋಲೆಯ ಗೋಖಲೆ ಸೆಂಟನರಿ ಕಾಲೇಜಿಗೆ…
ಅಂಕಣ ಬರಹ . ರಾಮಕೃಷ್ಣ ಗುಂದಿ ಅವರ ಆತ್ಮಕಥೆ—23 ಆತ್ಮಾನುಸಂಧಾನ ಅಂಕೋಲೆಯ ಗೋಖಲೆ ಸೆಂಟನರಿ ಕಾಲೇಜಿಗೆ… ಬಿ.ಎ. ಪದವಿ ಶಿಕ್ಷಣ ಪಡೆಯುವುದಕ್ಕಾಗಿ ಅಂಕೋಲೆಯ ಗೋಖಲೆ ಸೆಂಟನರಿ ಕಾಲೇಜಿಗೆ ಸೇರಲು ಬಯಸಿದೆ. 1966ರಲ್ಲಿ ಮಾನ್ಯ ದಿನಕರ ದೇಸಾಯಿಯವರು ತಮ್ಮ ಕೆನರಾ ವೆಲ್ಫೇರ್ ಟ್ರಸ್ಟ್ ಶಿಕ್ಷಣ ಸಂಸ್ಥೆಯ ಮೂಲಕ ಸ್ಥಾಪಿಸಿದ ಗೋಖಲೆ ಸೆಂಟನರಿ ಕಾಲೇಜು ನನ್ನಂಥ ಸಾವಿರಾರು ಬಡ ವಿದ್ಯಾರ್ಥಿ ಗಳ ಪದವಿ ಶಿಕ್ಷಣದ ಕನಸನ್ನು ನನಸಾಗಿಸಿದ್ದು ಈಗ ಇತಿಹಾಸ. ನಾನು ವಿದ್ಯಾರ್ಥಿಯಾಗಿ ಕಾಲೇಜು ಸೇರುವ ಹೊತ್ತಿಗೆ ಪದವಿ ಅಭ್ಯಾಸ […]
ನಾಡು ಮಾಸ್ಕೇರಿಯಿಂದ ನಾನು, ಹಾರು ಮಾಸ್ಕೇರಿಯ ಕುಪ್ಪಯ್ಯ ಗೌಡ, ಮುಕುಂದ ಪ್ರಭು, ಗಂಗಾವಳಿಯ ಯುಸೂಫ್, ಸದಾನಂದ ಕೂರ್ಲೆ, ಬಾವಿಕೊಡ್ಲಿನ ರಮೇಶ ಗೌಡ ಮೊದಲಾಗಿ ಆರೆಂಟು ಜನ ಸೇರಿ ದಿನವೂ ಕಾಲ್ನಡಿಗೆಯಲ್ಲೇ ಗೋಕರ್ಣಕ್ಕೆ ಹೋಗಿ ಬರುತ್ತಿದ್ದೆವು.
ಅಂಕಣ ಬರಹ . ರಾಮಕೃಷ್ಣ ಗುಂದಿ ಅವರ ಆತ್ಮಕಥೆ—21 ಆತ್ಮಾನುಸಂಧಾನ ವಿದ್ಯಾರ್ಥಿ ನಿಲಯದಲ್ಲಿ ಪ್ರಪ್ರಥಮ ರಂಗಪ್ರವೇಶ ಅಂಕೋಲೆಯ ಲಕ್ಷ್ಮೇಶ್ವರ ಭಾಗದ ವಿದ್ಯಾರ್ಥಿ ನಿಲಯದಲ್ಲಿ ಮೊದಲ ಮಳೆಗಾಲ ಕಳೆದಿತ್ತು. ನವೆಂಬರ್ ತಿಂಗಳಲ್ಲಿ ವಿದ್ಯಾರ್ಥಿ ನಿಲಯವು ಅಂಬಾರಕೊಡ್ಲ ರಸ್ತೆಗೆ ಹೊಂದಿಕೊಂಡಿದ್ದ ಎರಡಂತಸ್ತಿನ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ವಿಶಾಲವಾದ ಕಂಪೌಂಡಿನಲ್ಲಿರುವ ಕಟ್ಟಡದ ನೆಲ ಅಂತಸ್ತಿನಲ್ಲಿ ಸಾಕಷ್ಟು ವಿಶಾಲವಾದ ಕೋಣೆಗಳು, ಮೊದಲ ಮಹಡಿಯಲ್ಲಿಯೂ ಅಷ್ಟೇ ವಿಶಾಲ ಕೋಣೆಗಳು ತುಂಬಾ ಅನುಕೂಲಕರವಾಗಿದ್ದವು. ಈ ಕಟ್ಟಡದ ಮಾಲಿಕರು ಯಾರೋ ನಮಗೆ ತಿಳಿದಿರಲಿಲ್ಲ. ಆದರೆ ಬಹುಕಾಲದಿಂದ ಈ ಭವ್ಯ […]
ಅಂಕಣ ಬರಹ . ರಾಮಕೃಷ್ಣ ಗುಂದಿ ಅವರ ಆತ್ಮಕಥೆ—20 ಆತ್ಮಾನುಸಂಧಾನ ಸಂಸ್ಕೃತವನ್ನು ಓದಗೊಡದ ಸಂಸ್ಕೃತ ಮೇಷ್ಟ್ರು ನಾನು ‘ಜೈಹಿಂದ್’ ಹೈಸ್ಕೂಲು ವಿದ್ಯಾರ್ಥಿಯಾಗಿ ಪ್ರವೇಶ ಪಡೆದ ಬಳಿಕ ವಿಷಯ ಆಯ್ಕೆಯ ಸಂದರ್ಭದಲ್ಲಿ ಒಂದು ತಪ್ಪು ಮಾಡಿದೆ. ಬಾಲ್ಯದಿಂದಲೂ ಯಕ್ಷಗಾನದ ಪ್ರಭಾವಕ್ಕೆ ಪಕ್ಕಾಗುವ ವಾತಾವರಣದಲ್ಲಿ ಬೆಳೆದ ನಾನು ಹಿರಿಯ ಅರ್ಥಧಾರಿಗಳು ಅರ್ಥ ಹೇಳುವಾಗ ಮಾತಿನ ಮಧ್ಯೆ ಅಲ್ಲಲ್ಲಿ ಬಳಸುವ ಸಂಸ್ಕೃತ ಶ್ಲೋಕಗಳನ್ನು ಕೇಳುವಾಗ ಅದು ತುಂಬ ಅದ್ಭುತವೆನ್ನಿಸುತ್ತಿತ್ತು. ಇಂಥ ಸಂಸ್ಕೃತ ಉಕ್ತಿಗಳನ್ನು ಮಾತಿನ ಮಧ್ಯೆ ಬಳಸುವವರು ತುಂಬಾ ಜಾಣರು, ಬಹಳಷ್ಟು […]
ಸ್ವಾತಂತ್ರ್ಯದ ಪೂರ್ವಕಾಲದಲ್ಲಿಯೇ ಆರಂಭಗೊಂಡ ‘ಜೈಹಿಂದ್ ಎಜ್ಯುಕೇಶನ್ ಸೊಸೈಟಿ’ ಎಂಬ ಶಿಕ್ಷಣ ಸಂಸ್ಥೆಯು ೧೮೯೬ ರಲ್ಲಿ ಸ್ಥಾಪಿಸಿದ ‘ಎಡ್ವರ್ಡ್ ಹೈಸ್ಕೂಲು’ ಗುಣಮಟ್ಟದ ಶಿಕ್ಷಣಕ್ಕೆ ಜಿಲ್ಲೆಯಾದ್ಯಂತ ಹೆಸರುವಾಸಿಯಾಗಿತ್ತು
ಅಂಕಣ ಬರಹ . ರಾಮಕೃಷ್ಣ ಗುಂದಿ ಅವರ ಆತ್ಮಕಥೆ—18 ಆತ್ಮಾನುಸಂಧಾನ ಆಡುಂಬೊಲದಿಂದ ಅನ್ನದೇಗುಲಕ್ಕೆ! ನಾಡು ಮಾಸ್ಕೇರಿಯಲ್ಲಿ ಕಳೆದ ಪ್ರಾಥಮಿಕ ಶಿಕ್ಷಣದ ಕಾಲಾವಧಿ ಹಲವು ಬಗೆಯ ಜೀವನಾನುಭವಗಳಿಗೆ ಕಾರಣವಾಯಿತು. ಕೇರಿಯ ಯಾವ ಮನೆಯಲ್ಲಿ ಯಾರೂ ಹೊಟ್ಟೆ ತುಂಬ ಉಂಡೆವೆಂಬ ಸಂತೃಪ್ತಿಯನ್ನು ಕಾಣದಿದ್ದರೂ ಅಪರಿಮಿತವಾದ ಜೀವನೋತ್ಸಾಹಕ್ಕೆ ಕೊರತೆಯೆಂಬುದೇ ಇರಲಿಲ್ಲ. ಅಸ್ಪ್ರಶ್ಯತೆಯ ಬಗ್ಗಡವೊಂದು ಜಾತಿಗೇ ಅಂಟಿಕೊಂಡಿದ್ದರೂ ಅದನ್ನು ಅಷ್ಟೊಂದು ಗಂಭೀರವಾಗಿ ನಾವೆಂದೂ ಪರಿಗಣಿಸಲಿಲ್ಲ. ಊರಿನ ದೇವಾಲಯಗಳಿಗೆ ಹೋದರೆ ಕಂಪೌಂಡಿನ ಆಚೆಯೇ ನಮ್ಮ ನೆಲೆಯೆಂಬ ಅರಿವು ಮಕ್ಕಳಾದ ನಮಗೂ ಇತ್ತು. ಚಹಾದಂಗಡಿಗಳಲ್ಲಿ ಬೇಲಿಯ […]
ನಮ್ಮೂರಿನಲ್ಲಿ ಜಟ್ಟಿ ಮಾಣಿ ಆಗೇರ ಎಂಬಾತ ಇಂಥ ಎಲ್ಲ ಕೆಲಸದಲ್ಲಿ ಕುಶಲ ಕರ್ಮಿಯಾಗಿದ್ದು ಹಲವು ಬಗೆಯಲ್ಲಿ ನನ್ನ ಮೇಲೆ ಪ್ರಭಾವ ಬೀರಿದ ಹಿರಿಯರಲ್ಲಿ ಬಹಳ ಮುಖ್ಯ ವ್ಯಕ್ತಿಯಾಗಿದ್ದ. ಈತ ಉಪ್ಪಿನಾಗರದಲ್ಲಿ ಉಪ್ಪು ತೆಗೆಯುವ ಕೆಲಸದಲ್ಲಿಯೂ ಅತ್ಯಂತ ನಿಪುಣನಾಗಿದ್ದರೂ ಅದೇಕೋ ಆಗರದ ಕೆಲಸದಲ್ಲಿ ಬಹಳಕಾಲ ನಿಲ್ಲಲಿಲ್ಲ
ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ-16 ಆತ್ಮಾನುಸಂಧಾನ ಗಂಗಾವಳಿಯಲ್ಲಿ ಮೂಲ್ಕಿ ಓದಿದ ದಿನಗಳು ನಮ್ಮ ಊರಿನಲ್ಲಿ ಪೂರ್ಣ ಪ್ರಾಥಮಿಕ ಶಾಲೆ ಇರಲಿಲ್ಲ. ಮುಂದಿನ ತರಗತಿಗಳಿಗಾಗಿ ಗಂಗಾವಳಿ ಭಾಗದ “ಜೋಗಣೆ ಗುಡ್ಡ” ಎಂಬಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಗೆ ಸೇರಬೇಕಾಯಿತು. ಹಾರು ಮಾಸ್ಕೇರಿ ಶಾಲೆಯ ಕುಪ್ಪಯ್ಯ ಗೌಡ, ಗಣಪತಿ ಗೌಡ ಮುಂತಾದವರೊಡನೆ ಮಾಸ್ಕೇರಿಯ ದೇವರಾಯ ಇತ್ಯಾದಿ ಗೆಳೆಯರೊಂದಿಗೆ ಗಂಗಾವಳಿಯ ಶಾಲೆಗೆ ಸೇರಿಕೊಂಡೆವು. ಅಲ್ಲಿ ಗಾಬಿತ ಸಮಾಜದ ರಾಧಾಕೃಷ್ಣ ಎಂಬುವವರು ಬಹುಶಃ ಮುಖ್ಯಾಧ್ಯಾಪಕರಾಗಿದ್ದರು ಎಂದು ನೆನಪು. ತುಂಬ ಶಾಂತ […]
ಇನ್ನೊಂದು ‘ಹಕ್ಕಿ-ಕಂಬಳ’. ನಮ್ಮೂರಿನ ಗದ್ದೆ ಬಯಲಿನಲ್ಲಿರುವ ಕೆರೆದಂಡೆ, ಹಳ್ಳದ ದಂಡೆಗಳ ಮೇಲೆ ಬೆಳೆದು ನಿಂತ ಮುಳ್ಳು ಪೊದೆಗಳಲ್ಲಿ, ಕೇದಗೆ ಹಿಂಡುಗಳಲ್ಲಿ ‘ಹುಂಡು ಕೋಳಿ’ ಎಂಬ ಹಕ್ಕಿಗಳ ಗುಂಪು ಸದಾ ನೆಲೆಸಿರುತ್ತಿದ್ದವು.