ದಾರಾವಾಹಿ ಆವರ್ತನ ಅದ್ಯಾಯ-16 ಈಶ್ವರಪುರ ಪೇಟೆಯ ಸಿಟಿ ಕೋ-ಆಪರೇಟಿವ್ ಬ್ಯಾಂಕಿನಲ್ಲಿ ಚಿನ್ನವನ್ನು ಅಡವಿಟ್ಟು ಹಣ ಪಡೆದ ಗೋಪಾಲ ಸೀದಾ ಶಂಕರನ ಸೈಟಿಗೆ ಬಂದು ನಿಂತ. ಶಂಕರ ತನ್ನ ಮೇಸ್ತ್ರಿ ಸುಬ್ರಾಯನೊಡನೆ ಕಟ್ಟಡ ಕಾಮಗಾರಿಯ ಮಾತುಕತೆಯಲ್ಲಿದ್ದ. ಸ್ವಲ್ಪಹೊತ್ತಿನಲ್ಲಿ ಮೇಸ್ತ್ರಿಯನ್ನೂ ಕೂಲಿಯಾಳುಗಳನ್ನೂ ಕೆಲಸಕ್ಕೆ ತೊಡಗಿಸಿ ಗೋಪಾಲನತ್ತ ಬಂದ. ಗೋಪಾಲ, ಶಂಕರ ಹೇಳಿದ್ದಷ್ಟು ಹಣವನ್ನು ಕೊಟ್ಟು ಗುಜಿರಿಯನ್ನು ಕೊಂಡ. ಬಳಿಕ ತಾನು ಹೇಳಿದ ಜಾಗದ ವಿಷಯವಾಗಿ ಅವನೇನಾದರೂ ಮಾತಾಡುತ್ತಾನೋ ಎಂದು ಕಾದ. ಆದರೆ ಶಂಕರ ಬೇಕೆಂದೇ ಆ ವಿಷಯವನ್ನು ಮರೆತಂತೆ ನಟಿಸಿದ. […]
ಸೊಪ್ಪು ಹೂವೇ….
ಇತ್ತೀಚಿನ ದಿನಗಳಲ್ಲಿ ಪಕ್ಕದ ಹಳ್ಳಿಯಿಂದ ಪ್ರತಿದಿನ ಬರುವ ಸೊಪ್ಪಮ್ಮನೂ ಇಲ್ಲ. ಹೂವಮ್ಮನೂ ಇಲ್ಲ. ಅವರಿಗೆ ಬರುವ ವಾಹನ ವ್ಯವಸ್ಥೆ ಇಲ್ಲದಿರುವುದರಿಂದ ವ್ಯಾಪಾರವೂ ಇಲ್ಲ. ಮನೆ ಬಳಿ ತಲುಪಿದರೂ ಯಾರೂ ಹತ್ತಿರ ಹೋಗಲಾಗದೆ ಒಂದು ರೀತಿ ಅನುಮಾನ. ದೂರದಿಂದಲೇ ಬೇಡವೆಂದು ಕಳಿಸುವ ಅನಿವಾರ್ಯ ಪರಿಸ್ಥಿತಿ..ವ್ಯಾಪಾರವಿಲ್ಲದ ಬದುಕಿನ ಸ್ಥಿತಿಗೆ ಹೂವಮ್ಮಂದಿರು ಉತ್ತರವಿಲ್ಲದೆ ಆಕಾಶ ನೋಡುವಂತಾಗಿದೆ
ಪ್ರೀತಿಗೆ ಒಂದು ಮಿತಿ ಇದೆ ಸ್ನೇಹಕೆ ಎಲ್ಲಿದೆ??
ಅಂದ ಹಾಗೆ ನನ್ನ ಅಣ್ಣನಂತಹ ಗೆಳೆಯನ ಪೂರ್ತಿ ಹೆಸರು ಡಾ. ಶೇಕ್ ಮೊಯರಫ್ ಅಲಿ.. ಆ ಮುದ್ದಾದ ರೂಪದರ್ಶಿಯ ಹೆಸರು ಅಫ್ರಿನ್ ಹಾಗು ಅವಳ ಪುಟ್ಟ ಅಕ್ಕಂದಿರ ಹೆಸರು ಜಾಸ್ಮಿನ್ ಮತ್ತು ನಜ್ನಿನ್.. ಎಲ್ಲರಿಗೂ ರಂಜಾನಿನ ಶುಭಾಶಯಗಳು..
ದಿಲ್ ಢೂಂಡ್ತಾ ಹೈ…
ಉಪವಾಸ ಒಂದು ತಪಸ್ಸು
ಲೇಖನ ಉಪವಾಸ ಒಂದು ತಪಸ್ಸು ಆಸೀಫಾ ಹಬ್ಬಗಳ ಆಚರಣೆ ತನ್ನದೇ ಆದ ಮಹತ್ವ ಹಾಗೂ ವೈಶಿಷ್ಟ್ಯತೆಯನ್ನು ಹೊಂದಿದ್ದು ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತದೆ.ಅದರಂತೆ ರಂಜಾನ್ ಮುಸ್ಲಿಮರಿಗೆ ಪವಿತ್ರ ಹಾಗೂ ಪುಣ್ಯ ಸಂಪಾದಿಸಿಕೊಳ್ಳುವ ತಿಂಗಳಾಗಿದೆ.ಮೂವತ್ತು ದಿನಗಳು ಉಪವಾಸಾಚಾರಣೆ,ಖುರಾನ್ ಪಠಣ , ದಾನಧರ್ಮ ಹಾಗೂ ಸನ್ನಡತೆ ಈ ತಿಂಗಳ ವಿಶಿಷ್ಟತೆಗಳು. ಸೂರ್ಯೋದಯದ ಮೊದಲು ಆಹಾರ ಸೇವನೆ ಅಂದರೆ ಸೆಹರಿ ಮಾಡಲಾಗುವುದು, ಸೂರ್ಯೋದಯದ ನಂತರ ಉಪವಾಸ ಬಿಡುವುದು ಅಂದರೆ ಇಫ್ತಾರ್ ಮಾಡಲಾಗುವುದು. . ದಿನವೆಲ್ಲಾ ಖುರಾನ್ ಓದುವುದು,ಜಪಮಾಡುವುದು, ನಮಾಜ್ ಮಾಡುವುದು, ಕೈಲಾದಷ್ಟು […]
ಹಾಲು ಎಲ್ಲಿ ಕೊಳ್ಳುವುದು?
ಅಪರೂಪಕ್ಕೊಮ್ಮೆ ಹಸುಕರು ಹಾಕಿದಾಗ ಗಿಣ್ಣು ಹಾಲು ಉಚಿತವಾಗಿ ವರ್ತನೆಯವರು ಕೊಡುತ್ತಿದ್ದರು.ಮನೆಯ ಕ್ಯಾಲೆಂಡರ್ ನಲ್ಲಿ ನೆಂಟರು ಬಂದಾಗ ಹೆಚ್ಚಿಗೆ ತೊಗೊಂಡ ಹಾಲಿನ ಲೆಕ್ಕ ಗುರುತಿಸುವ ಕೆಲಸ ಮಕ್ಕಳಿಗೆ.ತಿಂಗಳ ಕೊನೆಗೆ ಲೆಕ್ಕ ಹಾಕಿ ಚುಕ್ತಾ ಮಾಡಿದರಾಯಿತು.
ತನ್ನಿಂದಲೇ ಜೀವ-ಜೀವನ ಸಾಗಿಸುವವರು ತಪ್ಪು ಮಾಡಿದಾಗ ತಿದ್ದಿಕೊಳ್ಳದಿದ್ದರೆ ಅವನ ಮಾತು ಕೇಳದಿದ್ದರೆ ಮನುಷ್ಯ ಯಾವ ಕೆಳಹಂತಕ್ಕಾದರೂ ಪಿಶಾಚಿಯಾದರೂ ಸರಿ ಹಿಂಜರಿಯಲ್ಲ ಅಂತ ಸಾರಾಳ ಕಥೆಯು ಒಂದು ಪಾಠವಾಗಲಿದೆ ಎಂದರೂ ತಪ್ಪಾಗಲಾರದು.
ಬೆಂಗಾಡಾದ ಬದುಕಿನ ಕೊರಡು ಮತ್ತೆ ಕೊನರುತ್ತೆ
ಜೀವನದಿ ಶಾಂತವಾಗಿ ಹರಿಯುತ್ತಿದೆಯೆಂದು ನಾವಂದುಕೊಳ್ಳುವಾಗ ದೊಡ್ಡ ಸುಳಿ ಬಂದು ದೋಣಿ ಅಲ್ಲಾಡಿಸಿ ಬಿಡುತ್ತದೆ. ಬದುಕಿನ ಬಂಡಿ ನಿರಾಳವಾಗಿ ಸಾಗುತ್ತದೆ ಎನ್ನುತ್ತಿರುವಾಗಲೇ ವಿಧಿಗೆ ಅದನ್ನು ಸಹಿಸಲಾಗುವುದಿಲ್ಲ.ಅಂಥ ಪರಿಸ್ಥಿತಿಯಲ್ಲಿ ಇಕ್ಕಳದಲ್ಲಿ ಸಿಕ್ಕಂತೆ ಒದ್ದಾಡುವಂತಾಗುತ್ತದೆ.
ಸಾಕು ಪ್ರಾಣಿಗಳು
ಮಕ್ಕಳ ಕಥೆ ಸಾಕು ಪ್ರಾಣಿಗಳು ಡಾ. ಗುರುಸಿದ್ಧಯ್ಯಾ ಸ್ವಾಮಿ “ಅಪ್ಪ, ನಾನು ನಾಳೆಯಿಂದ ಶಾಲೆಗೆ ಹೋಗುವುದಿಲ್ಲ….” ಎಂದು ಅನಿಕೇತ ಒಂದು ಮೂಲೆಯಲ್ಲಿ ಹೋಗಿ ಕುಳಿತು ಬಿಟ್ಟ.“ಯಾಕೆ ಮರಿ, ಏನಾಯಿತು?” ಎಂದು ಪ್ರಕಾಶ ಅವರು ಅನಿಕೇತನನ್ನು ತಮ್ಮ ಬಳಿ ಕರೆದುಕೊಂಡು ಒಂದು ಮುತ್ತು ಕೊಟ್ಟು ತಲೆ ನೇವರಿಸುತ್ತ ಕೇಳಿದರು.“ಅಪ್ಪ, ಇಂದು ನಮ್ಮ ಶಿಕ್ಷಕರು ನಾನು ಸರಿಯಾಗಿ ಬರೆದ ಉತ್ತರಕ್ಕೆ ಸೊನ್ನೆ ಗುಣ ಕೊಟ್ಟಿದ್ದಾರೆ.”“ಹೌದಾ…? ಯಾವ ಪ್ರಶ್ನೆ ಅದು?”“ಸಾಕು ಪ್ರಾಣಿಗಳ ಹೆಸರು ಬರೆಯಿರಿ ಎಂಬ ಪ್ರಶ್ನೆ ಇತ್ತು.”“ಸರಿ, ಅದಕ್ಕೆ ನೀ […]
ಬನ್ನಿ ಮನೆಗೆ ಹೋಗೋಣ. . .
ವಿಶೇಷ ಲೇಖನ ಬನ್ನಿ ಮನೆಗೆ ಹೋಗೋಣ. . . ಅಂಜಲಿ ರಾಮಣ್ಣ ಬಡತನ ಮತ್ತು ಒಳ್ಳೆಯ ವಿದ್ಯಾಭ್ಯಾಸ ಸಿಗುತ್ತದೆ ಎನ್ನುವ ಕಾರಣಗಳನ್ನು ನೀಡಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ತಾಯ್ತಂದೆಯರು ತಮ್ಮ ಮಕ್ಕಳನ್ನು ಬೆಂಗಳೂರಿನ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ, NGOಗಳಲ್ಲಿ ದಾಖಲಿಸಿರುತ್ತಾರೆ. ಈ ಕಾರಣಗಳು ಒಂದು ಹಂತದವರೆಗೂ ನಿಜವೇ ಆದರೂ ಹೀಗೆ ಮಕ್ಕಳನ್ನು ದೂರ ಮಾಡಿರುವ ತಂದೆ ತಾಯಿಯರಲ್ಲಿ ತಮ್ಮ ಜವಾಬ್ದಾರಿಯನ್ನು ವರ್ಗಾವಣೆ ಮಾಡುವ ಮನೋಭಾವವೇ ಎದ್ದು ಕಾಣುತ್ತದೆ. ಅವರುಗಳ ಉಡಾಫೆತನವನ್ನು ವ್ಯಾಪಾರೀಕರಣಗೊಳಿಸಿ, ಸಮಾಜ ಸೇವೆ ಎನ್ನುವ […]