ಲೇಖನ

ದಿಲ್ ಢೂಂಡ್‌ತಾ ಹೈ…..!!!

ಶೀಲಾ ಭಂಡಾರ್ಕರ್

जी ढ़ूंढता है फिर वही फ़ुर्सत के रात दिन

बैठे रहे तसव्वुरे जानाँ किये हुये

– ग़ालिब

ಪ್ರೇಯಸಿಯ ಕಲ್ಪನೆಯಲ್ಲೇ ಮುಳುಗಿ ಕೂತಿದ್ದ ಕವಿಯ ಮನಸು ಮತ್ತೊಮ್ಮೆ ಅಂತಹದೇ ಹಗಲು ರಾತ್ರಿಗಳ ಅವಕಾಶವನ್ನು ಹುಡುಕುತಿದೆ.

ಈ ಶೇರ್ ಓದಿದ ಕೂಡಲೇ ಓದುಗರಿಗೆ ಅನಿಸುವುದು.

“ತಪ್ಪಿದೆಯಲ್ಲ ಇದರಲ್ಲಿ..?.

ಇದು ದಿಲ್ ಡೂಂಢ್‍ತಾ ಹೈ ಆಗಬೇಕಲ್ಲ!.

ಆದರಿದು ಮಿರ್ಜ಼ಾ ಗಾಲಿಬರ  ಹದಿನೇಳು ಅಶಾರ್‌ಗಳ ಒಂದು ಗಜ಼ಲ್.

ಮುದ್ದತ್ ಹುಯೀ ಹೈ ಯಾರ್ ಕೊ ಮೆಹಮಾನ್ ಕಿಯೇ ಹುಯೆ.

ಅನ್ನುವ ಗಜ಼ಲ್‍ನ ಒಂದು ಶೇರ್.

1975 ರಲ್ಲಿ ಮೌಸಮ್ ಅನ್ನುವ ಚಿತ್ರಕ್ಕೆ ಕವಿ ಗುಲ್ಜಾರ್ ಅವರು ಈ ಒಂದು ಶೇರ್‌ನ್ನು ಒಂದು ಶಬ್ದ ಬದಲಾಯಿಸಿ ಬರೆದ ಗೀತೆ.

ದಿಲ್ ಢೂಂಢ್‌ತಾ ಹೈ.

ಎಂತಹ ಸುಂದರ ಗೀತೆ ರಚನೆಯಾಯಿತು.

ಮೌಸಮ್ ಅಂದ್ರೆ ಋತು. ಋತುಗಳು ಬದಲಾದ ಹಾಗೆ ಪ್ರಕೃತಿಯ ಚಿತ್ರಗಳೂ ಬದಲಾಗುತ್ತವೆ.

ಹಾಗೆಯೇ ಈ ಚಿತ್ರದಲ್ಲಿ ಒಂದೇ ಗೀತೆಯನ್ನು ಎರಡು ರಾಗಗಳಲ್ಲಿ ಹಾಡಿದ್ದಾರೆ.

ಬಹಳ ಸುಂದರ ಅರ್ಥ ಕೊಡುವ ಗುಲ್ಜಾರರ ಗೀತೆಯ ಪ್ರಾರಂಭ ಗಾಲೀಬರ ಶೇರ್‌ನಿಂದಾದರೂ ಉಳಿದ ಸಾಲುಗಳು ಅಷ್ಟೇ ಅದ್ಭುತವಾದ ಅನುಭೂತಿಯನ್ನು ಕೊಡುವಂಥವು.

ಮುಂದಿನ ಚರಣಗಳು ಹೀಗಿವೆ ನೋಡಿ.

जाड़ों की नर्म धूप और आँगन में लेट कर

आँखों पे खींचकर तेरे आँचल के साए को

औंधे पड़े रहे कभी करवट लिये हुए

ಚಳಿಗಾಲದ ಎಳೆಬಿಸಿಲಿಗೆ ಮೈಯೊಡ್ಡಿ ಅಂಗಳದಲ್ಲಿ ಮಲಗಿದ್ದಾಗ.

ಕಣ್ಣುಗಳಿಗಡ್ಡವಾಗಿ ನಿನ್ನ ಸೆರಗಿನ ನೆರಳನ್ನು ಎಳೆಯುತ್ತಾ..

ಮತ್ತೆ ಮಗ್ಗುಲು ಬದಲಾಯಿಸುತ್ತಾ.

ದಿಲ್ ಢೂಂಡ್‌ತಾ ಹೈ….

या गरमियों की रात जो पुरवाईयाँ चलें 

ठंडी सफ़ेद चादरों पे जागें देर तक

तारों को देखते रहें छत पर पड़े हुए

ಹಾಗೇ ಬೇಸಿಗೆಯಲ್ಲೊಂದು ರಾತ್ರಿ

ತಂಗಾಳಿ ಬೀಸುತ್ತಿದ್ದಾಗ,

ತಣ್ಣನೆಯ ಬಿಳಿ ಹೊದಿಕೆಯೊಳಗೆ

ತಡರಾತ್ರಿಯವರೆಗೆ ಎಚ್ಚರವಿದ್ದು,

ನಕ್ಷತ್ರಗಳನ್ನು ನೋಡುತ್ತಾ ಮಲಗಿದ್ದಾಗ ….

ದಿಲ್ ಢೂಂಡ್‌ತಾ ಹೈ….

बर्फ़ीली सर्दियों में किसी भी पहाड़ पर

वादी में गूँजती हुई खामोशियाँ सुनें

आँखों में भीगे भीगे से लम्हे लिये हुए ..

ಮಂಜು ಸುರಿಯುವ ಚಳಿಯಲ್ಲಿ

ಯಾವುದಾದರೊಂದು ಬೆಟ್ಟದ ಮೇಲೆ.

ಪ್ರಪಾತದೊಳಗಿನಿಂದ ಪ್ರತಿಧ್ವನಿಸುವ ಮೌನವನ್ನು ಆಲಿಸುತ್ತಾ..

ಕಣ್ಣುಗಳಲ್ಲಿ ಒದ್ದೆ ಒದ್ದೆ ಮಧುರ ನೆನಪುಗಳನ್ನು ತುಂಬಿಕೊಂಡು..

ದಿಲ್ ಢೂಂಡ್‌ತಾ ಹೈ…..!!!

ಮದನ್ ಮೋಹನ್ ಸಂಗೀತ ನೀಡಿದ್ದರು. ಭೂಪಿಂದರ್ ಮತ್ತು ಲತಾ ಮಂಗೇಶ್ಕರ್ ಹಾಡಿದ್ದರು ಈ ಗೀತೆಯನ್ನು.

ಅನುಭವಿಸಿಕೊಂಡು ಕೇಳಬೇಕು ಇಂತಹ ಗೀತೆಗಳನ್ನು.

ಈ ಚಿತ್ರದ ಅಭಿನಯಕ್ಕಾಗಿ ಶರ್ಮಿಳಾ ಟಾಗೋರಳಿಗೆ ರಜತ ಕಮಲ ಪ್ರಶಸ್ತಿ ಬಂದಿತ್ತು.

ಮೌಸಮ್ ಚಿತ್ರವನ್ನು ತಮಿಳು ಭಾಷೆಯಲ್ಲಿ ಶಿವಾಜಿ ಗಣೇಶನ್ ಅವರು “ವಸಂದತಿಲ್ ಒರು ನಾಳ್” ಎಂಬ ಹೆಸರಿನಿಂದ ನಿರ್ಮಿಸಿದ್ದರು..

**********************

Leave a Reply

Back To Top